Advertisement

ಬಾಲಕರ ಸಾವಿನ ಬಳಿಕ ಹೆಚ್ಚಿದ ಆತಂಕ

10:02 AM Feb 04, 2022 | Team Udayavani |

ವಾಡಿ: ಚಿಕನ್‌ ಪಾಕ್ಸ್‌ ಇಬ್ಬರು ಬಾಲಕರನ್ನು ಬಲಿ ಪಡೆದ ನಂತರ ನಾಲವಾರ ಗ್ರಾಮದ ಸ್ಟೇಷನ್‌ ಬಡಾವಣೆ ಜನರು ಆತಂಕಕ್ಕೊಳಗಾಗಿದ್ದಾರೆ.

Advertisement

ಕಪ್ಪು-ರಕ್ತ ರೂಪದ ಕೆಂಪು ಕಲೆಗಳಿಂದ ಬಾಲಕರಾದ ಇಮ್ರಾನ್‌ (9) ಹಾಗೂ ರೆಹಮಾನ್‌ (16) ಬಳಲಿ ಮೃತಪಟ್ಟ ಘಟನೆಯಿಂದ ಇಡೀ ಊರು ಬೆಚ್ಚಿ ಬಿದ್ದಿದೆ.

ಪಟೇಲ ಕುಟುಂಬದ ಮೂವರು ಇದೇ ಕಾಯಿಲೆಯಿಂದ ಬಳಲಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಓಣಿ ಜನರು ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಹೆದರುತ್ತಿದ್ದಾರೆ. ತಾಯಿ ಹಫೀಜಾಬೇಗಂ ಮತ್ತು ಅವರ ಇನ್ನಿಬ್ಬರು ಮಕ್ಕಳಿಗೂ ರೋಗ ಅಂಟಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ಬಳಿಕ ಮೃತ ಬಾಲಕರ ತಾಯಿ ಮತ್ತು ಸಹೋದರ-ಸಹೋದರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ತಪಾಸಣೆ ಆರಂಭ

ಪಟೇಲ ಕುಟುಂಬ ಸದಸ್ಯರ ನಂತರ ಬಡಾವಣೆಯ ಇತರೆ ಕುಟುಂಬಗಳಿಗೂ ಈ ರೋಗ ಹರಡುತ್ತಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಜ.31ರಂದು ಕಾಯಿಲೆ ಮರಣಮೃದಂಗ ಬಾರಿಸಿದ ಬಳಿಕ ಎಚ್ಚೆತ್ತ ತಾಲೂಕು ಆರೋಗ್ಯ ಇಲಾಖೆ, ರೋಗ ಲಕ್ಷಣ ಇರುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದೆ.

Advertisement

ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ನಾಲವಾರ ಸ್ಟೇಷನ್‌ ಬಡಾವಣೆಯ ಜನರ ಮನೆ-ಮನೆಗೆ ತೆರಳಿ ರಕ್ತದ ಸ್ಯಾಂಪಲ್‌ ಸಂಗ್ರಹಿಸಿದ್ದಾರೆ. ಬಡಾವಣೆಯ ನಿವಾಸಿಗಳ ರೋಗದ ಲಕ್ಷಣದ ಮೇಲೆ ನಿಗಾ ವಹಿಸಿರುವ ಅವರು, ಪ್ರತಿದಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇಬ್ಬರು ಮಕ್ಕಳು ಮೃತಪಟ್ಟು ಮೂವರು ಆಸ್ಪತ್ರೆಗೆ ದಾಖಲಾದ ಬಳಿಕ ನಾಲವಾರ ಗ್ರಾಮದ ಸ್ಟೇಷನ್‌ ಬಡಾವಣೆ ನಿವಾಸಿಗಳ ರಕ್ತ ಮಾದರಿ ಸಂಗ್ರಹಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಮನೆ-ಮನೆಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದಾರೆ. ಚಿಕನ್‌ ಪಾಕ್ಸ್‌ ಕಾಯಿಲೆ ಪತ್ತೆಗಾಗಿ ಪರೀಕ್ಷೆ ನಡೆಯುತ್ತಿದೆ. ಕುಟುಂಬಕ್ಕೆ ವ್ಯಾಪಿಸಿ ಇಬ್ಬರ ಬಲಿ ಪಡೆದ ರೋಗ ಯಾವುದು ಎಂಬುದು ಪ್ರಯೋಗಾಲಯದ ವರದಿ ಬಂದ ನಂತರ ಬಹಿರಂಗ ಪಡಿಸುತ್ತೇವೆ. ಐದಾರು ದಿನದಲ್ಲಿ ಇದು ಬೆಳಕಿಗೆ ಬರಲಿದೆ. -ಡಾ|ಅಮರದೀಪ ಪವಾರ, ಟಿಎಚ್‌ಒ-ಚಿತ್ತಾಪುರ

Advertisement

Udayavani is now on Telegram. Click here to join our channel and stay updated with the latest news.

Next