Advertisement

ಕಿದು ತೆಂಗು ಅಭಿವೃದ್ಧಿ ಕೇಂದ್ರ ಉಳಿಸಲು ಹೆಚ್ಚಿದ ಆಗ್ರಹ

06:32 PM Sep 28, 2021 | Team Udayavani |

ಕಾರ್ಕಳ: ದಕ್ಷಿಣ ಏಷ್ಯಾದ ಏಕೈಕ ತೆಂಗು ಅಭಿವೃದ್ಧಿ ಕೇಂದ್ರ, ಅಂತಾರಾಷ್ಟ್ರೀಯ ತೆಂಗು ಜೀನ್‌ ಬ್ಯಾಂಕ್‌ ಕಿದುವಿನ ಸಂಶೋಧನ ಕೇಂದ್ರದ ಭೂಗುತ್ತಿಗೆ ನವೀಕರಣ ಸಹಿತ ಕೇಂದ್ರವನ್ನು ಅಭಿವೃದ್ದಿ ಪಡಿಸುವಂತೆ ರೈತರು ಮತ್ತು ಗ್ರಾಮಸ್ಥರ ನಿಯೋಗವೊಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಉಡುಪಿ ಜಿಲ್ಲೆಗೆ ಆಗಮಿಸಿದ್ದ ವೇಳೆ ಕಾಪುವಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.

Advertisement

ಸಚಿವರು ಉಡುಪಿ ಜಿಲ್ಲೆ ಪ್ರವಾಸ ಕೈಗೊಂಡಿದ್ದ ವೇಳೆ ಕಾಪುವಿನ ಕಾರ್ಯಕ್ರಮಕ್ಕೆ ತೆರಳಿದ ಸುಳ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಸರೋಜಿನಿ ಜಯಪ್ರಕಾಶ್‌ ನೇತ್ರತ್ವದ ಬಿಳಿನೆಲೆ ಪರಿಸರದ ರೈತರು, ಕೃಷಿಕರ ನಿಯೋಗ ಸಂಶೋಧನ ಸಂಸ್ಥೆಯ ಗುತ್ತಿಗೆ ಅವಧಿ ನವೀಕರಿಸದೆ ಇರುವುದರಿಂದ ಕೇಂದ್ರದ ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆ ಉಂಟಾ ಗುತ್ತಿದೆ. ನವೀ ಕರಣವಾಗದ ಕಾರಣ ವನ್ನು ಬಳಸಿ ಕೊಂಡು ಕೇಂದ್ರವನ್ನು ಸ್ಥಳಾಂತ ರಿಸುವ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರವನ್ನು ಉಳಿಸಿ ಕೊಳ್ಳುವ ಮತ್ತು ಅಭಿವೃದ್ಧಿ ಪಡಿಸಬೇಕಾದ ಆವಶ್ಯಕತೆಗಳ ಕುರಿತು ಸಚಿವರಿಗೆ ಮನವಿ ಮಾಡಿದೆ. ಕಾರ್ಯಕ್ರಮದ ಒತ್ತಡದಲ್ಲಿದ್ದ ಸಚಿವರು ಮನವಿ ಸ್ವೀಕರಿಸಿ, ಸ್ಪಂದಿಸುವ ಭರವಸೆ ಯನ್ನು ನಿಯೋಗಕ್ಕೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಿಂದ ಕೃಷಿ ಸಚಿವರಿಗೆ ಪತ್ರ
ಕೇಂದ್ರಿಯ ತೋಟಗಳ ಸಂಶೋಧನ ಕೇಂದ್ರದಲ್ಲಿ ಸುಮಾರು 455 ತೆಂಗಿನ ವಿವಿಧ ತಳಿಗಳ ಸಂಶೋಧನೆ ಮತ್ತು ಅಭಿವೃದ್ಧಿ ನಡೆಯುತ್ತಿದೆ.

ಕೇಂದ್ರ ಕಾರ್ಯಾಚರಿಸುತ್ತಿರುವ ಜಾಗದ ಲೀಸಿನ ಅವಧಿ ಪೂರ್ಣಗೊಂಡಿದ್ದು ನವೀಕರಣವಾಗದ ಹಿನ್ನೆಲೆಯಲ್ಲಿ ಸ್ಥಳಾಂತರಿಸುತ್ತಾರೆ ಎನ್ನುವ ಭೀತಿ ಅಲ್ಲಿನ ಸ್ಥಳಿಯರು ಹಾಗೂ ಕರಾವಳಿಯ ಕೃಷಿಕರಲ್ಲಿದೆ. ಕೇಂದ್ರದಲ್ಲಿ ನೂರಾರು ಮಂದಿ ಹೊರಗಿನ ಮತ್ತು ಸ್ಥಳಿಯ ಕಾರ್ಮಿಕರು ಜೀವನೋಪಾಯಕ್ಕಾಗಿ ಉದ್ಯೋಗ ಮಾಡಿಕೊಂಡಿದ್ದು, ಕೃಷಿ ಸಂಶೋಧನೆಯ ವಿದ್ಯಾರ್ಥಿಗಳಿಗೆ, ರಾಜ್ಯ,ಅನ್ಯ ರಾಜ್ಯಗಳ ಕೃಷಿಕರಿಗೆ ಬಹುಪಯೋಗ ವಾಗುತ್ತಿದೆ. ರಾಜ್ಯದ ಹೆಮ್ಮೆಯ ಕೃಷಿ ಸಂಶೋಧನ ಕೇಂದ್ರಗಳಲ್ಲಿ ಇದು ಕೂಡ ಒಂದಾಗಿದ್ದು, ರಾಜ್ಯದ ಹೆಮ್ಮೆಯ ಸಂಸ್ಥೆಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸುವಂತೆ ದ.ಕ. ಜಿಲ್ಲೆಯ ಸಚಿವರು ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ನಳಿನ್‌ಕುಮಾರ್‌ ಕಟೀಲು ಸೆ.24ರಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ವೈದ್ಯರ ನೇಮಕಾತಿಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಕ್ರಮ

Advertisement

ಕೇಂದ್ರ ಸಚಿವೆಯಾಗಿ ಕೆಲ ದಿನಗಳಿಂದ ಹುಟ್ಟೂರು ಕಾಣಿಯೂರಿಗೆ ಆಗಮಿಸಿ, ಪೌರ ನಾಗರಿಕರ ಸಮ್ಮಾನ ಸ್ವೀಕರಿಸಿದ ವೇಳೆಯೂ ಕಿದು ಕೇಂದ್ರ ಅಭಿವೃದ್ಧಿ ಕುರಿತು ಸುಳ್ಯ ವಲಯ ಬಿಜೆಪಿ ಉಪಾಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್‌ ನೇತೃತ್ವದ ಬಿಜೆಪಿ ತಂಡ, ಕೃಷಿಕರು, ಗ್ರಾಮಸ್ಥರು ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದರು. ಸಚಿವರು ಕ್ರಮದ ಭರವಸೆಯನ್ನು ನೀಡಿದ್ದರು. ಇದರ ಬೆನ್ನಲ್ಲೆ ಕೃಷಿಕರ ನಿಯೋಗ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಒತ್ತಡ ಹಾಕುವ ಪ್ರಯತ್ನ ಕೂಡ ನಡೆದಿದೆ.

ಈ ಮೊದಲು ಸಚಿವ ಎಸ್‌ ಅಂಗಾರ ಅವರಿಗೂ ಮನವಿಯನ್ನು ಸಲ್ಲಿಸಿದ್ದಾರೆ. ಇವೆಲ್ಲ ವಿದ್ಯಮಾನಗಳ ನಡುವೆ ಕೇಂದ್ರದ ಸಹಾಯಕ ಕೃಷಿ ಸಚಿವೆ ದೆಹಲಿಯ ಐಸಿಆರ್‌ ಅಧಿಕಾರಿಗಳನ್ನು ಸಂಪರ್ಕಿಸಿ ಕಚೇರಿಗೆ ಕಡತಗಳೊಂದಿಗೆ ಬರುವಂತೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next