Advertisement
ಗದಗ: ಕೊರೊನಾ ಸೋಂಕು ತಡೆಯುವಲ್ಲಿ ರಾಮಬಾಣವಾಗಿರುವ ಕೋವಿಡ್ ಲಸಿಕೆಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಲಸಿಕೆ ಪಡೆದ ಲಕ್ಷಾಂತರ ಜನರಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಸೋಂಕು ಕಂಡು ಬಂದಿದೆ.
Related Articles
Advertisement
ಇತ್ತೀಚೆಗೆ ದಿನಕ್ಕೆ 5-6 ಸಾವಿರ ಡೋಸ್ ಲಸಿಕೆ ಪೂರೈಕೆಯಾದರೂ ಒಂದೆರಡು ದಿನಕ್ಕೆ ಖಾಲಿಯಾಗುತ್ತಿದೆ. ಈ ಹಿಂದೆ ಬೇಡವೆಂದಿದ್ದ ಜನರೂ ಲಸಿಕಾ ಕೇಂದ್ರಗಳ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂಬುದು ವಿಶೇಷ.
ಮೂರೇ ದಿನದಲ್ಲಿ 2 ಸಾವಿರ ಜನರಿಗೆ ಲಸಿಕೆ: ಈ ನಡುವೆ ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಘೋಷಿಸಿ, ಆ ನಂತರ ಲಸಿಕೆ ಅಭಾವದಿಂದ ಮುಂದೂಡಿತು. ಈ ನಡುವೆ ಚಾಲ್ತಿಯಲ್ಲಿದ್ದ ಮೂರೇ ದಿನಗಳಲ್ಲಿ ಜಿಲ್ಲೆಯ 2,100 ಜನರು ಲಸಿಕೆ ಪಡೆದಿದ್ದಾರೆ. ಇನ್ನೂ ಅನೇಕರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.
ಯಾರ್ಯಾರಿಗೆ ಎಷ್ಟು ಸಲ್ಲಿಕೆ?: ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು 9122, ಮುಂಚೂಣಿ ಕಾರ್ಯಕರ್ತರು 4856 ಜನರು ಲಸಿಕೆ ಪಡೆದು ಶೇ.100 ಗುರಿ ಸಾ ಧಿಸಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ನಿಗಿದಪಡಿಸಿದ್ದ 89975ರಲ್ಲಿ 65456 ಜನ ಮೊದಲ ಡೋಸ್, 22752 ಎರಡನೇ ಡೋಸ್, 45 ವರ್ಷ ಮೇಲ್ಪಟ್ಟವರಿಗೆ ನಿಗದಿಪಡಿಸಿದ್ದ 177129 ಜನರಲ್ಲಿ 66088 ಜನರು ಮೊದಲ ಡೋಸ್ ಮತ್ತು 19376 ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಅಲ್ಲದೇ ವಿವಿಧ ಆದ್ಯತೆ ಗುಂಪಿನಲ್ಲಿ ಗುರುತಿಸಿಕೊಂಡ 18 ವರ್ಷ ಮೇಲ್ಪಟ್ಟವರಲ್ಲಿ 11282 ಜನರು ಲಸಿಕೆ ಪಡೆದಿದ್ದಾರೆ.