Advertisement
ತಾಲೂಕಿನ ಒಟ್ಟು 20ಕ್ಕೂ ಅಧಿಕ ಲಸಿಕೆ ಕೇಂದ್ರಗಳಲ್ಲಿ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು 45-60 ಹಾಗೂ 60 ಕ್ಕಿಂತ ಮೇಲ್ಪಟ್ಟವರ ವಿಭಾಗದಲ್ಲಿ ಮೊದಲ ಮತ್ತು ಎರಡನೇ ಹಂತದ ಲಸಿಕೆ ನೀಡಲಾಗುತ್ತಿದೆ.
Related Articles
Advertisement
ಪ್ರಥಮ ಹಂತದ ಲಸಿಕೆ ನೀಡುವಿಕೆಗೆ ಹೋಲಿಸಿದರೆ ಎರಡನೇ ಹಂತದ ಲಸಿಕೆ ನೀಡುವಿಕೆಯ ಶೇಕಡವಾರು ಪ್ರಮಾಣ ಕಡಿಮೆ ದಾಖಲಾಗಿದೆ. ಲಸಿಕೆ ಪೂರೈಕೆಯಲ್ಲಿ ವಿಳಂಬ ಹಾಗೂ ಮೊದಲ ಮತ್ತು ಎರಡನೇ ಹಂತದ ಲಸಿಕೆ ಪಡೆಯುವ ಅಂತರ ಹೆಚ್ಚಳ ಇದಕ್ಕೆ ಕಾರಣ ಎನ್ನಲಾಗಿದೆ. ಅವಿಭಜಿತ ತಾಲೂಕಿನ 1 ತಾಲೂಕು ಆಸ್ಪತ್ರೆ, 4 ಖಾಸಗಿ ಆಸ್ಪತ್ರೆ, 10 ಪ್ರಾಥಮಿಕ ಆರೋಗ್ಯ ಕೇಂದ್ರ, 2 ಸಮುದಾಯ ಕೇಂದ್ರ, 1 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕೇಂದ್ರವಿದ್ದು ಲಭ್ಯತೆ ಆಧಾರದಲ್ಲಿ ಲಸಿಕೆ ನೀಡಲಾಗುತ್ತಿದೆ.
ಪ್ರಗತಿ ವಿವರ :
45ರಿಂದ 60 ವರ್ಷದೊಳಗಿನ ವಿಭಾ ಗದಲ್ಲಿ ಮೊದಲ ಮತ್ತು ಎರಡನೆ ಡೋಸ್ ಪಡೆದ ತಾಲೂಕು ವಾರು ಶೇಕಡವಾರು ಗಮನಿಸಿದರೆ ಸುಳ್ಯ- 35.53/15.22, ಬೆಳ್ತಂಗಡಿ- 31.49/ 15.63, ಬಂಟ್ವಾಳ- 37.32/22.18, ಮಂಗಳೂರು- ಶೇ. 36.85/19.13 ದಾಖಲಾಗಿದೆ. 60 ವರ್ಷದ ಮೇಲ್ಪಟ್ಟ ವಿಭಾಗದಲ್ಲಿ ಮೊದಲ ಮತ್ತು ಎರಡನೆ ಡೋಸ್ ಪಡೆದ ತಾಲೂಕುವಾರು ಶೇಕಡವಾರು ಗಮನಿಸಿದರೆ ಸುಳ್ಯ- 63.32/35.70, ಬೆಳ್ತಂಗಡಿ-56.44/36.53, ಬಂಟ್ವಾಳ -64.59/45.83, ಮಂಗಳೂರು- 69.85/44.24 ಶೇ. ದಾಖಲಾಗಿದೆ. ದ.ಕ.ಜಿಲ್ಲಾ ಮಟ್ಟದ ಶೇಕಡವಾರು ಗಮನಿಸಿದರೆ 45-60 ರೊಳಗೆ 1,50,106 ಮಂದಿಗೆ ಮೊದಲ ಡೋಸ್ ನೀಡಿದ್ದು ಶೇ.36.07 ಹಾಗೂ 28,276 ಮಂದಿಗೆ ದ್ವಿತೀಯ ಡೋಸ್ ನೀಡಿ ಶೇ. 18.84 ಪ್ರಗತಿ ದಾಖಲಾಗಿದೆ. 60 ವರ್ಷದ ಮೇಲ್ಪಟ್ಟವರ ವಿಭಾಗದಲ್ಲಿ 1,34,504 ಮಂದಿಗೆ ಮೊದಲ ಡೋಸ್ ನೀಡಿ ಶೇ. 66.92 ಹಾಗೂ 57,368 ಮಂದಿಗೆ ದ್ವಿತೀಯ ಡೋಸ್ ನೀಡಿ ಶೇ. 42.65ಪ್ರಗತಿ ದಾಖಲಾಗಿದೆ.