ನಾಗಮಂಗಲ: ಕೋವಿಡ್ ಎರಡನೇಅಲೆ ತಾಲೂಕಿನಲ್ಲಿ ಹೆಚ್ಚುತ್ತಿದ್ದು ಪ್ರತೀದಿನ ಸೋಂಕಿತರ ಸಂಖ್ಯೆ 100ರ ಗಡಿತಲುಪುತ್ತಿದೆ.ಎಲ್ಲಾ ವಯೋಮಾನದವರನ್ನೂಬಿಟ್ಟು ಬಿಡದೆ ಕಾಡುತ್ತಿರುವ ಸೋಂಕುಸೋಮವಾರ 99 ಮಂದಿಗೆ ತಗುಲಿದೆ.ಮಂಗಳವಾರ 107 ಮಂದಿಯಲ್ಲಿಸೋಂಕು ಪತ್ತೆಯಾಗಿದೆ.
ತೀವ್ರವಾಗಿ ಅಸ್ವಸ್ಥರಾದವರನ್ನುವರನ್ನು ತಾಲೂಕಿನಆದಿಚುಂಚನಗಿರಿ ಆಸ್ಪತ್ರೆ, ಮಂಡ್ಯಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದು, ಉಳಿದಸೋಂಕಿತರನ್ನು ನಾಗಮಂಗಲದವಿವಿಧೆಡೆ ಸ್ಥಾಪಿಸಿರುವ ಕೋವಿಡ್‌ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್‌ಗೆ 6 ಮಂದಿ ಬಲಿ:ಸೋಮವಾರ ರಾತ್ರಿಯಿಂದೀಚೆಗೆಮೂರು ಮಂದಿ ಸಾವನ್ನಪ್ಪಿದ್ದಾರೆ.ಇದುವರೆಗೆ 6 ಮಂದಿ ಮರಣಹೊಂದಿದ್ದು, ಮರಣ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.
ಅಂತ್ಯ ಸಂಸ್ಕಾರ: ತಾಲೂಕಿನಲ್ಲಿ ಸಾವಿನಸಂಖ್ಯೆ ಹೆಚ್ಚಾಗುತ್ತಿದ್ದು ಅಂತ್ಯಸಂಸ್ಕಾರವನ್ನು ತಮ್ಮ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ಮಾಡುತ್ತಿರುವುದು ಕಂಡುಬರುತ್ತಿದೆ. ಬೆಂಗಳೂರು ಸೇರಿದಂತೆಇತರೆಡೆ ಸಾವನ್ನಪ್ಪಿದವರನ್ನು ತಾಲೂಕಿನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ತಾಲೂಕಿನ ಪಡುವಲಪಟ್ಟಣಗ್ರಾಮದ ಬೆಂಗಳೂರು ನಿವಾಸಿಕೆಂಪೇಗೌಡರು ಕೋವಿಡ್‌ಗೆಬಲಿಯಾಗಿದ್ದು, ಅವರ ಶವಸಂಸ್ಕಾರವನ್ನು ತಮ್ಮ ಸ್ವಗ್ರಾಮ ಪಡುವಲಪಟ್ಟಣದಲ್ಲಿ ನೆರವೇರಿಸಲಾಯಿತು.ಗ್ರಾಮದ ಯುವಕರೇ ಕೊರೊನಾ ಕಿಟ್‌ಧರಿಸಿ ಅಂತ್ಯಕ್ರಿಯೆ ನೆರವೇರಿಸಿದರು.