ಕುಳಾಯಿ: ಸ್ವತ್ಛತೆ ಪ್ರತಿ ಮನೆಗಳಲ್ಲೂ ಇರಲಿ. ತನ್ಮೂಲಕ ದೇಶಕ್ಕೆ ಪ್ರತಿಯೋರ್ವ ನಾಗರಿಕನೂ ತನ್ನ ಬದ್ಧತೆಯನ್ನು ತೋರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವ ನಾಗರಿಕನೂ ಸಂಘ ಸಂಸ್ಥೆಗಳೂ ಸ್ವತ್ಛತಾ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುತ್ತಿರುವ ನಮ್ಮ ದೇಶವು ಸ್ವತ್ಛತೆಯನ್ನು ಕಾಪಾಡಿಕೊಂಡಲ್ಲಿ ದೇಶದ ಗೌರವವು ಹೆಚ್ಚುವುದು ಹಾಗೂ ಪ್ರವಾಸೋದ್ಯಮದ ಬೆಳವಣಿಗೆಗೆ ವಿಪುಲವಾದ ಅವಕಾಶಗಳಾಗುವುದೆಂದು ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಕೃಷ್ಣ ಹೆಬ್ಟಾರ್ ಹೇಳಿದರು. ಅವರು ರಾಮಕೃಷ್ಣ ಮಿಷನ್ ಮಂಗಳೂರು, ನಾಗರಿಕ ಸಲಹಾ ಸಮಿತಿ ಸುರತ್ಕಲ್ ಹಾಗೂ ಇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಎಂ.ಆರ್.ಪಿ.ಎಲ್. ನೆರವಿನೊಂದಿಗೆ ನಡೆಯುವ ರಾಮಕೃಷ್ಣ ಮಿಷನ್ ಸ್ವತ್ಛ ಸುರತ್ಕಲ್ ಅಭಿಯಾನದ 48ನೇ ವಾರದ ಸ್ವತ್ಛತಾ ಶ್ರಮದಾನವನ್ನು ಕುಳಾಯಿ ಪರಿಸರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಾಜಿ ಮೇಯರ್ ಹಾಗೂ ಮಾಜಿ ಮನಪಾ ಸದಸ್ಯ ಗಣೇಶ್ ಹೊಸಬೆಟ್ಟು ಮಾತನಾಡಿ ಮುಂದಿನ ದಿನಗಳಲ್ಲಿ ಕಸದ ವಿಲೇವಾರಿಗೆ ಹೊಸ ವಿಧಾನಗಳು ಬರಲಿದ್ದು ಕಸವನ್ನು ಸ್ಥಳೀಯವಾಗಿ ನಿರ್ವಹಿಸುವ ಅಗತ್ಯವಿದೆಯೆಂದರು.
ಶ್ರಮದಾನದಲ್ಲಿ ಕೈಜೋಡಿಸಿದ ವಿವಿಧ ಸಂಘಟನೆಗಳು
48ನೇ ವಾರದ ಶ್ರಮದಾನದಲ್ಲಿ ಗೋವಿಂದದಾಸ ಕಾಲೇಜಿನ ಎನ್ನೆಸೆಸ್ ವಿದ್ಯಾರ್ಥಿಗಳು, ಸ್ಪಂದನಾ ಫ್ರೆಂಡ್ಸ್ ಕುಳಾಯಿ, ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ, ಯಂಗ್ ಫ್ರೆಂಡ್ಸ್ ಕುಳಾಯಿ, ಕೆ.ಸಿ. ಫ್ರೆಂಡ್ಸ್ ಕುಳಾಯಿ ಮುಂತಾದ ಸಂಘಟನೆಗಳ 90ಕ್ಕೂ ಮಿಕ್ಕಿ ಸ್ವಯಂಸೇವಕರು 5 ಗುಂಪುಗಳಾಗಿ ಶ್ರಮದಾನದಲ್ಲಿ ಭಾಗವಹಿಸಿದ್ದರು.
ನಾಗರಿಕ ಸಮಿತಿ ಕುಳಾಯಿ ಅಧ್ಯಕ್ಷ ಭರತ್ ಶೆಟ್ಟಿ, ರಂಜಿತ್ ಕುಳಾಯಿ, ರಾಜೇಶ್ ಕುಳಾಯಿ, ಲೋಕನಾಥ್ ಅಮೀನ್ ನೇತೃತ್ವದ ಮೊದಲ ಗುಂಪು ವಿಷ್ಣುಮೂರ್ತಿ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಭಾರತಿ ಆಂಗ್ಲ ಮಾಧ್ಯಮ ಶಾಲೆಯವರೆಗಿನ ಪ್ರದೇಶವನ್ನು ಸ್ವತ್ಛಗೊಳಿಸಿತು.
ಎಂ.ಟಿ. ಸಾಲ್ಯಾನ್, ಬಿ.ಬಿ.ರೈ, ರಮೇಶ್ ಅಳಪೆ, ದೀಪಕ್ ಕುಳಾಯಿ, ರವಿ ಮೂಡಬೆಟ್ಟು, ರಾಘವೇಂದ್ರ ನೇತೃತ್ವದ ಎರ ಡನೇ ಗುಂಪು ವಿಷ್ಣುಮೂರ್ತಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಉತ್ತರ ದಿಕ್ಕಿಗೆ ಶ್ರಮದಾನ ಮಾಡಿದರು.
ಗೋವಿಂದದಾಸ ಕಾಲೇಜಿನ ಎನ್ನೆಸ್ಸೆಸ್ ಅ ಧಿಕಾರಿ ಪೂರ್ಣಿಮಾ ಗೋಖಲೆ, ಪ್ರವೀಣ್ ಕುಳಾಯಿ, ಕೃಷ್ಣ ಪಿ. ಅಂಚನ್, ವಿದ್ಯಾರ್ಥಿ ನಾಯಕರಾದ ಸಮನ್ವಿತಾ, ಮನೀಷ್, ಯಶಸ್ವಿನಿ ನೇತೃತ್ವದ ಮೂರನೇ ತಂಡದವರು ವಿಷ್ಣುಮೂರ್ತಿ ದೇವಸ್ಥಾನದ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿವರೆಗಿನ ಸ್ಥಳವನ್ನು ಶುಚಿಗೊಳಿ ಸಿದರು.
ಗೋವಿಂದದಾಸ ಕಾಲೇಜಿನ ಉಪ ಪ್ರಾಂಶುಪಾಲ ಕೃಷ್ಣಮೂರ್ತಿ, ಪ್ರಾಧ್ಯಾಪಕ ರಮೇಶ್ ಭಟ್, ಭಾರತೀಯ ಸೇನೆಯ ನಿವೃತ್ತ ಅ ಧಿಕಾರಿ ಗೋಪಿನಾಥ್ ರಾವ್, ಆನಂದ್ ರಾವ್ ಕುಳಾಯಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಪಿ. ಚಂದ್ರಶೇಖರ್ ನೇತೃತ್ವದ 5ನೇ ತಂಡದವರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿಬಿದ್ದಿದ್ದ ಬೃಹತ್ ತ್ಯಾಜ್ಯವನ್ನು ಜೆ.ಸಿ.ಬಿ ಹಾಗೂ ಲಾರಿಯ ಸಹಾಯದಿಂದ ಕಿಂಗ್ಸ್ ಮಾರ್ಬಲ್ ಮಾಲಕರ ಸಹಕಾರದೊಂದಿಗೆ ತೆರವುಗೊಳಿಸಿ ಸುಂದರಗೊಳಿಸಲಾಯಿತು.
ಅಂಕುರ್ ಶಾಲಾ ಸಂಚಾಲಕ ಶಂಭು ಮೂಲ್ಯ, ಮಾಜಿ ಮನಪಾ ಸದಸ್ಯೆ ವೇದಾವತಿ ಉಪಸ್ಥಿತರಿದ್ದರು. ಯೋಗೀಶ್ ಸನಿಲ್ ಸ್ವಾಗತಿಸಿ, ರಾಮಕೃಷ್ಣ ಮಿಷನ್ ಸ್ವತ್ಛ ಸುರತ್ಕಲ್ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್ ಸ್ವಯಂಸೇವಕರಿಗೆ ಅಗತ್ಯ ಮಾಹಿತಿ ನೀಡಿದರು.
ಸ್ವತ್ಛತೆಯ ಅರಿವು ಜಾಗೃತಿ
ಪರಿಸರದ ನಿವಾಸಿಗಳಿಗೆ, ವಲಸೆ ಕಾರ್ಮಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ಶಿಕ್ಷಕಿ ಸಾವಿತ್ರಿ ರಮೇಶ್ ಭಟ್, ಶಾರದಾ ಮಾತೃ ಮಂಡಳಿಯ ಸುಜಯಾ ಶೆಟ್ಟಿ, ತಾರಾ ಅಶೋಕ್, ಶಕುಂತಳಾ ಪ್ರಕಾಶ್, ಸುರೇಶ್ ಶೆಣೈ ನೇತೃತ್ವದ ನಾಲ್ಕನೇ ತಂಡದವರು ಮಲೇರಿಯಾ ಡೆಂಗ್ಯೂ ಮುಂತಾದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸ್ವತ್ಛತೆಯ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು.