Advertisement
ಮಾಲ್ಡೋವಾ ತೊರೆಯಲು ಅವಕಾಶವಿಲ್ಲದೆ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಭಾರತೀಯ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಉಕ್ರೇನ್‌ನೊಂದಿಗೆ ಶೇ. 70ರಷ್ಟು ಗಡಿ ಹಂಚಿಕೊಂಡಿರುವ ಮಾಲ್ಡೋವಾದಲ್ಲಿ ಈಗ ಉಕ್ರೇನ್‌ನಿಂದ ವಲಸೆ ಬಂದಿರುವವರು ತುಂಬಿ ಹೋಗಿದ್ದಾರೆ. ಮಾಲ್ಡೋವಾದ ಹಾಸ್ಟೆಲ್‌ಗಳು ಕೂಡ ಉಕ್ರೇನ್ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿವೆ. ರಷ್ಯಾದ ಆಕ್ರಮಣ ಇನ್ನಷ್ಟು ದಿನ ಮುಂದುವರಿದರೆ ಮಾಲ್ಡೋವಾದ ಮೇಲೆ ಭಾರೀ ಒತ್ತಡ ಬೀಳಲಿದೆ.
Related Articles
ಮಾಲ್ಡೋವಾದಲ್ಲಿ ಭಾರತದ 800ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಕರ್ನಾಟಕದವರೂ ಹಲವರಿದ್ದಾರೆ. ಸದ್ಯ ಮಾಲ್ಡೋವಾದ ವಿಶ್ವವಿದ್ಯಾನಿಲಯಗಳಲ್ಲಿ ತರಗತಿಗಳು ನಡೆಯುತ್ತಿವೆ. ವಿದ್ಯಾಭ್ಯಾಸಕ್ಕೆ ತೊಡಕಾಗಿಲ್ಲ. ಮಾಲ್ಡೋವಾದ ಮೇಲೂ ಆಕ್ರಮಣವಾಗಬಹುದು ಎಂಬ ಆತಂಕದಿಂದ ಸುರಕ್ಷೆಯ ಭೀತಿ ದಿನೇ ದಿನೆ ಹೆಚ್ಚುತ್ತಿದೆ. ಒಂದು ವೇಳೆ ಭಾರತಕ್ಕೆ ಬಂದರೆ ಮಾಲ್ಡೋವಾಕ್ಕೆ ವಾಪಸಾಗುವುದು ಕಷ್ಟ. ಯುನಿವರ್ಸಿಟಿಯವರು ಕೂಡ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಈ ದೇಶದಲ್ಲಿ ಭಾರತೀಯ ರಾಯಭಾರ ಕಚೇರಿಯೂ ಇಲ್ಲ ಎಂದು ಮಾಲ್ಡೋವಾದಲ್ಲಿರುವ ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
Advertisement