Advertisement

ಹೆಚ್ಚುತ್ತಿದೆ ಜಾಗತಿಕ ತಾಪಮಾನ

10:16 AM Feb 07, 2020 | mahesh |

ಜಾಗತಿಕ ತಾಪಮಾನ ಏರಿಕೆಯು ಪರಿಸರದ ಮೇಲೆ ಮಾರಕ ಪರಿಣಾಮವನ್ನು ಉಂಟು ಮಾಡುತ್ತಿದೆ. ಅಲ್ಲದೇ ಇದರಿಂದ ಭಾರೀ ಪ್ರಮಾಣದ ಮಂಜುಗಡ್ಡೆಗಳು ಕರುಗುವಿಕೆ, ಭೂಕುಸಿತ, ಭೂ ಕಂಪನದಂತಹ ಸಮಸ್ಯೆಗಳು ಎದುರಾಗುತ್ತವೆ. ಇದೀಗ ಜಾಗತಿಕ ತಾಪಮಾನ ಏರಿಕೆಯು ಜಗತ್ತಿನಲ್ಲಿ ಅನೇಕ ರೀತಿಯ ಅನಾಹುತ ಸಂಭವಿಸಲು ಕಾರಣವಾಗುತ್ತಿದೆ.

Advertisement

ಏನಾಗುತ್ತಿದೆ?
ಮಂಜುಗಡ್ಡೆ ಕರುಗುವುದಷ್ಟೇಅಲ್ಲದೇ ಸುನಾಮಿಗೂ ಇದು ಕಾರಣವಾ ಗುತ್ತದೆ. ಸಮುದ್ರ ತಟದಲ್ಲಿ ಭಾರೀ ಪ್ರಮಾಣದ ರಕ್ಕಸ ಅಲೆಗಳು ಏಳಲು ಕಾರಣ ವಾಗುತ್ತದೆ. ಭೂ ಕಂಪನಕ್ಕೆ ಜಾಗತಿಕ ತಾಪಮಾನವು ಪರೋಕ್ಷ ಕಾರಣ ಎಂದು ವರದಿಯೊಂದು ಹೇಳಿದೆ.

ಜಿಡಿಪಿಗೆ ಮಾರಕ
ಹೆಚ್ಚುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಗಳು 2050ರ ವೇಳೆಗೆ ಭಾರತದ ಜಿಡಿಪಿ ಬೆಳವಣಿಗೆಯ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮಗಳನ್ನು ಬೀರಲಿವೆ. ಅಪೌಷ್ಟಿಕತೆ ಮಟ್ಟವನ್ನು ಮತ್ತಷ್ಟು ಹೆಚ್ಚಿಸಲ್ಲಿದ್ದು, ಆರೋಗ್ಯ ಮತ್ತು ಕೃಷಿ ಮೇಲೆ ಕೂಡ ಪರಿ ಣಾಮ ಬೀರಲಿದೆ ಎಂದು ಲ್ಯಾನ್ಸೆಟ್‌ ಕೌಂಟ್‌ಡೌನ್‌ ವರದಿ ತಿಳಿಸಿದೆ.

ಶೇ. 68.2
ದೇಶದಲ್ಲಿ ಈಗಾಗಲೇ 5 ವರ್ಷದೊಳ‌ಗಿನ ಶೇ.68.2 ರಷ್ಟು ಮಕ್ಕಳ ಸಾವಿಗೆ ಅಪೌಷ್ಟಿಕತೆ ಪ್ರಮುಖ ಕಾರಣವಾಗಿದೆ.

ಬೆಳೆಗಳಿಗೂ ಹಾನಿ
ಗೋಧಿ, ಭತ್ತ, ಮೆಕ್ಕೆಜೋಳ ಮತ್ತು ಸೋಯಾಬೀನ್‌ ಇಳುವರಿ ಜಾಗತಿಕವಾಗಿ ಕುಸಿತ ಕಂಡಿದ್ದು, ಹವಾ ಮಾನ ವೈಪರೀತ್ಯದಿಂದಾಗಿ ಕ್ರಮವಾಗಿ ಶೇ. 6, ಶೇ. 3.2, ಶೇ. 7.4 ಮತ್ತು ಶೇ.3.1ರಷ್ಟು ಕಡಿಮೆಯಾಗುತ್ತಿದೆ.

Advertisement

ಶೇ.2ರಷ್ಟು ಕಡಿಮೆ
ವರದಿ ಪ್ರಕಾರ 1960ರ ದಶಕದ ಅನಂತರ ದಿನಗಳಲ್ಲಿ ದೇಶದಲ್ಲಿ ಮೆಕ್ಕೆಜೋಳ ಮತ್ತು ಅಕ್ಕಿಯ ಸರಾಸರಿ ಇಳುವರಿ ಸಾಮರ್ಥ್ಯವು ಶೇ.2 ರಷ್ಟು ಕಡಿಮೆಯಾಗಿದೆ.

ಹವಾಮಾನ ಏರಿಳಿತವೇ ಕಾರಣ
1980ರ ದಶಕದ ಅನಂತರ ದೇಶದಲ್ಲಿ ವರ್ಷಕ್ಕೆ ಕಾಲರಾದ ತೀವ್ರ ತೆ ಶೇ.3 ಎಷ್ಟು ಏರಿಕೆಯಾಗುತ್ತಿದ್ದು, ವೈಬ್ರಿಯೊ ಬ್ಯಾಕ್ಟೀರಿಯಾದ ಮೇಲೆ ಹವಾಮಾನ ಏರಿಳಿತ ಪರಿಣಾಮ ಬೀರುತ್ತಿದೆ. ಸಮುದ್ರದ ಮೇಲ್ಮೆ„ ತಾಪಮಾನ ಹೆಚ್ಚಾಗುತ್ತಿರುವ ಕಾರಣ ವಿವಿಧ ಬ್ಯಾಕ್ಟೀರಿಯಾಗಳಿಂದ ಹರಡುವ ಡೆಂಗ್ಯೂ ಹೆಚ್ಚಳಕ್ಕೆ ಕಾರಣವಾಗಿದೆ.

ಕಾಳ್ಗಿಚ್ಚಿನ ಅಪಾಯ
ಇನ್ನೂ ಇಪ್ಪತ್ತೂಂದು ದಶಲಕ್ಷ ಭಾರತೀಯರು ಕಾಳ್ಗಿಚ್ಚಿನಂತಹ ಪ್ರಕೃತಿ ವಿಕೋಪಕ್ಕೆ ಗುರಿಯಾಗಿದ್ದು, 152 ದೇಶಗಳಲ್ಲಿ ಅತಿ ಹೆಚ್ಚು ಕಾಳ್ಗಿಚ್ಚು ಪ್ರಕರಣಗಳು ದಾಖಲಾಗಿವೆ. ಇದರಿಂದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದ್ದು, ಉಷ್ಣ ಗಾಯಗಳು ಮತ್ತು ದೀರ್ಘ‌ಕಾಲದ ಉಸಿರಾಟದ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ.

ಮಾಲಿನ್ಯ ಅಧಿಕ
ವಾಯುಮಾಲಿನ್ಯ ಮಟ್ಟ (ಪಿಎಂ 2.5) 2016ರಲ್ಲಿ ದೇಶದಲ್ಲಿ 5,29,500ಕ್ಕೂ ಹೆಚ್ಚು ಅಕಾಲಿಕ ಮರಣಗಳಿಗೆ ಕಾರಣವಾಗಿತ್ತು. ಸುಮಾರು 97,400ಕ್ಕೂ ಹೆಚ್ಚು ಜನರು ಕಲ್ಲಿದ್ದಲಿನಿಂದ ಸಂಭವಿಸಿದ ವಾಯು ಮಾಲಿನ್ಯದಿಂದ ಮರಣ ಹೊಂದಿದ್ದಾರೆ ಎಂದು ವರದಿ ಹೇಳಿತ್ತು.

ಕೆಲಸದ ಸಾಮರ್ಥ್ಯಕ್ಕೆ ಹಾನಿ
ಉಷ್ಣತೆ 220 ಕೋಟಿ ಹೆಚ್ಚುವರಿ ಗಂಟೆಗಳ ಕೆಲಸ ಸಾಮರ್ಥ್ಯವನ್ನು ಕುಂದಿಸಲಿದ್ದು ಶೇ.0. 85ರಷ್ಟು ಉತ್ಪಾದನಾ ನಷ್ಟವಾಗಲಿದೆ.

ಸಮುದ್ರ ತಾಪಮಾನ ಏರಿಕೆ
ಸಂಶೋಧನೆಯ ವರದಿ ಹವಾಮಾನ ಬದಲಾವಣೆಯಿಂದ ಮೀನುಗಾರಿಕೆ ಮತ್ತು ಜಲಚರ ಜೀವಿಗಳಿಗೂ ಅಪಾಯ ವಿದೆ ಎಂಬ ಅಂಶವನ್ನು ತಿಳಿಸಿದ್ದು, ಸಮುದ್ರ-ಮೇಲ್ಮೆ„ ತಾಪಮಾನ ಏರಿಕೆ, ಹವಾಮಾನ ತೀವ್ರ ಏರಿಳಿತ, ಸಮುದ್ರಮಟ್ಟ ಏರಿಕೆ, ಸಾಗರ ಆಮ್ಲಿಕರಣದಂತಹ ಹವಾಮಾನ ವೈಪರೀತ್ಯಗಳು ಜಲಚರ ಜೀವಿಗಳಿಗೆ ಅಪಾಯವನ್ನುಂಟು ಮಾಡುತ್ತಿದೆ.

1ಮೀಟರ್‌ ಏರಿಕೆ
ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಸಂಸ್ಥೆ ಈ ಕುರಿತು ವರದಿ ನೀಡಿತ್ತು. ಸಮುದ್ರ ಮಟ್ಟವು ಹಿಂದೆಂದಿಗಿಂತಲೂ ತೀವ್ರವಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮ ಕರಗುವ ಪ್ರಮಾಣ ಏರಿಕೆಯಾಗಿದ್ದು, 2,100 ರ ವೇಳೆಗೆ ಸಮುದ್ರ ಮಟ್ಟದಲ್ಲಿ 1 ಮೀಟರ್‌ನಷ್ಟು ಏರಿಕೆಯಾಗಲಿದೆ. ಇದರಿಂದ 1.4 ಬಿಲಿಯನ್‌ (140 ಕೋಟಿ) ಜನತೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next