ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾವಿನ ಪ್ರಮಾಣವೂಹೆಚ್ಚಿದೆ. ಇದರಿಂದ ಮಂಡ್ಯ ನಗರ ಸೇರಿದಂತೆತಾಲೂಕುಗಳ ಪಟ್ಟಣಗಳಲ್ಲೂ ಮೃತಪಟ್ಟವರ ಫ್ಲೆಕ್ಸ್‌ಗಳು ಹೆಚ್ಚುತ್ತಿವೆ.ಮಂಡ್ಯ ನಗರದ ಪ್ರಮುಖ ವೃತ್ತಗಳು, ರಸ್ತೆ, ಬೀದಿಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಕೊರೊನಾದಿಂದಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಫ್ಲೆಕ್ಸ್‌ಗಳುಹೆಚ್ಚಾಗಿ ಕಂಡು ಬರುತ್ತಿವೆ.
ಹೆಚ್ಚಿನ ಮರಣ ಪ್ರಮಾಣ: ಕಳೆದ 16 ದಿನಗಳಿಂದಜಿಲ್ಲೆಯಲ್ಲಿ ಒಟ್ಟು 108 ಮಂದಿ ಸಾವಿಗೀಡಾಗಿದ್ದಾರೆ.ಅದರಲ್ಲೂ ಮಂಡ್ಯ ತಾಲೂಕಿನಲ್ಲೇ ಅತಿ ಹೆಚ್ಚು ಸಾವುಸಂಭವಿಸಿವೆ. ಉಳಿದಂತೆ ಪಾಂಡವಪುರ, ಮದ್ದೂರುತಾಲೂಕಿನಲ್ಲಿ ಮೃತರ ಸಂಖ್ಯೆ ಹೆಚ್ಚಾಗಿದೆ. ಏ.25ರಂದು5 ಸಾವು, ಏ.26ರಂದು 7 ಮಂದಿ, ಏ.28ರಂದು 9,ಏ.29ರಂದು 8, ಏ.30ರಂದು 5, ಮೇ 2ರಂದು 5,ಮೇ 4ರಂದು 6, ಮೇ 5ರಂದು 19, ಮೇ 6ರಂದು 2,ಮೇ 7ರಂದು 11, ಮೇ 8ರಂದು 7, ಮೇ 9ರಂದು 9,ಮೇ 10ರಂದು 12 ಹಾಗೂ ಮೇ 11ರಂದು 3 ಮಂದಿಮೃತಪಟ್ಟಿದ್ದಾರೆ.
ಎರಡನೇ ಅಲೆಯಲ್ಲಿ ಹೆಚ್ಚು ಸಾವು: ಮೊದಲಅಲೆಯಲ್ಲಿ ಕಡಿಮೆ ಇದ್ದ ಸೋಂಕಿನ ಸಾವಿನ ಪ್ರಮಾಣಎರಡನೇ ಅಲೆಯಲ್ಲಿ ಹೆಚ್ಚಾಗಿದೆ. ಪ್ರತಿನಿತ್ಯ 5ಕ್ಕೂ ಹೆಚ್ಚುಮಂದಿ ಸಾವನ್ನಪ್ಪುತ್ತಿರುವುದು ಆತಂಕ ತಂದೊಡ್ಡಿದೆ.ಎರಡನೇ ಅಲೆ ಶುರುವಾದ 10 ದಿನಗಳ ಅಂತರದಲ್ಲಿಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಯಿಂದಸಾವನ್ನಪ್ಪುತ್ತಿದ್ದರು. ಆದರೆ ಇತ್ತೀಚಿನ ಕೆಲವು ದಿನಗಳಿಂದಉಸಿರಾಟದ ತೊಂದರೆಯಿಂದಲೇ ಸೋಂಕಿತರುಮೃತಪಡುತ್ತಿರುವುದು ವರದಿಯಾಗುತ್ತಿದೆ.
ವೆಂಟಿಲೇಟರ್, ಆಕ್ಸಿಜನ್ ಕೊರತೆ: ಯುವಕರು ಸಹಉಸಿರಾಟದ ತೊಂದರೆಯಿಂದ ಮೃತಪಡುತ್ತಿದ್ದಾರೆ.ಜಿಲ್ಲೆಯಲ್ಲಿ ವೆಂಟಿಲೇಟರ್ ಹಾಗೂ ಆಮ್ಲಜನಕಕೊರತೆಯಿಂದ ಸಾಕಷ್ಟು ಮಂದಿ ಮೃತರಾಗಿದ್ದಾರೆ. ನಿನ್ನೆಸೋಮವಾರ ಉಸಿರಾಟದ ತೊಂದರೆಯಿಂದಲೇ 12ಮಂದಿ ಸಾವನ್ನಪ್ಪಿದ್ದಾರೆ. ಪ್ರತಿದಿನ ಎರಡರಿಂದ ಮೂರುಮಂದಿ ವೆಂಟಿಲೇಟರ್, ಆಕ್ಸಿಜನ್ ಸಿಗದೆ ಅಸುನೀಗಿದ್ದಾರೆ.
ರೋಗ ಉಲ್ಬಣವಾದಾಗ ಆಸ್ಪತ್ರೆಗೆ ದಾಖಲು: ಮೊದಲು ಸೋಂಕಿನ ಲಕ್ಷಣಗಳು ಕಂಡು ಬಂದಾಗಕೂಡಲೇ ಪರೀಕ್ಷೆ ಮಾಡಿಸಿ ವೈದ್ಯರಿಂದ ಚಿಕಿತ್ಸೆಪಡೆಯದೇ ನಿರ್ಲಕ್ಷ ವಹಿಸಿ, ನಂತರ ಸೋಂಕು ಹೆಚ್ಚುಉಲ್ಬಣಿಸಿದಾಗ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಇದುಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತಿದೆವೈದ್ಯರು ತಿಳಿಸುತ್ತಾರೆ.