ದೇವಾಲಯಗಳಲ್ಲಿ ಮಾತ್ರವಲ್ಲ. ರಸ್ತೆ ಪಕ್ಕದಲ್ಲಿಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಚಿತ್ತಾಪುರ ಹಾಗೂ ವಾಡಿ
ಸೇರಿ 105, ಶಾಹಾಬಾದ 70, ಕಾಳಗಿ ಹಾಗೂ ಮಾಡಬೂಳನಲ್ಲಿ 50 ಸೇರಿ ಒಟ್ಟು ತಾಲೂಕಿನಲ್ಲಿ 225 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸಿಪಿಐ ಶಂಕರಗೌಡ ಪಾಟೀಲ ಮಾಹಿತಿ ನೀಡಿದ್ದಾರೆ.
ತಾಲೂಕಿನ ಕೆಲವು ದೇವಾಲಯಗಳ ಸಾರ್ವಜನಿಕ ಗಣೇಶ ಉತ್ಸವಕ್ಕೆ ನಾಲ್ಕೈದು ದಶಕಗಳ ಹಿನ್ನೆಲೆ ಇದ್ದರೆ, ನಾಲ್ಕೆçದು ದಶಕಗಳ ಈಚೆಗೆ ಆರಂಭಗೊಂಡ ಸಾರ್ವಜನಿಕ ಗಣೇಶೋತ್ಸವಗಳು ಪಟ್ಟಣದಲ್ಲಿ ಮತ್ತು ತಾಲೂಕಿನಲ್ಲಿ ಹಲವಾರು ಇವೆ ಎನ್ನುತ್ತಾರೆ ಹಿರಿಯರು. ಸಾರ್ವಜನಿಕ ಗಣೇಶ ಮೂರ್ತಿಗಳ ಆಕಾರ ಸಹಜವಾಗಿಯೇ ದೊಡ್ಡದು. ಇಂತಹ ದೊಡ್ಡ ಗಣಪನ ಮೂರ್ತಿ ತಯಾರಿಸುವವರೂ ತಾಲೂಕಿನಲ್ಲಿ ವಿರಳ. ಕೆಲವರು ಮಾತ್ರ ಸಾರ್ವಜನಿಕ ಗಣೇಶೋತ್ಸವಗಳಿಗೆ ಮೂರ್ತಿ ತಯಾರಿಸಿ ಕೊಡುತ್ತಿದ್ದಾರೆ. ಇಂತವರಲ್ಲಿ ಕಲಾವಿದ ವೀರಣ್ಣ ಶಿಲ್ಪಿ ಗಣೇಶನ ಮೂರ್ತಿ ತಾಯಾರಿಕೆಯಲ್ಲಿ ಪಳಗಿದವರು. ಅವರು ಈ ಬಾರಿ 500 ಮೂರ್ತಿ ತಯಾರಿಸಿದ್ದಾರೆ. ಅವುಗಳಲ್ಲಿ 15 ಸಾರ್ವಜನಿಕ ಗಣೇಶ ಮೂರ್ತಿಗಳಾಗಿವೆ. ನಾನು ಯಾವಾಗಲೂ ಮಣ್ಣಿನಿಂದಲೇ ಗಣೇಶ ಮೂರ್ತಿ ಮಾಡುತ್ತೇನೆ. ಗಣೇಶ ಮೂರ್ತಿಗಳಿಗೆ ರಾಸಾಯನಿಕ ಬಣ್ಣ ಬಳಿಯುವುದನ್ನು ಕಳೆದ ಹಲವು ವರ್ಷಗಳಿಂದಲೂ ಅನುಸರಿಸುತ್ತಿಲ್ಲ. ಈ ಬಾರಿ ಕೂಡ ನೀರು ಮಿಶ್ರಿತ ಬಣ್ಣ ಬಳಸಿದಿದ್ದೇನೆ ಎನ್ನುತ್ತಾರೆ ವೀರಣ್ಣ ಶಿಲ್ಪಿ.
Advertisement