Advertisement
ತಾಲೂಕಿನಲ್ಲಿ ಬರಗಾಲ ತೀವ್ರಗೊಂಡಿದೆ. ಹಂಚಿನಾಳ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿತ್ತು. ಕೆಲ ತಿಂಗಳ ಹಿಂದೆ ಗ್ರಾಮದ ಹೊರವಲಯದ ನಾಲೆಯಲ್ಲಿ ಕೊಳವೆಬಾವಿ ಕೊರೆಯಿಸಿದ್ದು, ಕಡಿಮೆ ಪ್ರಮಾಣದ ಸೆಲೆ ದೊರೆಯಿತು. ಬೇಸಿಗೆ ಇರುವುದರಿಂದ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಸಮಸ್ಯೆ ಉಲ್ಭಣಗೊಂಡಿತ್ತು. ಗ್ರಾಮಸ್ಥರು ದೂರದ ಸ್ಥಳಗಳಿಂದ ನೀರು ತರುತ್ತಿದ್ದರು. ಆದರೆ 20 ದಿನಗಳ ಹಿಂದೆ ಗ್ರಾಮ ವ್ಯಾಪ್ತಿಯಲ್ಲಿ ಅಕಾಲಿಕ ಮಳೆ ಸುರಿದಿದೆ. ನಾಲೆಯಲ್ಲಿ ಕೊರೆದಿದ್ದ ಕೊಳವೆಬಾವಿಗೆ ಸಮೀಪ ಕೃಷಿ ಭಾಗ್ಯ ಯೋಜನೆಯಡಿ ಛತ್ರಪ್ಪ ಭಜಂತ್ರಿ ಎಂಬುವವರ ಹೊಲದಲ್ಲಿ 27 ಅಡಿ ಉದ್ದ, 27 ಅಡಿ ಅಗಲ ಹಾಗೂ 10 ಅಡಿ ಆಳದ ಕೃಷಿ ಹೊಂಡ ನಿರ್ಮಿಸಲಾಗಿತ್ತು. ಮಳೆಯಿಂದಾಗಿ ಕೃಷಿ ಹೊಂಡ ಭರ್ತಿಯಾಗಿ, ನಾಲೆಯಲ್ಲೂ ನೀರು ಜಿನುಗಿತು. ಕೃಷಿ ಹೊಂಡ ಭರ್ತಿಯಾಗುತ್ತಿದ್ದಂತೆ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ಕೊಳವೆಬಾವಿಯಲ್ಲಿ ಸೆಲೆ ಹೆಚ್ಚಿದ್ದು, ಅಗತ್ಯ ಪ್ರಮಾಣದ ನೀರು ಲಭ್ಯವಾಗುತ್ತಿದೆ ಎಂದು ಸ್ಥಳೀಯರು ಸಂತಸಗೊಂಡಿದ್ದಾರೆ.
Advertisement
ಬತ್ತಿದ ಕೊಳವೆಬಾವಿಯಲ್ಲಿ ಹೆಚ್ಚಿದ ಸೆಲೆ
03:32 PM Apr 28, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.