Advertisement
ಓಟ ಆರಂಭಿಸುವ ಮುನ್ನ 4-5 ನಿಮಿಷದ ನಡಿಗೆ, ಚಿಕ್ಕದಾದ ಜಾಗಿಂಗ್ ಮಾಡುವುದು ಉತ್ತಮ.ಓಟ ಆರಂಭದ ಸುಮಾರು 30 ಸೆಕೆಂಡ್ ಮಧ್ಯಮ ವೇಗದಲ್ಲಿರಲಿ.
ಸುಮಾರು 20 ನಿಮಿಷ ಈ ಥರದ ಓಟವಿರಲಿ.
ಮುಂದಿನ ಹಂತ
ಈ ಥರದ ಆರಂಭಿಕ ಹಂತವನ್ನು ನೀವು ಪ್ರಾಯೋಗಿಕವಾಗಿ ಜಾರಿಗೊಳಿಸಿದ ಅನಂತರ ಮುಂದಿನ ಹೆಜ್ಜೆ ಇಡಬಹುದು. ಈಗ ನೀವು ಓಟದ ಸಮಯವನ್ನು ಹೆಚ್ಚಿಸಬಹುದು. ಇದಕ್ಕೆ ನಡೆಸಬೇಕಾದ ತಯಾರಿ:
ಆರಂಭದ ಹಂತದಂತೆ ಇಲ್ಲೂ 5 ನಿಮಿಷ ವಾಕಿಂಗ್, ಜಾಗಿಂಗ್ ನಡೆಸಿ.
ಅನಂತರ ಶೇ. 80ರಷ್ಟು ಬಲ ಪ್ರಯೋಗಿಸಿ 45 ಸೆಕೆಂಡ್ ಓಡಿ.
ಬಳಿಕ ವೇಗ ಸ್ವಲ್ಪ ತಗ್ಗಿಸಿ.
ಮತ್ತೆ ಇದನ್ನು ಪುನರಾವರ್ತಿಸಿ. ಹೀಗೆ 20ರಿಂದ 30 ನಿಮಿಷ ವ್ಯಾಯಾಮ ಮಾಡಬಹುದು.
ಈ ಥರದ ವ್ಯಾಯಾಮ ಹೃದಯ ರಕ್ತನಾಳದ ಸಾಮರ್ಥ್ಯ ಹೆಚ್ಚಿಸುತ್ತದೆ. ಮಾತ್ರವಲ್ಲ ಕ್ಯಾಲರಿಯನ್ನು ಗರಿಷ್ಠ ಪ್ರಮಾಣದಲ್ಲಿ ಕರಗಿಸುತ್ತದೆ. ಜತೆಗೆ ಸ್ನಾಯುಗಳನ್ನು ದೃಢಗೊಳಿಸುತ್ತದೆ ಎನ್ನುತ್ತದೆ ಅಧ್ಯಯನ.
ಈ ರೀತಿಯ ವೇಗದ ಓಟಕ್ಕೆ ತುಂಬಾ ಶಕ್ತಿ ಅಗತ್ಯವಿರುವುದರಿಂದ ನಿಮ್ಮಲ್ಲಿ ಹೊಸ ಲವಲವಿಕೆ ಮೂಡುತ್ತದೆ. ಇಡೀ ದಿನ ಚಟುವಟಿಕೆಯಿಂದ ಇರಲು ನೆರವಾಗುತ್ತದೆ. ಒತ್ತಡ ನಿವಾರಣೆ
ಸ್ಪ್ರಿಂಟ್ ವ್ಯಾಯಾಮ ಎಂದು ಕರೆಯಲ್ಪಡುವ ಈ ಮಾದರಿಯ ಓಟ ದೈಹಿಕ ದೃಢತೆ ಮಾತ್ರವಲ್ಲ ಮಾನಸಿಕ ದೃಢತೆಗೆ ಸಹಕಾರಿ. ಅಂದರೆ ಇದನ್ನು ಒತ್ತಡ ನಿವಾರಣೆಗಾಗಿಯೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಹೀಗಾಗಿ ಸ್ಪ್ರಿಂಟ್ ವ್ಯಾಯಾಮ ನಿಮ್ಮ ದಿನಚರಿಯ ಭಾಗವಾಗಲಿ.