Advertisement

ಆನ್‌ಲೈನ್‌ ಆ್ಯಪ್‌ಗೆ ಹೆಚ್ಚಿದ ಬೇಡಿಕೆ

12:39 PM May 02, 2020 | mahesh |

ಬೆಂಗಳೂರು: ಕೋವಿಡ್ ಸೋಂಕಿನ ತೀವ್ರತೆಯಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಿ, ಆನ್‌ಲೈನ್‌ ತರಗತಿಗೆ ಆದ್ಯತೆ ನೀಡಿದ್ದರಿಂದ ಆನ್‌ಲೈನ್‌ ಕಲಿಕಾ ಆ್ಯಪ್‌ಗಳಿಗೂ ಬೇಡಿಕೆ ಹೆಚ್ಚಿವೆ. ಬಹುತೇಕ ಖಾಸಗಿ ಶಾಲೆಗಳು ತಮ್ಮದೇ ವ್ಯವಸ್ಥೆಯಲ್ಲಿ ಆನ್‌ಲೈನ್‌ ಆ್ಯಪ್ ಗಳನ್ನು ಸಿದ್ಧಪಡಿಸಿಕೊಂಡು ಮಕ್ಕಳಿಗೆ ಬೋಧಿಸಲಾಗುತ್ತಿದೆ. ಸರ್ಕಾರಿ ವ್ಯವಸ್ಥೆಯ ಅಡಿಯಲ್ಲಿ ಮಕ್ಕಳ ವಾಣಿ ಯೂಟ್ಯೂಬ್‌ ಚಾನಲ್‌ ರೂಪಿಸಿ, ಮಕ್ಕಳ ಸೃಜನಶೀಲತೆ ಹೆಚ್ಚಿಸುವ ಕ್ರಮ ನಡೆಯುತ್ತಿದೆ. ಇದೆಲ್ಲದರ ನಡುವೆ, ಆನ್‌ಲೈನ್‌ ಕಲಿಕೆಗಾಗಿಯೇ ಕೆಲವೊಂದು ಖಾಸಗಿ ಸಂಸ್ಥೆಗಳು ಕಲಿಕಾ ಆ್ಯಪ್‌ಗ್ಳನ್ನು ರೂಪಿಸಿ, ನೀಡಿದೆ. ಗೂಗಲ್‌ ಸ್ಟೋರ್‌ ಹಾಗೂ ಆ್ಯಪಲ್‌ ಸ್ಟೋರ್‌ಗಳಲ್ಲಿ ನಾನಾ ಬಗೆಯ ಕಲಿಕೆ ಆ್ಯಪ್‌ಗಳು ಈಗ ಲಭ್ಯವಿದೆ.

Advertisement

ಕೆಲವೊಂದು ಆ್ಯಪ್ ಗಳನ್ನು ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮಕ್ಕೆ ಪೂರಕವಾಗಿ ಒಂದರಿಂದ 10ನೇ ತರಗತಿ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ರೂಪಿಸಿವೆ. ಆದರೆ, ಈ ಆ್ಯಪ್‌ಗ್ಳ ಬಳಕೆ ಸಂದರ್ಭದಲ್ಲಿ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಶಾಲೆಗಳು ರೂಪಿಸಿ, ಆನ್‌ಲೈನ್‌ ಕ್ಲಾಸ್‌ ನಡೆಸಲು ಉಪಯೋಗಿಸುವ ಆ್ಯಪ್‌ ಗಳಿಗೂ ಮತ್ತು ಆನ್‌ಲೈನ್‌ ಸ್ಟೋರ್‌ಗಳಲ್ಲಿ ಲಭ್ಯವಿರುವ ಆ್ಯಪ್‌ಗ‌ಳಿಗ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಪಾಲಕರು ತಮ್ಮ ಮೊಬೈಲ್‌ಗ‌ಳಲ್ಲಿ ಮಕ್ಕಳಿಗೆ ಕಲಿಕೆ ಆ್ಯಪ್‌ ಇನ್‌ ಸ್ಟಾಲ್‌ ಮಾಡುವಾಗ ಮತ್ತು ಬಳಕೆ ಮಾಡುವಾಗ ಎಚ್ಚರ ವಹಿಸಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಬಹುತೇಕ ಶಾಲೆಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿವೆ. ಹಾಗೆಯೇ ಕೆಲವೊಂದು ಸಂಸ್ಥೆಗಳು ನೀಟ್‌, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಆ್ಯಪ್‌ ಗಳನ್ನು ರೂಪಿಸಿಕೊಂಡಿವೆ.

ಆನ್‌ಲೈನ್‌ ಕಲಿಕಾ ಆ್ಯಪ್‌ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ನಕಲಿ ಆ್ಯಪ್‌ಗ್ಳು ಹೆಚ್ಚಿರುತ್ತವೆ. ಉಪಯೋಗಕ್ಕೂ ಮೊದಲು ಇದರ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಎಂದು ತಾಂತ್ರಿಕ ತಜ್ಞರೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next