Advertisement

ಗೋವುಗಳ ಬದಲಾಗಿ ವಾಹನಗಳ ಸಂಖ್ಯೆ ಹೆಚ್ಚಳ

12:48 PM May 17, 2017 | Team Udayavani |

ಹುಬ್ಬಳ್ಳಿ: ದೇಶಾದ್ಯಂತ ಗೋಮಾತೆ ರಕ್ಷಣೆಗಾಗಿ ಆಂದೋಲನಗಳನ್ನು ಮಾಡಲಾಗುತ್ತಿದೆ. ಆದರೆ, ಬಹುತೇಕರ ಮನೆಗಳಲ್ಲಿ ಗೋವುಗಳೇ ಇಲ್ಲ. ಅದರ ಬದಲು ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂದು ರಾಷ್ಟ್ರಸಂತ ಲಲಿತಪ್ರಭಾ ಸಾಗರ ಮಹಾರಾಜರು ವಿಷಾದ ವ್ಯಕ್ತಪಡಿಸಿದರು. 

Advertisement

ವರೂರಿನ ಶ್ರೀ ನವಗ್ರಹ ತೀರ್ಥಕ್ಷೇತ್ರದ ಎಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಮನುಷ್ಯನ ಆರೋಗ್ಯ ಹಾಗೂ ಆರ್ಥಿಕತೆಗೆ ಪೂರಕವಾದ ಗೋವುಗಳನ್ನು ಸಲಹುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಎಲ್ಲರೂ ವಾಹನಗಳನ್ನೆ ಬಯಸುತ್ತಿದ್ದಾರೆ. ಗೋವು ತಾನಾಗಿಯೇ ಹಾಲು ಕೊಡುವುದಿಲ್ಲ. ಬದಲಾಗಿ ನಾವು ಪಡೆದುಕೊಳ್ಳಬೇಕು. ಶ್ರಮಪಟ್ಟಾಗ ಮಾತ್ರ ಫಲ ಪಡೆಯಲು ಸಾಧ್ಯ ಎಂದರು. ಆತ್ಮವಿಶ್ವಾಸ ದೃಢವಾಗಿದ್ದರೆ ಕೆಟ್ಟ ಸಮಯದಲ್ಲೂ ಅದು ನಮ್ಮನ್ನು ಎತ್ತಿ ಹಿಡಿಯುತ್ತದೆ.

ಸಮಯಕ್ಕೆ ಸರಿಯಾಗಿ ಬುದ್ಧಿಶಕ್ತಿ ಬಳಸಿಕೊಳ್ಳಬೇಕು. ಅಂದಾಗಲೇ ಯಶಸ್ಸು ಕಾಣಲು ಸಾಧ್ಯ. ಪರಿಶ್ರಮದಿಂದ ಪಡೆದ ಯಶಸ್ಸು, ಲಾಭದಿಂದ ಸಂತೃಪ್ತಿಯ ಪರಿಣಾಮ ಕಾಣಬಹುದು ಎಂದು ಹೇಳಿದರು. 

ರಾಷ್ಟ್ರಸಂತ ಚಂದ್ರಪ್ರಭ ಸಾಗರ ಮಹಾರಾಜರು ಮಾತನಾಡಿ, ದೇವಸ್ಥಾನ, ಮಂದಿರ, ಮಸೀದಿ, ಚರ್ಚ್‌, ಗುರುದ್ವಾರ ಕಟ್ಟಿದರೆ ಅವುಗಳಿಗೆ ಆಯಾ ಧರ್ಮದವರು ಮಾತ್ರ ಪ್ರವೇಶ ಮಾಡುತ್ತಾರೆ. ಅದೇ ಶಿಕ್ಷಣ ಸಂಸ್ಥೆ ನಿರ್ಮಿಸಿದರೆ ಜಾತಿ, ಧರ್ಮವೆಂಬ ಬೇಧವಿಲ್ಲದೆ ಎಲ್ಲ ವರ್ಗದವರೂ ಪ್ರವೇಶಿಸುತ್ತಾರೆ. ಶಿಕ್ಷಣವಂತರಾಗುತ್ತಾರೆ. 

Advertisement

ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ರಾಷ್ಟ್ರಸಂತ ಗುಣಧರ ನಂದಿ ಮಹಾರಾಜರು ಮಾತನಾಡಿ, ಕಲಿಯಲೇಬೇಕೆಂಬ ಆಸೆಯುಳ್ಳ ಪಾಲಕರಿಲ್ಲದ ಅನಾಥ ಮಕ್ಕಳಿಗೆ ವರೂರಿನ ಎಜಿಎಂ ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿಯಿಂದ ಪಿಯುಸಿ ವರೆಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು. ಜೊತೆಗೆ ವಸತಿ, ಊಟ ಕೊಡಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next