Advertisement

ಕೋವಿಡ್‌ ಬಳಿಕ ಮನೆಗಳಿಗೆ ಹೆಚ್ಚಿದ ಬೇಡಿಕೆ

01:06 AM Dec 30, 2020 | Team Udayavani |

ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬರ ಕನಸಾಗಿದ್ದರೂ ನಗರ ಪ್ರದೇಶಗಳಲ್ಲಿ ಅದನ್ನು ಈಡೇರಿಸಿಕೊಳ್ಳುವುದು ಕಷ್ಟ. ಹೀಗಾಗಿ ಅಲ್ಲಿನ ಜನರು ಬಾಡಿಗೆ ಮನೆ ಅಥವಾ ಅಪಾರ್ಟ್‌ಮೆಂಟ್‌ಗಳತ್ತ ಹೆಚ್ಚು ಗಮನ ಹರಿಸುತ್ತಾರೆ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಮನೆಯ ಕುರಿತಂತೆ ಜನರ ಕಾಳಜಿ ಹೆಚ್ಚಾಗಿದೆ. ನಗರವಾಸಿಗಳು ಬಾಡಿಗೆ ಮನೆ ಅಥವಾ ಫ್ಲ್ಯಾಟ್‌ ಅಥವಾ ಮನೆಗಳಿಗೆ ವಿದಾಯ ಹೇಳಿ ಸ್ವಂತ ಮನೆ ನಿರ್ಮಿಸುವ ಅಥವಾ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದಿದೆ ಒಂದು ವರದಿ.

Advertisement

ಯಾವ ವರದಿ
ಪಿಯರ್‌-ಟು-ಪಿಯರ್‌ ರಿಯಲ್‌ ಎಸ್ಟೇಟ್‌ ಪೋರ್ಟಲ್‌ ನೋ ಬ್ರೋಕರ್‌.ಕಾಮ್‌ ನ ವರದಿ ಈ ಅಂಶವನ್ನು ತೆರೆದಿಟ್ಟಿದೆ. ವರದಿಯ ಪ್ರಕಾರ ಮುಂದಿನ ವರ್ಷದ ವೇಳೆಗೆ ಸುಮಾರು ಶೇ. 73ರಷ್ಟು ಬಾಡಿಗೆದಾರರು ಮನೆ ಖರೀದಿಸಲು ಯೋಜಿಸುತ್ತಿದ್ದಾರೆ.

ಶೇ. 73 ಮಂದಿಗೆ ಮನೆ!
ದಿಲ್ಲಿಯಲ್ಲಿ ಸುಮಾರು ಶೇ. 73ರಷ್ಟು ಬಾಡಿಗೆದಾರರು 2021ರಲ್ಲಿ ಮನೆ ಖರೀದಿಸಲು ಮುಂದಾಗಿ¨ªಾರೆ. ದಿಲ್ಲಿಯ-ಎನ್‌ಸಿಆರ್‌ನಲ್ಲಿ ಸಿದ್ಧ ಮನೆಗಳನ್ನು ಖರೀದಿಸಲು ಶೇ. 67 ರಷ್ಟು ಜನರು ನಿರ್ಧರಿಸಿದ್ದಾರೆ. ಮರುಮಾರಾಟದ ಮನೆ (rಛಿsಚlಛಿ ಜಟusಛಿ)ಗಳ ಖರೀದಿಗೆ ಶೇ. 21ಮಂದಿ ಉತ್ಸುಕರಾಗಿದ್ದರೆ, ಕೇವಲ ಶೇ. 12ಮಂದಿ ಮಾತ್ರ ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್‌ಗಳನ್ನು ಕೊಂಡುಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ.

ಎಲ್ಲೆಲ್ಲಿ ಸಮೀಕ್ಷೆ?
ಬೆಂಗಳೂರು, ಮುಂಬಯಿ, ಪುಣೆ, ಚೆನ್ನೈ, ಹೈದರಾಬಾದ್‌ ಮತ್ತು ದಿಲ್ಲಿ-ಎನ್‌ಸಿಆರ್‌ನಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು ನಗರಗಳಲ್ಲಿಯೇ ಮನೆ ಹೊಂದಲು ಇಚ್ಚಿಸಿದ ಜನರ ಸಂಖ್ಯೆ ಶೇ.33ರಷ್ಟಿದೆ.

ಯುವಕರು ಹೆಚ್ಚು?
ದಿಲ್ಲಿಯಲ್ಲಿ ಶೇ. 58ರಷ್ಟು ಮಂದಿ ಹೊಸ ಮನೆಗಳತ್ತ ಮುಖ ಮಾಡಿದ್ದಾರೆ. ಇವರಲ್ಲಿ ಬಹುತೇಕರು ಯುವಕರಾಗಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮನೆಗಳ ಖರೀದಿಗೆ ಮುಂದಾಗಿರುವ ಯುವಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಶೇ. 57ರಷ್ಟು ಜನರು ನಿವೇಶನಗಳ ಬದಲು ಫ್ಲ್ಯಾಟ್‌ಗಳ ಖರೀದಿಗೆ ಆಸಕ್ತಿ ತೋರಿದ್ದಾರೆ. ಸುಮಾರು ಶೇ. 65ರಷ್ಟು ಜನರು ಮನೆಗಳನ್ನು ನೋಡುವಾಗ ವಾಸ್ತು ಕುರಿತು ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಳೆದ ವರ್ಷ ಕೇವಲ ಶೇ. 38ರಷ್ಟು ಖರೀದಿದಾರರು ಮಾತ್ರ ವಾಸ್ತು ಮೇಲೆ ಗಮನ ಕೇಂದ್ರೀಕರಿಸಿದ್ದರು ಎಂದು ವರದಿ ತಿಳಿಸಿದೆ.

Advertisement

ಡಿಜಿಟಲ್‌ ಪಾವತಿಗೆ ಒಲವು
ಸದ್ಯ ಬಾಡಿಗೆದಾರರು ಡಿಜಿಟಲ್‌ ಪಾವತಿಗೆ ಹಚ್ಚಿನ ಆದ್ಯತೆ ನೀಡುತ್ತಿದ್ದು ಸುಮಾರು ಅರ್ಧದಷ್ಟು ಬಾಡಿಗೆದಾರರು (ಶೇ. 48) ಆನ್‌ಲೈನ್‌ ಪಾವತಿ ವ್ಯವಸ್ಥೆ ಮೂಲಕ ತಮ್ಮ ಬಾಡಿಗೆಯನ್ನು ಪಾವತಿಸಿ¨ªಾರೆ.

ದುಬಾರಿ ಬಜೆಟ್‌!
ಈ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಶೇ. 32ರಷ್ಟು ಮಂದಿ 80 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬಜೆಟ್‌ನ ಮನೆ ಅಥವಾ ಫ್ಲ್ಯಾಟ್‌ಗಳ ಖರೀದಿಗೆ ಒಲವು ಹೊಂದಿದ್ದಾರೆ. ಹಾಗೆಂದು ಮಹಾನಗರಗಳಲ್ಲಿ ನಿವೇಶನ ಅಥವಾ ಮನೆ ಖರೀದಿ ಅಷ್ಟೊಂದು ಸುಲಭದ ಮಾತಲ್ಲ. ನಿವೇಶನಗಳ ಕೊರತೆ ಪ್ರತಿಯೊಂದೂ ನಗರದ ಸಾಮಾನ್ಯ ಸಮಸ್ಯೆ. ವಸತಿ ಸಂಕೀರ್ಣಗಳಲ್ಲಿ ಖಾಲಿ ಬಿದ್ದಿರುವ ಫ್ಲ್ಯಾಟ್‌ಗಳಲ್ಲಿ ಹಲವಾರು ಕೊರತೆಗಳಿರುತ್ತವೆ. ಈ ಎಲ್ಲ ಸಮಸ್ಯೆ, ಸವಾಲುಗಳನ್ನು ಎದುರಿಸಿ ಸ್ವಂತ ಮನೆ ನಿರ್ಮಾಣ ಅಥವಾ ಖರೀದಿ ತುಸು ತ್ರಾಸದಾಯಕವೇ ಎಂದೂ ವರದಿ ಬೆಟ್ಟು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next