ಬೆಂಗಳೂರು: ತೈಲ, ವಿದ್ಯುತ್ ಬೆನ್ನಲ್ಲೇ ಹಾಲು ಕೂಡ ದುಬಾರಿಯಾಗುವ ಸಾಧ್ಯತೆಯಿದೆ. ಹಾಲು ದರ ಏರಿಕೆ ಪ್ರಸ್ತಾವನೆ ಸರಕಾರದ ಮುಂದಿದ್ದು, ಲೀಟರ್‌ಗೆ ಕನಿಷ್ಠ 3ರಿಂದ 5 ರೂ.ವರೆಗೆ ದರ ಪರಿಷ್ಕರಣೆಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಸರಕಾರ 2-3 ರೂ. ಏರಿಕೆಗೆ ಒಪ್ಪಬಹುದು ಎಂದು ಮೂಲಗಳು ತಿಳಿಸಿವೆ.
“ಹಾಲಿನ ದರ ಪರಿಷ್ಕರಣೆಗೆ ಸಂಬಂಧಿಸಿ ಹಲವು ದಿನಗಳ ಹಿಂದೆಯೇ ಪ್ರಸ್ತಾವನೆ ಹೋಗಿದೆ.
ಇದನ್ನೂ ಓದಿ:ಒಡಿಶಾದ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಪುರಿ ಜಗನ್ನಾಥ ದೇಗುಲದ ಒಲೆ ಧ್ವಂಸ ; ಆರೋಪಿ ಬಂಧನ
ಇದಾದ ಮೇಲೆ ಕೆಎಂಎಫ್ ಅಧ್ಯಕ್ಷರು ಕೂಡ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದಾರೆ. ಅಂತಿಮ ತೀರ್ಮಾನವನ್ನು ಸರಕಾರ ಕೈಗೊಳ್ಳಲಿದೆ’ ಎಂದು ಕೆಎಂಎಫ್ ಎಂ.ಡಿ. ಬಿ.ಸಿ. ಸತೀಶ್ ಸ್ಪಷ್ಟಪಡಿಸಿದ್ದಾರೆ.