Advertisement

ಮತ್ತೆ ಹೆಚ್ಚಾದ ಹೋಂಕ್ವಾರಂಟೈನ್‌ ಸಂಖ್ಯೆ

05:31 PM Apr 09, 2020 | Suhan S |

ಮೈಸೂರು: ಕೋವಿಡ್ 19 ಸಂಬಂಧ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬುಧವಾರ ಒಂದೇ ದಿನ 248 ಜನರ ಮೇಲೆ ನಿಗಾ ವಹಿಸಲಾಗಿದೆ. ಈವರೆಗೆ ಕೋವಿಡ್ 19  ಸೋಂಕಿತರ ಸಂಪರ್ಕದಲ್ಲಿ ಇದ್ದವರು, ವಿದೇಶ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿದ್ದವರ ಮೇಲೆ ನಿಗಾ ವಹಿಸಲಾಗಿದೆ.

Advertisement

ಮಂಗಳವಾರ 3,057 ಇದ್ದ ಹೋಂ ಕ್ವಾರಂಟೈನ್‌ ಸಂಖ್ಯೆ ಬುಧವಾರ 3,305ಕ್ಕೆ ಏರಿಕೆಯಾಗಿದೆ. ಕೋವಿಡ್ 19  ಸೋಂಕಿತ 35 ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಉಳಿದಂತೆ 1,715 ಜನರನ್ನು 14 ದಿನ ಮನೆಯಲ್ಲಿ ಕಳೆಯುವಂತೆ ನಿರ್ದೇಶನ ನೀಡಲಾಗಿದೆ. ಒಟ್ಟು 1,556 ಜನ ಹೋಂ ಕ್ವಾರಂಟೈನ್‌ ಅನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಒಟ್ಟು 287 ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಈ ಪೈಕಿ 35 ಕೊರೊನಾ ಇರುವುದು ದೃಢಪಟ್ಟಿದ್ದು, 1 ರಕ್ತದ ಮಾದರಿ ತಿರಸ್ಕೃತಗೊಂಡಿದೆ. ಹೊಸದಾಗಿ 20 ಜನರನ್ನು ಪರೀಕ್ಷೆ ಮಾಡಿದ್ದು, ಫ‌ಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಮೂರು ಫ‌ಲಿತಾಂಶ ಪೆಂಡಿಂಗ್‌ ಉಳಿದಿದೆ ಎಂದು ಡೀಸಿ ಅಭಿರಾಮ್‌ ಜಿ. ಶಂಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next