ಹೊಸದಿಲ್ಲಿ: ಪೂರ್ವ ಲಡಾಖ್‌ನಲ್ಲಿ ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ನಿರೀಕ್ಷಿಸಲಾಗದ ಒತ್ತಡ ಎದುರಿಸುತ್ತಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ. ಚೀನ ಸೇನೆ ಭಾರತದ ವಿರುದ್ಧ ದ ದುಃಸ್ಸಾಹಸಗಳಿಂದಲೇ ಅದಕ್ಕೆ ಇಂಥ ಪರಿಸ್ಥಿತಿ ಬಂದೊದಗಿದೆ ಎಂದು ಶುಕ್ರವಾರ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವ ಹಿಸಿ ಮಾತನಾ ಡಿದ ಅವರು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ವಿಶೇಷವಾಗಿ ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ತಿಳಿಯಾ ಗದೆ, ಬಿಗುವಿನಿಂದಲೇ ಕೂಡಿದೆ ಎಂದು ಹೇಳಿದ್ದಾರೆ. ದೇಶದ ನಿಲುವು ಈ ನಿಟ್ಟಿನಲ್ಲಿ ದೃಢವಾಗಿಯೇ ಇದೆ ಎಂದು ಹೇಳಿದ್ದಾರೆ. ಎಲ್‌ಎಸಿಯಲ್ಲಿ ಯಾವುದೇ ಬದಲಾವಣೆಗೆ ಭಾರತ ಸಿದ್ಧವಿಲ್ಲ ಎಂದರು.
ಯುದ್ಧವಾಗದು: ಚೀನದ ಜತೆಗೆ ಪೂರ್ಣ ಪ್ರಮಾಣದ ಯುದ್ಧವಾಗದು ಎಂದು ಹೇಳಿದ ಜ.ರಾವತ್, ಗಡಿ ಪ್ರದೇಶದಲ್ಲಿ ಪ್ರಚೋದನಾಕಾರಿ ಯಾಗಿ ರುವ ಸ್ಥಿತಿ, ಜಗಳದ ಪರಿಸ್ಥಿತಿಯನ್ನು ನಿವಾರಿಸಲು ಸಾಧ್ಯವೇ ಆಗದು ಎಂದು ಹೇಳಿ ದ್ದಾರೆ. ಪಾಕಿಸ್ತಾನಕ್ಕೆ ಚೀನದ ಬೆಂಬಲ, ಗಡಿ ತಂಟೆ, ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇ ಟಿವ್ (ಬಿಆರ್‌ಐ) ಯೋಜನೆಗ ಳಿಂದಾಗಿ ಎರಡೂ ದೇಶಗಳ ನಡುವಿನ ಬಾಂಧವ್ಯ ಮುಂದಿನ ದಿನಗಳಲ್ಲಿ ಸವಾಲಿನ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.
ಇನ್ನೂ ನಿರ್ಧರಿಸಿಲ್ಲ
ಗಡಿ ತಂಟೆ ಹಿನ್ನೆಲೆ ಯಲ್ಲಿ ಚೀನದ ಆ್ಯಪ್‌ಗ್ಳನ್ನು ಸರಕಾರ ಬ್ಯಾನ್ ಮಾಡಿದೆ. ಆದರೆ ದೇಶದಲ್ಲಿ ನಡೆಯ ಲಿರುವ 5ಜಿ ತರಂಗಾಂತರ ಹಂಚಿಕೆಯಲ್ಲಿ ಚೀನದ ಮೊಬೈಲ್ ಕಂಪನಿಗಳಿಗೆ ಅವಕಾಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಕುಮಾರ್ ಭಲ್ಲಾ ತಿಳಿಸಿದ್ದಾರೆ.