Advertisement

ತಮಿಳುನಾಡಿನ ಹಿಪ್ಪುನೇರಳೆಗೆ ಹೆಚ್ಚಿದ ಬೇಡಿಕ

03:14 PM Jan 11, 2018 | Team Udayavani |

ಕೋಲಾರ: ಜಿಲ್ಲೆಯ ಜೀವನಾಡಿಯಾಗಿರುವ ರೇಷ್ಮೆಕೃಷಿ ಉದ್ಯಮದಿಂದ ಬದುಕು ಕಂಡು ಕೊಂಡಿರುವ ಜಿಲ್ಲೆಯ ರೈತರು ತಮಿಳುನಾಡಿನಲ್ಲಿ ಬೆಂಗಳೂರು ತಾಜ್ಯ ನೀರಿನಿಂದ ಬೆಳೆಯುತ್ತಿರುವ ಹಿಪ್ಪು$ನೇರಳೆ ಸೊಪ್ಪನ್ನು ಸಾವಿರಾರು ರೂ. ನೀಡಿ ಖರೀದಿಸುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಅಂತರ್ಜಲ ಕೊರತೆಯಿಂದ ಹಿಪ್ಪುನೆರಳೆಯಿಂದ ವಿಮುಖವಾಗಿದ್ದು, ಜೊತೆಗೆ ರೇಷ್ಮೆಗೂಡಿಗೆ ಉತ್ತಮ ಬೆಲೆ
ಸಿಗುತ್ತಿರುವುದರಿಂದ ರೈತರು ಉದ್ಯಮದತ್ತ ಮತ್ತೆ ವಾಲುತ್ತಿದ್ದಾರೆ. ಹೀಗಾಗಿ ಹಿಪ್ಪುನೇರಳೆ ಖರೀದಿಗೆ ಮುಂದಾಗಿದ್ದಾರೆ.

ಚೀನಾ ರೇಷ್ಮೆ ಆಮದಿನಿಂದಾಗಿ ಬೆಲೆ ಕುಸಿತದಿಂದ ರೇಷ್ಮೆ ಕೃಷಿ ಕೆಲವು ವರ್ಷಗಳ ಕಾಲ ಕಂಗೆಟ್ಟರೂ ಮತ್ತೆ ಇದೀಗ ಚೇತರಿಕೆ ಕಾಣುತ್ತಿದೆ, ನಮ್ಮ ರೈತರೂ ಸಹಾ ಬೈವೋಲ್ಟೆ„ನ್‌ ರೇಷ್ಮೆ ಉತ್ಪಾದನೆ ಮೂಲಕ ಗುಣಮಟ್ಟದ ರೇಷ್ಮೆಯತ್ತ
ಮುಖಮಾಡಿದ್ದಾರೆ. 

ಕೆಸಿವ್ಯಾಲಿಗೆ ಚಾಲನೆ: ಬೆಂಗಳೂರಿನ ತ್ಯಾಜ್ಯ ನೀರನ್ನು ತಮಿಳುನಾಡು ವಲಯಕ್ಕೆ ಹರಿಸುತ್ತಿದ್ದರಾದರೂ ಅದೇ ನೀರಿನಲ್ಲಿ ತಮಿಳುನಾಡಿನ ರೈತರು ಸಮರ್ಪಕವಾಗಿ ಬಳಸಿಕೊಂಡು, ಬೆಳೆದ ಹಿಪ್ಪುನೇರಳೆ ಸೊಪ್ಪನ್ನು ಕರ್ನಾಟಕದವರಿಗೆ ಸಾವಿರಾರು ರೂ.ಗೆ ಮಾರಿ ಕಾಸು ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇತ್ತೀಚೆಗಷ್ಟೆ ಕ್ಯಾಸಿವ್ಯಾಲಿ ಚಾಲನೆ ನೀಡಿ ಜಿಲ್ಲೆಯೆ ಸಂಸ್ಕರಿಸಿದ ನೀರು ಬಿಡುವುದು ಯಾವಾಗ ಎಂದು ಜನರು ಕಾಯುತ್ತಿದ್ದಾರೆ. ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಸುಮಾರು 16778.77 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಮಾಲೂರು ತಾಲೂಕಿನಲ್ಲಿ ಈ ಬೆಳೆ ಬೆಳೆಯುವ ಪ್ರಮಾಣ ಕಡಿಮೆ. ಕೆಲವು ರೈತರು ತಮಿಳುನಾಡಿನ ರೈತರನ್ನು ಅವಲಂಭಿಸಬೇಕಾದ ದುಸ್ಥಿತಿ ಎದುರಾಗಿದೆ.

ಮಾಲೂರು ತಾಲೂಕಿನ ಟೇಕಲ್‌ ಬಳಿಯ ಯಲುವಗುಳಿ, ದೊಡ್ಡಮಲ್ಲೆ, ಗೋಪಸಂದ್ರ ಮತ್ತಿತರ ಗ್ರಾಮದ ರೇಷ್ಮೆ ಕೃಷಿಯಲ್ಲಿ ತೊಡಗಿರುವ ಬಹುತೇಕ ರೈತರು ಹಿಪ್ಪುನೇರಳೆಗೆ ತಮಿಳುನಾಡಿನವರನ್ನು ಆಸರೆಯನ್ನಾಗಿಸಿಕೊಂಡಿದ್ದಾರೆ.

Advertisement

ತಮಿಳುನಾಡಲ್ಲೆ ಕಡಿಮೆ: ಟಾಟಾ ಎಸಿ ವಾಹದಲ್ಲಿ ಒಂದು ಲೋಡ್‌ನ‌ಷ್ಟು ಹಿಪ್ಪುನೇರಳೆ ಸೊಪ್ಪಿಗೆ ಕೋಲಾರ ಭಾಗದಲ್ಲಿ 12 ರಿಂದ 13 ಸಾವಿರ ರೂ. ಪಾವತಿಸಬೇಕು. ಇಲ್ಲಿಗಿಂತ ತಮಿಳುನಾಡಿನಲ್ಲೆ ಕಡಿಮೆ ಧರಕ್ಕೆ ಲಭ್ಯವಾಗುತ್ತದೆ. ಹಾಗಾಗಿ ಪ್ರತಿನಿತ್ಯ ಬೆಳ್ಳಂಬೆಳಗ್ಗೆ ಟೇಕಲ್‌ ಭಾಗದ ಸುತ್ತಮುತ್ತಲ ಗ್ರಾಮಸ್ಥರು ತಮಿಳು ನಾಡಿಗೆ ಪಾದ ಬೆಳೆಸುತ್ತಾರೆ.

ಬೆಳಗ್ಗೆ 4 ಗಂಟೆ ವೇಳೆಗೆ ಮಾಲೂರು ಮಾರ್ಗವಾಗಿ ತಮಿಳುನಾಡಿ ಬಾಗಲೂರಿಗೆ ತೆರಳುವ ಗ್ರಾಮಸ್ಥರು, ಅಲ್ಲಿನ ರೈತರು ಬೆಳೆದ ಜಮೀನಿನಲ್ಲಿ ಹಿಪ್ಪು$ನೇರಳೆ ಸೊಪ್ಪನ್ನು ಕಟಾವು ಮಾಡಿ ಮಧ್ಯಾಹ್ನ 12 ರವೇಳೆಗೆ ಗ್ರಾಮಕ್ಕೆ
ಕೊಂಡು ಬರುವುದು ವಾಡಿಕೆಯಾಗಿದೆ. 

ಅನುಮಾನ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕೆರೆ ಕುಂಟೆಗಳು ಬಹುತೇಕ ತುಂಬಿವೆ. ಆದರೆ, ಕೊಳವೆ ಬಾವಿಗಳು ಮಾಲೂರು ಭಾಗದಲ್ಲಿ ಕೆಲವಷ್ಟೆ ಪುನಃಶ್ಚೇತನಗೊಂಡಿವೆ. ಕೆರೆ, ಕುಂಟೆಗಳ ನೀರು ಬಳಸುವಂತಿಲ್ಲ. ಇನ್ನು ಲಭ್ಯವಿರುವ ನೀರಲ್ಲೆ ಹಿಪ್ಪು$ನೇರಳೆ ಸೊಪ್ಪು ಬೆಳೆಯೋಣವೆಂದರೆ, ಕಡ್ಡಿ ನಾಟಿ ಮಾಡಿ, ಅದಕ್ಕೆ ಆರೈಕೆ ಮಾಡಿ, ಫ‌ಸಲು ನೀಡುವ ವೇಳೆಗೆ ಕನಿಷ್ಠ 6 ತಿಂಗಳಾದರೂ ಬೇಕು. ಆ ವೇಳೆಗೆ ನೀರು ಲಭ್ಯವಿರುವುದೆ ಎಂಬ ಅನುಮಾನ ಮೂಡಿದೆ. ಹಾಗಾಗಿ, ಎಂದಿನಂತೆ ತಮಿಳುನಾಡಿನತ್ತ ಪ್ರಯಾಣ ಬೆಳೆಸುವುದು ತಪ್ಪದು ಎನ್ನುತ್ತಾರೆ ರೈತರು. 

ನೀರಿನ ಅಭಾವದಿಂದ, ಹಿಪ್ಪುನೇರಳೆ ಸೊಪ್ಪು ಬೆಳೆಯಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಕೊಳಚೆ ನೀರು ಬಳಕೆ
ಮಾಡಿಕೊಂಡು ಸಾವಿರಾರು ಎಕರೆಯಲ್ಲಿ ತಮಿಳು ನಾಡಿನಲ್ಲಿ ಬೆಳೆಯುವ, ಕೋಲಾರ ಮತ್ತಿತರ ಭಾಗಕ್ಕೆ ಹೋಲಿಕೆ ಮಾಡಿದರೆ, ಕಡಿಮೆ ಧರಕ್ಕೆ ಲಭ್ಯವಾಗುವ ಹಿಪ್ಪುನೇರಳೆ ಅವಲಂಭಿಸಿದ್ದೇವೆ.

10 ವರ್ಷದಿಂದ ರೇಷ್ಮೆ ಕೃಷಿಯಲ್ಲಿ ತೊಡಗಿರುವ ಯಲುವಗುಳಿ ಮತ್ತಿತರ ಗ್ರಾಮದ ಹಲವು ಮಂದಿ ತಮಿಳುನಾಡಿನಲ್ಲೆ ಹಿಪ್ಪುನೇರಳೆ ಸೊಪ್ಪನ್ನು ಖರೀದಿಸುವಂತಾಗಿದೆ.
ಕಿ ವೆಂಕಟೇಶಪ್ಪ, ಟೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next