ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುಹೆಚ್ಚಿದ್ದಂತೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದದೂರುಗಳು ಸಾಕಷ್ಟು ಕೇಳಿ ಬರುತ್ತಿವೆ. ಕದ್ದು ಮುಚ್ಚಿ20 ಬಾಲ್ಯ ವಿವಾಹ ನಡೆಸಲು ಪ್ರಯತ್ನಿಸಲಾಗಿದೆ ಎಂಬ ದೂರು ಕೇಳಿಬಂದಿದ್ದು, ಅದರಲ್ಲಿ ಬಾಲಕಿಯೊಬ್ಬರ ವಿವಾಹ ನಡೆದು ಹೋಗಿದೆ.
ಜಿಲ್ಲೆಯ ಆಂಧ್ರ ಗಡಿಗೆ ಹೊಂದಿಕೊಂಡಬಾಗೇಪಲ್ಲಿ, ಗೌರಿಬಿದನೂರು ತಾಲೂಕಿನಲ್ಲಿ ಬಾಲ್ಯವಿವಾಹ ದೂರು ಕೇಳಿಬಂದಿದೆ. ಗುಡಿಬಂಡೆತಾಲೂಕಿನಲ್ಲಿ ಬಾಲಕಿಯ ವಿವಾಹ ನಡೆಸಲಾಗಿದ್ದು,ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಮೂಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ-ಕಾಲೇಜು ಇಲ್ಲದೆ ಅನುಕೂಲ: ಶಾಲಾಕಾಲೇಜುಗಳಿದ್ದರೇ ವಿದ್ಯಾರ್ಥಿನಿಯರು ವ್ಯಾಸಂಗಕ್ಕೆತೆರಳುತ್ತಿದ್ದರು. ಆದರೆ, ಈಗ ಕೊರೊನಾ ಲಾಕ್‌ಡೌನ್‌ನಿಂದ ಹೊರಗಡೆಹೋಗುವಂತಿಲ್ಲ. ಇಂತಹ ಸಮಯದಲ್ಲಿ ಕುಟುಂಬದ ಹಿರಿಯರ ಒತ್ತಡ, ಮದುವೆ ಖರ್ಚು ಉಳಿಯುತ್ತದೆ ಎಂಬ ಆಸೆಗೆ ಬಿದ್ದು ಪೋಷಕರು, ವಯಸ್ಸು ನೋಡದೆ ವಿವಾಹ ಮಾಡುತ್ತಿದ್ದಾರೆ.
ಇದುಕಾನೂನು ರೀತಿ ಶಿಕ್ಷಾರ್ಹಅಪರಾಧ ಎಂದು ಗೊತ್ತಿದ್ದರೂ ಬಾಲ್ಯ ವಿವಾಹ ನಡೆಸಲುಮುಂದಾಗಿರುವುದು ವಿಪರ್ಯಾಸ.ಬಾಲ್ಯವಿವಾಹನಡೆಯುವುದುಅಥವಾ ಬಾಲ್ಯ ವಿವಾಹನಡೆಸಲು ತಯಾರಿ ಮಾಡಿಕೊಳ್ಳುವುದು ಗೊತ್ತಾದ ತಕ್ಷಣ ಯಾರು ಬೇಕಾದರೂ ಲಿಖೀತ ಅಥವಾ ತಮ್ಮ ಹೆಸರನ್ನುತಿಳಿಸದೆ ದೂರವಾಣಿ ಕರೆಮಾಡಿ ವಿಷಯ ತಿಳಿಸಬಹುದು.ಮಕ್ಕಳ ಸಹಾಯವಾಣಿ 1098ಗೆ ಉಚಿತ ದೂರವಾಣಿ ಕರೆ ಮಾಡಬಹುದು,
ಹತ್ತಿರದಪೊಲೀಸ್ ಠಾಣೆಗೆ ಮಾಹಿತಿನೀಡಬಹುದು, ಪಿಡಿಒ,ಗ್ರಾಮ ಲೆಕ್ಕಾಧಿಕಾರಿ, ಶಾಲಾ ಮುಖ್ಯೋಪಾಧ್ಯಾಯರು ,ತಹಶೀಲ್ದಾರರು, ತಾಪಂ ಇಒ,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಿಇಒ,ಪಿಎಸ್‌ಐ, ಡೀಸಿ, ಎಸ್ಪಿ, ಸಿಇಒ,ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಇತರರಿಗೆ ದೂರು ಸಲ್ಲಿಸಬಹುದಾಗಿದೆ.