ಬಜೆಟ್‌ನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಗಳಡಿ ನೀಡುತ್ತಿರುವ ಪಿಂಚಣಿ ಮೊತ್ತವನ್ನು 500 ರೂ.ಗಳಿಂದ 600 ರೂ.ಗಳಿಗೆ ಹೆಚ್ಚಿಸುವ ಘೋಷಣೆ ಮಾಡಲಾಗಿದೆ. ಇದರಿಂದ 48 ಲಕ್ಷ ಫಲಾನುಭವಿಗಳಿಗೆ ಅನುಕೂಲ ವಾಗಲಿದ್ದು, ರಾಜ್ಯ ಸರ್ಕಾರ ಇದಕ್ಕಾಗಿ 576 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವೆಚ್ಚಮಾಡಲಿದೆ.
2015ರಿಂದ ಆರಂಭಗೊಂಡ ಪೋಡಿ ಮುಕ್ತ ಅಭಿಯಾನದಿಂದ ರಾಜ್ಯದ 7,869 ಗ್ರಾಮಗಳು ಪೋಡಿ ಮುಕ್ತಗೊಂಡಿದ್ದು, 2018-19ನೇ ಸಾಲಿನಲ್ಲಿ 2,500 ಗ್ರಾಮವನ್ನು ಪೋಡಿ ಮುಕ್ತ ಮಾಡಲಾಗು ವುದು. ಆನ್‌ಲೈನ್ ಹಾಗೂ ಒವರ್ ದಿ ಕೌಂಟರ್ ಮೂಲಕ ಜಾತಿ, ಆದಾಯ ಹಾಗೂ ವಾಸದ ಪ್ರಮಾಣ ಪತ್ರವನ್ನು ತಕ್ಷಣವೇ ನೀಡುವ “ಈ-ಕ್ಷಣ’ ಪದ್ಧತಿ ಆರಂಭಿಸಲಾಗಿದೆ. ರಾಜ್ಯದ ಎಲ್ಲಾ ಕಡೆ ವಿಸ್ತರಿಸಲಾಗುತ್ತದೆ.
ಐದು ಮೊಬೈಲ್ ಆ್ಯಪ್: ಭೂ ಮಾಪನಾ ಇಲಾಖೆ ವತಿಯಿಂದ ಇಲಾಖೆಯ ಸಾರ್ವಜನಿಕ ಸೇವೆಗಳನ್ನು ಪಡೆಯಲು “ಸಂಯೋಜನೆ’, ನಾಗರಿಕ ತಾನು ವಾಸಿಸುವ ಸ್ಥಳದ ಸರ್ವೇ ನಂಬರ್ ಹಾಗೂ ನಕಾಶೆ ಪಡೆಯಲು “ದಿಶಾಂಕ್’, ಎಲ್ಲಾ ಪೋಡಿ, ಅಳತೆ ಮತ್ತು 11-ಇ ಕೆಲಸಗಳನ್ನು ಡಿಜಿಟಲ್ ನಕಾಶೆಗೆ “ಸಮೀಕ್ಷೆ’, ಸಾರ್ವಜನಿಕರ ಆಧಾರ್ ಸಂಖ್ಯೆ ಸಂಗ್ರಹಿ ಸಲು “ಆಧಾರ್ ಸಂಗ್ರಹಣೆ’ ಮತ್ತು ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು “ಮೌಲ್ಯ’ ಹೀಗೆ ಐದು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ.
ಭೂ ಮಾಲೀಕತ್ವದ ವಿಶ್ವಾಸಾರ್ಹತೆ ಸಮಸ್ಯೆಯ ಪರಿಹಾರಕ್ಕೆ 3 ತಾಲೂಕುಗಳಲ್ಲಿ ಪ್ರಾಯೋಗಿಕ ವಾಗಿ “ಲ್ಯಾಂಡ್ ಟೈಟಿÉಂಗ್’ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಸರ್ಕಾರಿ ಜಮೀನುಗಳಲ್ಲಿನ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಲು 1,334 ಪ್ರಾಥಮಿಕ ಅಧಿಸೂಚನೆಗಳು ಹಾಗೂ 551 ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 1,568 ಜನವಸತಿಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗಿದೆ.
ತಿರುಪತಿಯಲ್ಲಿ ಅತಿಥಿಗೃಹ
ತಿರುಪತಿಗೆ ಪ್ರಯಾಣಿಸುವ ಭಕ್ತರ ಅನುಕೂಲ ಕ್ಕಾಗಿ ತಿರುಮಲದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಅತಿಥಿ ಗೃಹ ನಿರ್ಮಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.