ಪಿರಿಯಾಪಟ್ಟಣ: ರಾಜ್ಯಮಟ್ಟದಲ್ಲಿ ಕುರಿ ಮತ್ತು ಉಣ್ಣೆ ನಿಗಮ ಸ್ಥಾಪನೆಯಾದ ಮೇಲೆ ತಾಲೂಕು ಮಟ್ಟದಲ್ಲಿ ಘಟಕ ಸ್ಥಾಪನೆಗೆ ಬೇಡಿಕೆ ಹೆಚ್ಚಿದೆ ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು. ಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ನಡೆದ ಮಲೆಮಾದಪ್ಪ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ನಿಗಮವನ್ನು ಸದುಪಯೋಗಪಡಿಸಿಕೊಂಡವರು ಉಂಟು, ದುರುಪಯೋಗ ಪಡಿಸಿಕೊಂಡವರು ಹೆಚ್ಚು, ಆದ್ದರಿಂದ ವ್ಯವಸಾಯದ ಜೊತೆಜೊತೆಗೆ ಹೈನುಗಾರಿಕೆಯು ಉಪಕಸುಭಾಗಿದ್ದು ಹಾಲು ಉತ್ಪಾದನೆಯಂತೆ ಇದು ಕೂಡ ಹೆಚ್ಚಿನ ಸಹಕಾರಿಯಾಗಲಿದೆ. ಮುಖ್ಯಮಂತ್ರಿಗಳು ಇದಕ್ಕೆ ವಿಶೇಷ ಗಮನ ನೀಡುತ್ತಿದ್ದು, ಇದಕ್ಕೆ ಉತ್ತಮ ಬೇಡಿಕೆ ಇದೆ ಅಲ್ಲದೆ ಸವಲತ್ತನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪಕಸುಬು ಅವಲಂಬಿಸಿ: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣಾ ಮಾತನಾಡಿ, ರೈತರಲ್ಲಿ ಆರ್ಥಿಕಸ್ವಾವಲಂಭನೆಯಾಗ ಬೇಕಾದರೆ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಸಹಕಾರ ಸಂಘಗಳು ದುರ್ಬಳಕೆಯಿಂದ ದೂರ ಉಳಿದು ಜನರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ರೈತರು ಸೋಮಾರಿ ತನವನ್ನು ಬಿಟ್ಟು ದುಡಿಮೆಯನ್ನು ಕಲಿಯುವುದರ ಜೊತೆಗೆ ಉಪಕಸುಬುಗಳನ್ನು ಹೆಚ್ಚು ಅವಲಂಬಿಸಬೇಕು ಎಂದು ತಿಳಿಸಿದರು.
ಸಂಘಗಳ ಬಲವರ್ಧನೆ: ಕುರಿ ಮತ್ತು ಉಣ್ಣೆ ನಿಗಮಮಂಡಳಿ ಅಧ್ಯಕ್ಷ ಜಿ.ಕೃಷ್ಣ ಮಾತನಾಡಿ, ಒಂದು ಟಗರು ಬೆಳೆಯಲು 3 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದ್ದು. ಸಹಕಾರ ಸಂಘ 100 ಜನ ಶೇರುದಾರರನ್ನು ಹೊಂದಿದ್ದು, ಕುರಿ ಸಾಕಣಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು.
ಅಲ್ಲದೆ ಠೇವಣಿ ಇಡುವುದು ಈ ಹಣದಿಂದ ಬಡವರಿಗೆ ಮರಿಗಳ ಅಭಿವೃದ್ಧಿ ಮಾಡಲು ಅವಕಾಶ ನೀಡುವುದು. ಅಧ್ಯಕ್ಷನಾದಾಗ ರಾಜ್ಯದಲ್ಲಿ 200 ಸಂಘಗಳಿದ್ದು, ಈಗ 750 ಸಂಘಗಳು ಇವೆ. ಸಂಘಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುರಿಮಿತ್ರ ಪತ್ರಿಕೆ ವಿಶೇಷ ಅಧಿಕಾರಿ ಡಾ.ರಘುಪತಿ, ಸಂಘದ ಗೌರವಾಧ್ಯಕ್ಷ ಆರ್.ಆರ್.ದೊಡ್ಡಣ್ಣ ,ನಿರ್ದೇಶಕ ರಮೇಶ್ ಮಾತನಾಡಿದರು. ಸಮಾರಂಭದಲ್ಲಿ ಜಿಪಂ ಸದಸ್ಯೆ ಕೌಸಲ್ಯಲೋಕೇಶ್, ತಾಪಂ ಅಧ್ಯಕ್ಷೆ ನಿರೂಪರಾಜೇಶ್, ಮಾಜಿ ಜಿ.ಪಂ.ಸದಸ್ಯರಾದ ಡಿ.ಎ.ಜವರಪ್ಪ, ಎಸ್.ಟಿ.ರಾಜಶೇಖರ್, ಎಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರಶೇಖರ್, ಸಹಕಾರಿ ನಿರ್ದೇಶಕ ಡಾ.ಶಿವಲಿಂಗಯ್ಯ,
ಸಹಕಾರ ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿಗೌಡ, ಪಶುಸಂಗೋಪನಾ ಇಲಾಖೆ ಡಾ.ಚಾಮರಾಜು, ಡಾ.ಸೋಮಯ್ಯ. ಕೆ.ಹೊಲದಪ್ಪ,ಆರ್.ಎಸ್.ಕುಮಾರವಿಜಯ್, ಕರಡಿಪುರಕುಮಾರ್, ಸಂಘದ ಅಧ್ಯಕ್ಷ ಡಿ.ಟಿ.ಲೋಕೇಶ್, ಉಪಾಧ್ಯಕ್ಷ ವಸಂತ್, ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಾಮಿ, ಆರ್.ಎಸ್.ಮಹೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.