Advertisement
30,187 ಸಾವುಗಳು2018ರ ಅಂಕಿ-ಅಂಶದ ಪ್ರಕಾರ ದೇಶದಲ್ಲಿ 30,187 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂತಹ ಹಲವು ಪ್ರಕರಣಗಳು ನಡೆದಿರ ಬಹುದಾಗಿದ್ದು, ಎಲ್ಲ ಪ್ರಕರಣಗಳು ದಾಖಲಾಗಿಲ್ಲ ಎಂದಿದೆ.
ಆಕಸ್ಮಿಕ ಸಾವು ಘಟನೆಗಳ ಪೈಕಿ ನೀರಿನಿಂದ ಸಂಭವಿಸುವ ಅವಘಡಗಳ ಪ್ರಮಾಣ ಹೆಚ್ಚಿದ್ದು, ಆಕಸ್ಮಿಕ ಸಾವಿನಲ್ಲಿ ನೀರಿನಲ್ಲಿ ಮುಳುಗಿ ಸಾಯುವುದು ಮೂರನೇ ಪ್ರಕರಣವಾಗಿದೆ. ಅಂದರೆ ಪ್ರತಿವರ್ಷ ನೀರಿನಲ್ಲಿ ಮುಳುಗಿ ಶೇ. 7ರಷ್ಟು, ಅಪಘಾತಗಳಿಂದ ಶೇ. 43ರಷ್ಟು ಮತ್ತು ಹಠಾತ್ ಸಾವಿನಿಂದ ಶೇ. 11ರಷ್ಟು ಸಾವನ್ನಪ್ಪುತ್ತಿದ್ದಾರೆ. 3.60 ಲಕ್ಷ
2015ರಲ್ಲಿ ವಿಶ್ವಾದ್ಯಂತ ಸುಮಾರು 3,60,000 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉದ್ದೇಶ ಪೂರ್ವಕವಲ್ಲದ ಸಂಬಂಧಿತ ಸಾವುಗಳಿಗೆ ವಿಶ್ವದಲ್ಲಿಯೇ ಇದು ಮೂರನೇ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಮಾಡಿತ್ತು.
Related Articles
– ಸರಕಾರದ ನಿರ್ದಿಷ್ಟ ಯೋಜನೆ ಇಲ್ಲದೆ ಇರುವುದು.
– ಈಜುವಿಕೆ ಬಾರದೇ ಇರುವುದು.
– ಅಸುರಕ್ಷತೆ. ಅಪಾಯ ಸ್ಥಳಗಳಲ್ಲಿ ಕಾವಲುಗಾರರು ಇಲ್ಲದೆ ಇರುವುದು.
– ಜಾಗೃತಿ ಅಭಾವ, ತಡೆಗಟ್ಟುವಿಕೆ ಸುರಕ್ಷತೆಯ ಕುರಿತು ನೀತಿ ರೂಪಿಸದೆ ಇರುವುದು.
Advertisement
ರಾಜ್ಯ 3ನೇ ಸ್ಥಾನದಲ್ಲಿಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿರುವ ಪ್ರಕರಣಗಳಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಕರ್ನಾಟದಲ್ಲಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 866ರ ಷ್ಟಿದ್ದು, ಕರ್ನಾಟಕ 2ನೇ ಸ್ಥಾನ ಮತ್ತು ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅನಿರ್ದಿಷ್ಟ ಕಾರಣ
ಆಯತಪ್ಪಿ ಅಥವಾ ಆಕಸ್ಮಿಕವಾಗಿ ನೀರಿಗೆ ಬೀಳುತ್ತಿರುವುದು ಸಾವಿಗೆ ಪ್ರಮುಖ ಕಾರಣವಾಗಿದ್ದು, ಶೇ. 66ರಷ್ಟು ಅಂದರೆ 19,939 ಜನರು ಮರಣ ಹೊಂದಿದ್ದಾರೆ. ಜತೆಗೆ ದೋಣಿ ಮಗುಚುವಿಕೆಯಿಂದ ಶೇ. 1ರಷ್ಟು ಅಂದರೆ 258 ಮಂದಿ ಹಾಗೂ ಮೂರನೇ ಒಂದು ಭಾಗದಷ್ಟು ಅಂದರೆ 9,990 ಅನಿರ್ದಿಷ್ಟ ಕಾರಣಗಳಿಂದಾಗಿ ಸಾವು ಸಂಭವಿಸಿದೆ.