Advertisement
ನಿಲ್ದಾಣದ ಮೂಲಗಳ ಪ್ರಕಾರ, ವಿಮಾನ ಮೈಸೂರಿನಿಂದ ಮಂಗಳೂರಿಗೆ ಆಗಮಿ ಸುವಾಗ ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆ. ಆದರೆ ಮಂಗಳೂರಿನಿಂದ ತೆರಳು ವಾಗ ಹೆಚ್ಚಿರುತ್ತದೆ. ಬಹುತೇಕ ಸಮಯ ಎಲ್ಲ ಆಸನಗಳು ಭರ್ತಿಯಾಗುತ್ತಿವೆ. ವಾರ ದಲ್ಲಿ ಬುಧ, ಶುಕ್ರ, ಶನಿ ಮತ್ತು ರವಿವಾರ ಈ ವಿಮಾನ ಸೇವೆ ಲಭ್ಯವಿದೆ. ಮೈಸೂರಿನಿಂದ ಗೋವಾಕ್ಕೆ ವಿಮಾನ ಸೇವೆ ಇರುವುದರಿಂದ ಮಂಗಳೂರು-ಮೈಸೂರು ವಿಮಾನಕ್ಕೆ ಪ್ರಯಾಣಿಕರು ಆಸಕ್ತಿ ತೋರುತ್ತಿದ್ದಾರೆ.
ಸದ್ಯ ಮಂಗಳೂರು ವಿಮಾನ ನಿಲ್ದಾಣ ದಿಂದ ಮುಂಬಯಿ, ಬೆಂಗಳೂರು, ಹೈದರಾಬಾದ್, ಹೊಸದಿಲ್ಲಿ ಸೇರಿದಂತೆ ವಿವಿಧ ಭಾಗಗಳಿಗೆ ದಿನದಲ್ಲಿ 17 ವಿಮಾನಗಳು ನಿಯಮಿತವಾಗಿ ಕಾರ್ಯಾ ಚರಿಸುತ್ತಿವೆ. ಇತ್ತೀಚೆಗೆ ಗೋ ಏರ್ ಸಂಸ್ಥೆಯ ವಿಮಾನ ಮುಂಬಯಿಗೆ ಸಂಚಾರ ಆರಂಭಿಸಿದ್ದು, ಎರಡು ದಿನಗಳ ಹಿಂದೆ ಬೆಂಗಳೂರಿಗೂ ಹೊಸ ವಿಮಾನ ಸಂಚಾರ ಆರಂಭಿಸಿದೆ. ಹೊಸದಿಲ್ಲಿಗೆ ನೇರ ವಿಮಾನವಿಲ್ಲ!
ಲಾಕ್‌ಡೌನ್ ಬಳಿಕ ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆ ಇದ್ದರೂ ಪ್ರಯಾಣಿಕರ ಕೊರತೆ ಕಾರಣ ನೀಡಿ ಸೇವೆ ಸ್ಥಗಿತವಾಗಿತ್ತು. ಸದ್ಯ ಮಂಗಳೂರಿನಿಂದ ಮುಂಬಯಿಗೆ ತೆರಳಿದ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ತೆರಳಿದ ಇಂಡಿಗೋ ವಿಮಾನವೇ ಹೊಸದಿಲ್ಲಿ ತೆರಳುತ್ತಿದೆ. ಹೀಗಾಗಿ ಹೊಸದಿಲ್ಲಿಗೆ ತೆರಳುವ ಪ್ರಯಾಣಿಕರು ಹೆಚ್ಚು ಸಮಯ ವ್ಯಯಿಸಬೇಕಾಗಿದೆ.