ಹೆಬ್ರಿ: ಹೆಬ್ರಿ ಪೇಟೆಯಿಂದ ಕುಚ್ಚಾರು ಮಾರ್ಗದಲ್ಲಿ ಪ್ರಮುಖ ರಸ್ತೆಯ ಆರಂಭದಲ್ಲಿ ಅಳವಡಿಸಲಾದ ಅವೈಜ್ಞಾನಿಕ ಹಂಪ್‌ನಿಂದ ದಿನನಿತ್ಯ ಅಪಘಾತಗಳು ಹೆಚ್ಚುಗುತ್ತಿದ್ದು ಕೂಡಲೇ ಇದನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮುಖ್ಯ ರಸ್ತೆಯಿಂದ ಕುಚ್ಚಾರು ಮಾರ್ಗದ ಸ್ವಲ್ಪ ದೂರದಲ್ಲಿ ಹಂಪ್ ನಿರ್ಮಾಣವಾಗಿದ್ದರೆ ಈ ಸಮಸ್ಯೆಯಾಗುತ್ತಿಲ್ಲ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಹಂಪ್‌ನಿಂದಾಗಿ ವಾಹನ ನಿಧಾನ ಮಾಡುವಾಗ ಹಿಂದಿನಿಂದ ಇನ್ನೊಂದು ವಾಹನ ಢಿಕ್ಕಿ ಹೊಡೆಯುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಂಕಷ್ಟದಲ್ಲಿ ಬೈಕ್ ಸವಾರರು
ಅತೀ ಎತ್ತರವಾಗಿ ಹಂಪ್ ಇರುವುದರಿಂದ ಬೈಕ್ ಸವಾರರು ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಘಟನೆಗಳಿವೆ. ಅದರಲ್ಲೂ ಮಹಿಳಾ ದ್ವಿಚಕ್ರ ವಾಹನ ಸವಾರರು ಪಾಡು ಹೇಳತೀರದು. ಹಂಪ್‌ನಿಂದ ದ್ವಿಚಕ್ರವಾಹನ ಜಂಪ್ ಆಗಿ ಹಿಂಬದಿ ಸವಾರ ಕೆಳಬಿದ್ದಿದ್ದೂ ಇದೆ ಎನ್ನುತ್ತಾರೆ ಸ್ಥಳೀಯರು.
Advertisement
ಉಡುಪಿ-ಶಿವಮೊಗ್ಗ ಮುಖ್ಯ ರಸ್ತೆಯ ಸಮೀಪವಿರುವ ಈ ಹಂಪ್ ಎತ್ತರವಾಗಿದ್ದು ಈ ಮಾರ್ಗದಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರಮುಖ ರಸ್ತೆಯ ಸಮೀಪವಿರುವ ಈ ರಸ್ತೆಯಲ್ಲಿ ಬೃಹತ್ ವಾಹನಗಳು ಸಂಚರಿಸುವಾಗ ಹಂಪ್‌ನಿಂದ ವಾಹನ ನಿಧಾನಗೊಂಡು ಹಿಂಬದಿ ಭಾಗ ಪ್ರಮುಖ ರಸ್ತೆಗೆ ಅಡ್ಡವಾಗುತ್ತಿದ್ದು ಅಪಘಾತಗಳು ಹೆಚ್ಚುತ್ತಿವೆ. ಪ್ರಮುಖ ರಸ್ತೆಯಲ್ಲಿ ಉಡುಪಿ-ಶಿವಮೊಗ್ಗ ವೇಗದೂತ ಮಿನಿಬಸ್ಸುಗಳು ಸಂಚರಿಸುತ್ತಿದ್ದು ರಸ್ತೆ ಕಿರಿದಾದ ಕಾರಣ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ.
Related Articles
Advertisement
ಶೀಘ್ರ ಸಮಸ್ಯೆ ಬಗೆ ಹರಿಸಿ
ಈಗ ಇದ್ದ ಜಾಗದಲ್ಲಿರುವ ಅವೈಜ್ಞಾನಿಕ ಹಂಪ್‌ನ್ನು ಶೀಘ್ರ ತೆರವುಗೊಳಿಸಿ ಸ್ವಲ್ಪ ಮುಂದೆ ಅಳವಡಿಸಬೇಕು. ಇಲ್ಲದಿದ್ದಲ್ಲಿ ಅನಾಹುತ ತಪ್ಪಿದಲ್ಲ ಎಂಬುದು ಸ್ಥಳೀಯರ ವಾದ.
ದೂರುಗಳು ಬಂದಿವೆೆ
ಈ ಸಮಸ್ಯೆ ಬಗ್ಗೆ ನಮಗೆ ದೂರುಗಳು ಬಂದಿವೆೆ. ಹಿಂದೆ ಇಲ್ಲಿ ಹಂಪ್ ಇಲ್ಲದಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು ಕೊನೆಗೆ ಪಿಡಬ್ಲೂಡಿಯಿಂದ ಹಂಪ್‌ನ್ನು ಅಳವಡಿಸಲಾಗಿದೆ. ಆದರೆ ಪ್ರಮುಖ ರಸ್ತೆಯಿಂದ ಸ್ವಲ್ಪ ದೂರ ಅಳವಡಿಸಿದರೆ ಉತ್ತಮವಾಗಿದ್ದು, ಈ ಬಗ್ಗೆ ಅವರ ಗಮನಕ್ಕೆ ತರಲಾಗಿದೆ.
– ಎಚ್.ಕೆ. ಸುಧಾಕರ, ಅಧ್ಯಕ್ಷರು, ಗ್ರಾ.ಪಂ. ಹೆಬ್ರಿ