Advertisement
ಹಾಸನ ಡೇರಿ ಆವರಣದಲ್ಲಿ ಭಾನುವಾರಹಮ್ಮಿಕೊಂಡಿದ್ದ ಹಾಸನ ಹಾಲು ಒಕ್ಕೂಟದ2020 – 21ನೇ ಸಾಲಿನ ಸರ್ವ ಸದಸ್ಯರವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದರು. ಹಾಲು ಸಂಗ್ರಹಣೆಯಲ್ಲಿ ಬೆಂಗಳೂರು ಒಕ್ಕೂಟ ಬಿಟ್ಟರೆರಾಜ್ಯದಲ್ಲಿಯೇ 2ನೇ ಸ್ಥಾನಪಡೆದಿರುವ ಒಕ್ಕೂಟವು ಈಗಲೂರಾಜ್ಯದಲ್ಲಿಯೇ ಅತಿ ಹೆಚ್ಚುದರವನ್ನು ಹಾಲು ಉತ್ಪಾದಕರಿಗೆ ನೀಡುತ್ತಿದೆ. ಹಾಸನ ಹಾಲುಒಕ್ಕೂಟವು ಸಂಘಗಳಿಗೆ ಪ್ರತಿ ಲೀಟರ್ ಗೆ 29.99 ರೂ. ನೀಡುತ್ತಿದೆ. ಬೆಂಗಳೂರುಒಕ್ಕೂಟ 25.50 ರೂ. ಕೋಲಾರ 26.25ರೂ. ಮೈಸೂರು 26.85 ರೂ., ಮಂಡ್ಯಒಕ್ಕೂಟ 24.90 ರೂ. ತುಮಕೂರು 25.93 ರೂ. ಶಿವಮೊಗ್ಗ 25.36 ರೂ. ನೀಡುತ್ತಿದೆಎಂದರು.
Related Articles
Advertisement
ನಿರ್ದೇಶಕ ಹೊನ್ನವಳ್ಳಿ ಸತೀಶ್‌ದೊಡ್ಡಬೀಕನಹಳ್ಳಿ ನಾಗರಾಜ್,ರಾಮಚಂದ್ರೇಗೌಡ , ಸಹಕಾರ ಸಂಘಗಳಜಂಟಿ ನಿಬಂಧಕ ಪ್ರಕಾಶ್‌ರಾವ್, ಪಶು ಪಾಲನೆ ಇಲಾಖೆ ಉಪ ನಿದೇಶಕ ಡಾ.ರಮೇಶ್ ಇತರರಿದ್ದರು.
4000 ಕೋಟಿ ರೂ. ಹೂಡಿಕೆ :
ಒಕ್ಕೂಟವು ಸುವಾಸಿತ ಹಾಲಿನ ಪೆಟ್ ಬಾಟಲ್ ಉತ್ಪಾದನೆ ಆರಂಭಿಸಿದೆ. 255 ಕೋಟಿ ರೂ. ಸ್ವಂತ ಬಂಡವಾಳದಿಂದ ಈ ಘಟಕವನ್ನು ಹಾಸನ ಡೇರಿಯಲ್ಲಿ ನಿರ್ಮಾಣ ಮಾಡಿದೆ. ಐಸ್ ಕ್ರೀಂ ಘಟಕ, ಯುಎಚ್‌ಟಿ ಹಾಲಿನ ಘಟಕ ಸೇರಿ ಸುಮಾರು 4000 ಕೋಟಿರೂ. ಗಳ ವಿವಿಧ ಘಟಕಗಳನ್ನು ಹಾಸನ ಹಾಲು ಒಕ್ಕೂಟ ನಿರ್ವಹಿಸುತ್ತಿದೆ. ಈ ಎಲ್ಲ ಘಟಕಗಳನ್ನೂ ಹಾಸನ ಹಾಲು ಒಕ್ಕೂಟವು ಸ್ವಂತ ಬಂಡವಾಳ ದಿಂದಲೇ ನಿರ್ಮಿಸಿದೆ. ಈಗ ಹಾಸನದಲ್ಲಿ ಕೆಎಂಎಫ್ ಒಡೆತನದಲ್ಲಿರುವ ಎರಡು ಪಶು ಆಹಾರ ಘಟಕಗಳು ಹಾಸನ ಹಾಲು ಒಕ್ಕೂಟಕ್ಕೆ ಬರಬೇಕಾಗಿದೆ. ಆದರೆ ಕೆಎಂಎಫ್ ಬಿಟ್ಟುಕೊಡುತ್ತಿಲ್ಲ ಎಂದರು.