ಪಣಜಿ: ರಾಜ್ಯದ ದೇವಸ್ಥಾನಗಳಲ್ಲಿ ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಪ್ಸಾದ ಜಾಗೃತ ದೇವಸ್ಥಾನವಾದ ಶ್ರೀ ಬೋಡ್ಗೇಶ್ವರ್ ದೇವಸ್ಥಾನದಲ್ಲಿ ದರೋಡೆಯ ಆಘಾತಕಾರಿ ಘಟನೆ ಬಯಲಾಗಿದೆ. ಧರೋಡೆ ನಡೆಸಿದ ಕಳ್ಳರನ್ನು ಪೊಲೀಲಿಸರು ಬಂಧಿಸಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ, ದೇವಾಲಯದ ಮೈದಾನದಲ್ಲಿ ಗಾಜಿನ ಪೆಟ್ಟಿಗೆ ದೇವರ ಹುಂಡಿಯಿದ್ದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಅದರಲ್ಲಿ ಹಣ ಅರ್ಪಿಸುತ್ತಾರೆ. ಇಬ್ಬರು ಕಳ್ಳರು ಪೆಟ್ಟಿಗೆಯನ್ನು ಒಡೆದಿದ್ದು, ಕಳ್ಳರು ದೊಣ್ಣೆಯಿಂದ ಪೆಟ್ಟಿಗೆಯ ಗಾಜು ಒಡೆದು ಹಣ ದೋಚಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಗಮನಿಸಿದ ಕಳ್ಳ ಪೆಟ್ಟಿಗೆಯಿಂದ ಹಣ ತುಂಬಿಕೊಂಡಿದ್ದಾರೆ. ಕಾವಲುಗಾರರ ಜಾಗರೂಕತೆಯಿಂದ ಕಳ್ಳರು ಪರಾರಿಯಾಗುವ ಪ್ಲ್ಯಾನ್ ವಿಫಲವಾಯಿತು.
ಭದ್ರತಾ ಸಿಬ್ಬಂದಿ ಬರುತ್ತಿದ್ದಂತೆ ಕಳ್ಳರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದರು. ಗಾಜಿನ ಪೆಟ್ಟಿಗೆಯಲ್ಲಿದ್ದ 6 ಸಾವಿರ ರೂ. ಗಳನ್ನು ಕಳ್ಳತನ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕಳ್ಳತನ ನಡೆಸಿದವರು ಸ್ಥಳೀಯ ನಿವಾಸಿಗಳಾಗಿದ್ದು, ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು, ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕಳೆದ ತಿಂಗಳು ಶ್ರೀ ದೇವ್ ಬೋಡ್ಗೇಶ್ವರರ 89ನೇ ಮಹಾನ್ ಜಾತ್ರೋತ್ಸವ ನಡೆದಿತ್ತು. ಜನವರಿ 24 ರಂದು ಆರಂಭವಾದ ಉತ್ಸವ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿತು. ಬೋಡ್ಗೇಶ್ವರನಿಗೆ ಈ ವರ್ಷ ಅವರ ಪಾದಗಳಿಗೆ ಚಿನ್ನದ ಉಂಗುರಗಳು ಮತ್ತು ಬೆಳ್ಳಿಯ ಉಂಗುರಗಳನ್ನು ಅರ್ಪಿಸಲಾಗಿತ್ತು.