ಕಲಬುರಗಿ: ದೆಹಲಿಯ ನಿರ್ಭಯಾ ಅತ್ಯಾಚಾರದಿಂದ ಹಿಡಿದು ಇದುವರೆಗೂ ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳು ರಾಕ್ಷಕರ ದುಷ್ಕೃತ್ಯಕ್ಕೆ ಬಲಿಯಾಗುತ್ತಿದ್ದರೂ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳದಿರುವುದು ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಇಲ್ಲಿನ ಕೆಬಿಎನ್ ಮೆಡಿಕಲ್ ಕಾಲೇಜಿನ ಪ್ಯಾಥಾಲಜಿ ವಿಭಾಗದ ಮುಖ್ಯಸ್ಥೆ ಡಾ| ಜೀನತ್ ಬೇಗಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಎಐಎಂಎಸ್‌ಎಸ್, ಎಐಡಿವೈಒ ಹಾಗೂ ಎಐಡಿಎಸ್‌ಒ ಸಂಘಟನೆಗಳು ಜಂಟಿಯಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರೋಧಿಸಿ ನಗರದ ಹಿಂದಿ ಪ್ರಚಾರ ಸಭಾ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಅವರುಮಾತನಾಡಿದರು.
ಕಠಿಣ ಕ್ರಮ ಕೈಗೊಳ್ಳದಿರುವುದು ಈಗ ಹತ್ರಾಸ್ ಘಟನೆ ನಡೆದಿದ್ದು, ಇದು ಆಡಳಿತ ನಡೆಸುತ್ತಿರುವಸರ್ಕಾರದ ಹೃದಯಹೀನತೆ ಹಿಡಿದ ಕನ್ನಡಿಯಾಗಿದೆ. ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕಠಿಣ ಕಾನೂನು ಜಾರಿ ಮಾಡದಿರುವುದು, ದುಷ್ಕರ್ಮಿಗಳ ರಕ್ಷಣೆಗೆ ನಿಂತಿರುವುದು ಖೇದಕರ ಎಂದರು.
ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಗುಂಪು ಅತ್ಯಾಚಾರಗೈದು, ನಾಲಿಗೆ ಕತ್ತರಿಸಿ, ಬೆನ್ನು ಮೂಳೆ ಮುರಿದಿರುವ ಘಟನೆ ನಡೆದಿದೆ. 14 ದಿನಗಳ ಕಾಲ ಸಾವು ಬದುಕಿನ ಜೊತೆ ಹೋರಾಡಿದ ಯುವತಿ ಕೊನೆಯುಸಿರೆಳೆದಳು. ಈ ಪ್ರಕರಣವು ಅತ್ಯಂತಹೃದಯ ವಿದ್ರಾವಕ ಘಟನೆಯಾಗಿದ್ದು, ಇಡಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಆದರೆ ಅಲ್ಲಿನ ಬಿಜೆಪಿ ಸರ್ಕಾರವು ಅವಳ ಮೇಲೆ ಅತ್ಯಾಚಾರನಡೆದಿದ್ದು ಸ್ಪಷ್ಟವಿಲ್ಲವೆಂದು ಹೇಳುತ್ತಾ ತಮ್ಮ ಸರ್ಕಾರದ ವಿರುದ್ಧ ನಡೆದ ಅಂತಾರಾಷ್ಟ್ರೀಯ ಪಿತೂರಿ ಎಂಬ ಹೇಳಿಕೆ ನೀಡಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಾತನಾಡಿ, ಕೋವಿಡ್ ಅಟ್ಟಹಾಸದಿಂದ ತೊಂದರೆಯಲ್ಲಿರುವ ದುಡಿಯುವ ವರ್ಗದವರಿಗೆ ಬಿಜೆಪಿ ನೇತೃತದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಅದರಲ್ಲೂ ರೈತರ ಮತ್ತು ಕೃಷಿ ಕಾರ್ಮಿಕರಿಗೆ ಮಾರಕವಾಗುವಂತೆ ನಡೆದುಕೊಳ್ಳುತ್ತಿದೆ ಎಂದುಟೀಕಿಸಿದರು. ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಅಧ್ಯಕ್ಷಹಣಮಂತ ಎಚ್.ಎಸ್. ಮಾತನಾಡಿದರು. ಸಂಘಟನೆಗಳ ಪದಾಧಿಕಾರಿಗಳಾದ ಮಲ್ಲಿನಾಥ ಸಿಂಗೆ, ಈರಣ್ಣ ಇಸಬಾ, ಸ್ನೇಹಾ ಕಟ್ಟಿಮನಿ, ಗೋದಾವರಿ, ರೇವಣಸಿದ್ದ, ಭೀಮಾಶಂಕರ, ಅಂಬಿಕಾ ಇದ್ದರು.