ಬಂಗಾರಪೇಟೆ: ತಾಲೂಕಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾಸೋಂಕು ಹೆಚ್ಚು ಕಾಣಿಸಿಕೊಂಡಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿ ಸಲು ಹಿಂದೇಟು ಹಾಕುತ್ತಿದ್ದಾರೆ.
ಕೊರೊನಾ ಮೊದಲ, 2ನೇಅಲೆಯಲ್ಲಿ ಶಾಲಾ ಕಾಲೇಜುಗಳವಿದ್ಯಾರ್ಥಿಗಳಿಗೆ ಸೋಂಕು ಅಷ್ಟುಕಾಣಿಸಿಕೊಂಡಿಲ್ಲ. 3ನೇ ಅಲೆಯಲ್ಲಿಮಕ್ಕಳಿಗೆ ಹರಡುತ್ತಿದ್ದು, ಪೋಷಕರಿಗೆದೊಡ್ಡ ತಲೆ ನೋವಾಗಿದೆ.
ತಾಲೂಕಿನ ಬಲಮಂದೆ ಶಾಲೆಯಲ್ಲಿ 36 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರಿಗೆ, ದೋಣಿಮೊಡಗು ಪ್ರೌಢಶಾಲೆಯಲ್ಲಿ 17, ಪ್ರಾಥಮಿಕ ಶಾಲೆಯಲ್ಲಿ 8, ಗಾಜಗಶಾಲೆಯಲ್ಲಿ 11, ಮರವಹಳ್ಳಿ ಶಾಲೆಯಲ್ಲಿ26 ವಿದ್ಯಾರ್ಥಿಗಳಿಗೆ ಹಾಗೂ ಒಬ್ಬಶಿಕ್ಷಕರಿಗೆ, ಮಾಗೊಂದಿ ಶಾಲೆಯಲ್ಲಿ 10,ಕಾಮಸಮುದ್ರ ಕಾಲೇಜಿನಲ್ಲಿ 8 ವಿದ್ಯಾರ್ಥಿಗಳಿಗೆ ಮತ್ತು 2 ಉಪನ್ಯಾಸಕರಿಗೆ ಸೋಂಕು ತಗುಲಿದೆ.
ತಾಲೂಕಿನಲ್ಲಿ 120ಕ್ಕೂ ಹೆಚ್ಚಿನವಿದ್ಯಾರ್ಥಿಗಳಿಗೆ ಮತ್ತು 20 ಶಿಕ್ಷಕರಿಗೆಸೋಂಕು ದೃಢಪಟ್ಟಿದೆ. ಸೋಂಕುಕಾಣಿಸಿ ಕೊಂಡ ಕೆಲವು ಶಾಲೆಗಳನ್ನು ಬಂದ್ ಮಾಡಿದ್ದರೆ, ಕೆಲವುಶಾಲೆಗಳಲ್ಲಿ ಎಂದಿನಂತೆ ಪಾಠ ಪ್ರವಚನಗಳು ನಡೆಯುತ್ತಿವೆ.
ಸರ್ಕಾರದ ಆದೇಶದಂತೆ 5ಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡರೆ ಕಂಟೈನ್‌ಮೆಂಟ್ ಜೋನ್ ಎಂದು ಗುರ್ತಿಸಿ 3 ದಿನಶಾಲೆಗೆ ರಜೆ ನೀಡಬೇಕು. ಆದರೆ, ತಾಲೂಕಿನ ಗಾಜಗ ಸೇರಿ ಇತರೆ ಶಾಲಾಕಾಲೇಜುಗಳಿಗೆ ರಜೆ ನೀಡದೆ ಸೋಂಕಿತವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸಿ ಉಳಿದವರಿಗೆ ಪಾಠ ಮಾಡಲು ಶಿಕ್ಷಣಇಲಾಖೆ ಮುಂದಾಗಿದೆ.