Advertisement

ಎಲ್ಲ ಕ್ಷೇತ್ರಗಳಲ್ಲೂ ಚಾಣಕ್ಯರ ಸಂಖ್ಯೆ ಹೆಚ್ಚಳ: ಶಾಸಕ ಜಾರಕಿಹೊಳಿ

04:51 PM Nov 22, 2018 | Team Udayavani |

ಬೆಳಗಾವಿ: ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಚಾಣಕ್ಯರಿದ್ದಾರೆ. ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಇಂದಿನ ಯುಗದಲ್ಲಿ ಸಾವಿರಾರೂ ಚಾಣಕ್ಯರನ್ನು ನಾವು ಕಾಣಬಹುದಾಗಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದ ಜೆಎನ್‌ಎಂಸಿಯ ಡಾ| ಎಚ್‌.ಬಿ. ರಾಜಶೇಖರ ಕನ್ವೆನ್ಶನ್‌ ಹಾಲ್‌ನಲ್ಲಿ ಬುಧವಾರ ಸಿದ್ಧಾರ್ಥ ವಾಡೆನ್ನವರ ಅವರ ಪೀಪಲ್ಸ್‌ ಚಾಣಕ್ಯ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕಾಲಮಾನದಲ್ಲಿ ಎಲ್ಲರೂ ಅವರವರಿಗೆ ಚಾಣಕ್ಯರೇ. ರಾಜಕಾರಣದಲ್ಲಿ ಶಾಸಕರು ತಮ್ಮ ಆಡಳಿತ ನಡೆಸಲು, ಅಧಿಕಾರಿಗಳು ಖುರ್ಚಿ ಉಳಿಸಿಕೊಳ್ಳಲು, ಪತ್ರಕರ್ತರರು ತಮ್ಮ ಬುದ್ಧಿ ಮತ್ತೆಯಿಂದ ಚಾಣಕ್ಯ ನೀತಿ ಅನುಸರಿಸುತ್ತಾರೆ. ಚಾಣಕ್ಯರಾಗದಿದ್ದರೆ ಬದುಕಲು ಆಗುವುದಿಲ್ಲ ಎಂದರು.

Advertisement

ಸಾಧನೆ ಯಾವಾಗಲೂ ನಿಂತ ನೀರಾಗಬಾರದು. ಅವಕಾಶ ಸಿಕ್ಕಾಗ ಸಾಧನೆ ಮಾಡುವಂತಾಗಬೇಕು. ಮಾಲೀಕರಿಲ್ಲದೇ ನಡೆಯುತ್ತಿರುವ ದೇಶದ ಏಕೈಕ ಸಕ್ಕರೆ ಕಾರ್ಖಾನೆ ನಮ್ಮದಾಗಿದೆ. ಸ್ವತಂತ್ರವಾಗಿ ನಿರ್ಧಾರ ನಮ್ಮ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವವರೇ ತೆಗೆಳುತ್ತಾರೆ. ಜತೆಗೆ ಶೈಕ್ಷಣಿಕ ಹಾಗೂ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, 22 ಅನಾಥಾಶ್ರಮಗಳಿಗೆ ಊಟ, ಬಟ್ಟೆ, ಔಷಧೋಪಚಾರ ನೀಡಿ ಸಮಾಜಮುಖೀ ಕೆಲಸ ಮಾಡಲಾಗುತ್ತಿದೆ.

ಇದು ಕೂಡ ಒಂದು ಸಾಧನೆಯಾಗಿದೆ. ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಅನೇಕ ಹೋರಾಟ ನಡೆಸಲಾಗುತ್ತಿದೆ. ನಮಗೆ ಸಿಕ್ಕ ಲಾಭದಲ್ಲಿ ಕೋಟ್ಯಂತರ ರೂ. ಸಮಾಜಕ್ಕೆ ಪೇ ಬ್ಯಾಕ್‌ ಮಾಡುತ್ತಿದ್ದೇವೆ ಎಂದರು. ಸಂಪಾದಕ ವಿಶ್ವೇಶ್ವರ ಭಟ್‌ ಮಾತನಾಡಿ, ಭೂಮಿ ಮೇಲೆ ಎಲ್ಲವನ್ನೂ ನಾಶ ಮಾಡಲು ಸಾಧ್ಯವಿದೆ. ಆದರೆ ಅಕ್ಷರವನ್ನು ಎಂದಿಗೂ ನಾಶ ಮಾಡಲು ಆಗುವುದಿಲ್ಲ. ಮಾನವ ಜನ್ಮ ಇರೋವರೆಗೂ ಅಕ್ಷರ ಅನರ್ಘ್ಯ ರತ್ನ. ಸಾಧನೆ ನಿರಂತರವಾಗಿ ಇರಬೇಕು. ಪ್ರತಿ ದಿನವೂ ಯಶಸ್ಸು ಸಾಧಿಸುವಂತಾಗಬೇಕು. ಅದಕ್ಕೆ ಪರಿಸರ, ಅಧ್ಯಯನ ಅಡ್ಡಿ ಆಗಬಾರದು. ಕುಗ್ರಾಮದಲ್ಲಿ ಇದ್ದರೂ ಸಾಧನೆ ಮಾಡಬಹುದು. ನಮ್ಮ ಸಾಧನೆಯೇ ಮಾತನಾಡಲು ಆರಂಭಿಸುತ್ತದೆ ಎಂದರು.

ಕೆಪಿಸಿಸಿ ವಕ್ತಾರ ಎಂ. ನಾಗರಾಜ ಯಾದವ ಮಾತನಾಡಿ, ಕವಲು ದಾರಿಯಲ್ಲಿರುವ ರಾಜಕಾರಣಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಈ ಪುಸ್ತಕ ಅವಶ್ಯವಿದೆ. ಯಾವ ಕಾರಣಕ್ಕೆ, ಯಾವ ಉದ್ದೇಶಕ್ಕೆ ಸಾಧನೆ ಮಾಡಬೇಕು ಎಂಬುದರ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.

ಅಬಕಾರಿ ಇಲಾಖೆ ಜಂಟಿ ಆಯುಕ್ತ ವೈ. ಮಂಜುನಾಥ ಮಾತನಾಡಿ, ನಾಯಕತ್ವ ಗುಣ ಉಳಿಸಿಕೊಳ್ಳಲು ಹಾಗೂ ಬೆಳೆಸಿಕೊಳ್ಳಲು ಚಾಣಕ್ಯ ಹೇಳಿರುವ ಅಂಶಗಳನ್ನು ತಿಳಿದುಕೊಳ್ಳಬೇಕಾಗಿದೆ. ಈ ಬಗ್ಗೆ ಪೀಪಲ್ಸ್‌ ಚಾಣಕ್ಯ ಪುಸ್ತಕದಲ್ಲಿ ನಮೂದಿಸಲಾಗಿದೆ ಎಂದು ವಿವಿಧ ದೃಷ್ಟಾಂತಗಳನ್ನು ಹೇಳುವ ಮೂಲಕ ವಿವರಿಸಿದರು.

Advertisement

ನಿರಾಣಿ ಉದ್ಯಮ ಸಮೂಹದ ಕಾರ್ಯನಿರ್ವಾಹಕ ಅಧಿಕಾರಿ ಸಂಗಮೇಶ ನಿರಾಣಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರು ಜೋರಾಗಿ ಹೋರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೂ ಕಾರ್ಖಾನೆಗಳನ್ನು ಬಂದ್‌ ಮಾಡಿದ್ದೇವೆ. ಕಾರ್ಮಿಕ ವರ್ಗದವರು ಹಾಗೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉದ್ದಿಮೆ ನಡೆಸಲಾಗುತ್ತಿದೆ ಎಂದರು. ನಿವೃತ್ತ ಉಪನ್ಯಾಸಕ ಜಿ.ವಿ. ಮಾಳಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next