Advertisement

ಕೆರೂರಲ್ಲಿ ಹೆಚ್ಚಿದ ಸೋಂಕಿತರ ಸಂಖ್ಯೆ

09:11 AM Jul 28, 2020 | Suhan S |

ಕೆರೂರ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ, ದುಗುಡಕ್ಕೆ ಕಾರಣವಾಗಿದೆ.

Advertisement

ಈಗಾಗಲೇ ಸ್ಥಳೀಯ ಸೊಂಕಿತನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿನ ಆಡಳಿತ ನಾಗರಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕೆಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್‌ ಸೊಂಕು ವ್ಯಾಪಿಸಿರುವ ಸೋಂಕಿತ ಮುಖ್ಯ ತರಕಾರಿ ಮಾರ್ಕೆಟ್‌, ಚಿನಗುಂಡಿಫ್ಲಾಟ್‌, ಹಳಪೇಟೆ ನಾರಾಯಣ ಗುಡಿ ಪ್ರದೇಶ, ನೆಹರುನಗರ ಸೇರಿದಂತೆ ಬಾಧಿತ ಪ್ರದೇಶಗಳನ್ನು ಈಗಾಗಲೇ ಪಟ್ಟಣ ಪಂಚಾಯತ ಸೀಲ್‌ಡೌನ್‌ ಮಾಡಿದೆ.

ಪಟ್ಟಣದಲ್ಲಿ ಒಟ್ಟು 15 ಜನರಿಗೆ ಸೋಂಕು ದೃಢಪಟ್ಟಿದ್ದು, ಇಲ್ಲಿನ ತರಕಾರಿ ಮಾರ್ಕೆಟ್‌ ಲೀಲಾವು ಮಾಡುವ ದಲ್ಲಾಳಿಗಳಿಗೂ ಕೋವಿಡ್‌ ಸೋಂಕು ದೃಢಪಟ್ಟ ಪರಿಣಾಮ ಮಂಗಳವಾರ ಸಂತೆಯ ವಹಿವಾಟನ್ನು ಸಂಪೂರ್ಣ ನಿರ್ಬಂ ಧಿಸಿ ಆ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಪಪಂ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ,

ಇಲ್ಲಿನ ಮಾರ್ಕೆಟ್‌ನಲ್ಲಿ ಯಾವುದೇ ಬಗೆಯ ಕಾಯಿಪಲ್ಲೆ ಮಾರಾಟ ಮಾಡುವಂತಿಲ್ಲ. ತರಕಾರಿ ವರ್ತಕರು ತಳ್ಳುವ ಗಾಡಿಯಲ್ಲಿ ನಗರದ ಪ್ರತಿ ಓಣಿ,  ಓಣಿಗೆ ತೆರಳಿ ವ್ಯಾಪಾರ ಮಾಡಬೇಕು. ಯಾವುದೇ ಕಾರಣಕ್ಕೂ ಜನರನ್ನು ಗಂಪುಗೂಡಿಸುವಂತಿಲ್ಲ ಎಂದು ಸೂಚನೆ ನೀಡಿದರು.

ಪ್ರಭಾರಿ ಮಹಿಳಾ ಪಿಎಸ್‌ಐ ಎಂ.ಎಸ್‌. ಘಂಟಿ ಮಾತನಾಡಿ, ತರಕಾರಿ ವರ್ತಕರು ಮಾರಾಟಕ್ಕೆ ಪ್ರತಿ ಓಣಿಯಲ್ಲಿ ಸಂಚರಿಸುವಾಗ ಯಾವುದೇ ಕಾರಣಕ್ಕೂ ಗ್ರಾಹಕರನ್ನು ಗುಂಪು, ಗುಂಪಾಗಿ ಖರೀದಿಗೆ ಬರದಂತೆ ಜಾಗೃತಿ ವಹಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸುವ ಜತೆಗೆ ಸಾಮಾಜಿಕ ಅಂತರ ಪಾಲಿಸಬೇಕು ಎಂದು ತರಕಾರಿ ವರ್ತಕರಿಗೆ ಸಲಹೆ, ಸೂಚನೆ ನೀಡಿದರು.

Advertisement

ಎಎಸ್‌ಐ ಐ.ಎಂ ಹಿರೇಗೌಡ್ರ, ಎಫ್‌.ವೈ. ತಳವಾರ, ಎಸ್‌.ಕೆ ಪೀರಜಾದೆ, ಎಲ್‌.ಎಂ. ಸುಳ್ಳದ, ರಾಣಪ್ಪ ಹಂಚನಾಳ, ಶಶಿ ಮಸೂತಿ, ತರಕಾರಿ ವರ್ತಕರಾದ ಐ.ಬಿ. ಚೌಧರಿ, ಇಮಾಮಸಾಬ ಬಾಳಿಕಾಯಿ, ಅಲ್ಲೋಜಿ ಚೌಧರಿ, ಅಲ್ಲಾಭಕ್ಷ ಬಜಾರಮನಿ, ಬಾಬು ಸಾಬ ಬಾಳಿಕಾಯಿ, ಚಿನಗಿಸಾಬ ಚೌಧರಿ, ರಾಜು ಚೋರಗಸ್ತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next