Advertisement

ಮಾರುಕಟ್ಟೆಯಲ್ಲಿ ಹೆಚ್ಚಿದ ಕಳ್ಳತನ-ಆತಂಕ

03:23 PM Mar 23, 2022 | Team Udayavani |

ಗುರುಮಠಕಲ್‌: ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ಗಮನಿಸಿದ ಖದೀಮರು ಮನೆಗೆ ಕನ್ನ ಹಾಕಿದ್ದಾರೆ. ಇದರಿಂದಾಗಿ ಇದೀಗ ಪಟ್ಟಣದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.

Advertisement

ಅಂಗಡಿ, ಹೋಟೆಲ್‌, ಮನೆಗಳು, ಬೈಕ್‌, ಜಾನುವಾರು ಸೇರಿದಂತೆ ಅನೇಕ ಕಳ್ಳತನ ಪ್ರಕರಣಗಳು ಪಟ್ಟಣದಲ್ಲಿ ನಡೆದಿರುವ ಉದಾಹರಣೆಗಳಿವೆ. ಹೀಗಿರುವಾಗ ಮತ್ತೆ ಕಳ್ಳರ ಕಾಟ ಹೆಚ್ಚಾಗಿದ್ದು, ಸ್ಥಳೀಯರು ಆತಂಕದಲ್ಲಿ ಕಾಲ ಕಳೆಯುವಂತ ಸ್ಥಿತಿ ನಿರ್ಮಾಣವಾಗಿದೆ.

ದಿನಸಿ ಅಂಗಡಿಯ ಬೀಗ ಮುರಿದು ಅಂಗಡಿಯಲ್ಲಿರುವ 8 ಸಾವಿರ ಹಣ ಹಾಗೂ ದಿನಸಿ ವಸ್ತು ಕಳ್ಳತನ ಮಾಡಲಾಗಿದೆ. ಅದೇ ರೀತಿ ಗುರುಮಠಕಲ್‌ ಪಟ್ಟಣದಲ್ಲಿರುವ ವೈನ್‌ಶಾಪ್‌ ಬೀಗ ಮುರಿದು 45 ಸಾವಿರ ಹಣ ಹಾಗೂ ಮಹತ್ವದ ದಾಖಲೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಕಾರ್‌ನಲ್ಲಿ ಆಗಮಿಸಿದ್ದ ಕಳ್ಳರ ಗ್ಯಾಂಗ್‌ ವೈನ್‌ಶಾಪ್‌ ಬೀಗ ಮುರಿದು ಹಣ ದೋಚಿ ಪರಾರಿಯಾಗಿದ್ದರೆ.

ಸ್ಥಳೀಯ ಪೊಲೀಸ್‌ ಠಾಣೆಗೆ ಹಲವಾರು ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಗುರುಮಠಕಲ್‌ ಜನರಿಗೆ ಆಶ್ಚರ್ಯ ತಂದಿದೆ. ಪೊಲೀಸರಿಗೆ ಸಾರ್ವಜನಿಕ ಕಾಳಜಿ ಇಲ್ಲ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕ್ರಮ ಹೊಂದಿಲ್ಲ ಎಂದು ತೋರುತ್ತಿದೆ. ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಗುರುಮಠಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಜಯ ಕರ್ನಾಟಕ ತಾಲೂಕು ಅಧ್ಯಕ್ಷರಾದ ನಾಗೇಶ ಗದ್ದುಗಿ, ಆಶೋಕ, ಗುರು, ವೀರೇಶ, ರಘು, ಲಾಲಪ್ಪ ತಲಾರಿ ಸೇರಿದಂತೆ ವ್ಯಾಪಾರಸ್ಥರು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next