Advertisement

ಆವಿಷ್ಕಾರಕ್ಕೆ ಪುರಸ್ಕಾರ

05:22 PM Oct 29, 2021 | Team Udayavani |

ಮಂಡ್ಯ: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಕಾರ್ಯಕ್ಷಮತೆ ತೋರಿಸುವಂಥ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂಥ ಯಂತ್ರೋಪಕರಣಗಳ ಆವಿಷ್ಕಾರಗಳು ಹೆಚ್ಚು ಹೆಚ್ಚಾಗಿ ಹೊರಬರಬೇಕು ಎಂದು ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯಾನಂದ ತಿಳಿಸಿದರು.

Advertisement

ಯಂತ್ರೋಪಕರಣ ದುಬಾರಿ: ಪಿಇಎಸ್‌ ಇಂಜಿನಿಯರಿಂಗ್‌ ಕಾಲೇಜಿನ ಐಟಿ ವಿಭಾಗದ ವಿದ್ಯಾರ್ಥಿಗಳು ಸಂಶೋಧಿಸಿರುವ ಮರ ಮತ್ತು ಲೋಹದ ಮೇಲೆ ಕೆತ್ತನೆ ಮಾಡುವ ಯಂತ್ರದ ಪ್ರಾತ್ಯಕ್ಷಿತೆ ಉದ್ಘಾಟಿಸಿ ಮಾತನಾಡಿದ ಅವರು, ಮರ ಮತ್ತು ಲೋಹದ ಮೇಲೆ ಕೆತ್ತನೆ ಮಾಡುವಂಥ ಯಂತ್ರೋಪಕರಣಗಳು ಹೆಚ್ಚು ಹಣ ಕೊಟ್ಟು ಖರೀದಿ ಮಾಡಬೇಕಾಗಿರುತ್ತದೆ.

ಸಣ್ಣ ಪುಟ್ಟ ಕೈಗಾರಿಕೆಗಳವರು ಲಕ್ಷಾಂತರ ರೂ. ಕೊಟ್ಟು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡು ವಿದ್ಯಾರ್ಥಿಗಳು ಕಂಪ್ಯೂಟರ್‌ನಲ್ಲಿ ಏನೆಲ್ಲ ಪದಗಳು, ಚಿತ್ರಗಳನ್ನು ಚಿತ್ರಿಸುತ್ತಾರೋ ಅದೇ ಮಾದರಿಯ ಕೆತ್ತನೆಗಳು ಮೂಡಿಸುವಂತಹ ಯಂತ್ರ ಇದಾಗಿದೆ ಎಂದು ಹೇಳಿದರು.

ಇದನ್ನೂ ಓದಿ;- ಗುಮ್ಮಟನಗರಿಯ ಅಭಿಮಾನಿಯ ವಿವಾಹಕ್ಕೆ ಉಡುಗೊರೆ ನೀಡಿದ್ದ ಅಪ್ಪು

ಐಟಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಸುಮನ್‌ ಮಾತನಾಡಿ, ನಾವು 11 ಮಂದಿ ವಿದ್ಯಾರ್ಥಿಗಳು ಸೇರಿ ಈ ಯಂತ್ರವನ್ನು ಸಂಶೋಧಿಸಿದ್ದೇವೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಗಳು ಹೆಚ್ಚಿನ ಹಣ ಹೂಡಿಕೆ ಮಾಡಿ ಇಂತಹ ಯಂತ್ರಗಳನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ ಸಣ್ಣ ಪುಟ್ಟ ಕೈಗಾರಿಕೋದ್ಯಮಿಗಳೂ ಸಹ ಇಂತಹ ಯಂತ್ರಗಳನ್ನು ಕಡಿಮೆ ಖರ್ಚಿನಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಈ ಯಂತ್ರವನ್ನು ಸಂಶೋಧಿ ಸಿದ್ದೇವೆ ಎಂದು ತಿಳಿಸಿದರು.

Advertisement

„ ವಿದ್ಯಾರ್ಥಿಗಳಿಂದ ಮರ ಮತ್ತು ಲೋಹದ ಮೇಲೆ ಕೆತ್ತನೆ ಮಾಡುವ ಯಂತ್ರದ ಸಂಶೋಧನೆ, ಪ್ರಾತ್ಯಕ್ಷಿತೆ

„ ಕಂಪ್ಯೂಟರ್‌ನಲ್ಲಿ ಏನೆಲ್ಲ ಪದಗಳು, ಚಿತ್ರಗಳನ್ನು ಚಿತ್ರಿಸುತ್ತಾರೋ ಅದೇ ಮಾದರಿಯ ಕೆತ್ತನೆಗಳು

ಮೂಡಿಸುವಂತಹ ಯಂತ್ರ ಇದು.

ಮಿಲ್ಲಿಂಗ್‌ ಯಂತ್ರವು ಮೆಷಿನಿಂಗ್‌ ಕೆಲಸವನ್ನು ಗಣಕಯಂತ್ರದ ಸಿಎನ್‌ಸಿ ಪ್ರೋಗ್ರಾಂ ಮೂಲಕ ನಿರ್ವಹಿಸುತ್ತದೆ. ತಯಾರಾಗಬೇಕಾದ ವಸ್ತು ಮತ್ತು ಉಪಕರಣವನ್ನು ಹೊಂದಿಸಿ ನಂತರ, ಕೆಲಸವನ್ನು ಪೂರ್ಣಗೊಳಿಸಲು ಈ ಯಂತ್ರವು ಎಲ್ಲಾ ಕಾರ್ಯಾಚರಣೆಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.

ವೇಗ, ಫೀಡ್ ಮತ್ತು ಕಟ್‌ನ ಆಳವನ್ನು ಬದಲಾಯಿಸುವುದು ಸಹ ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. ಪ್ರೋಗ್ರಾಂ ಸೈಕಲ್‌ನ್ನು ಪುನರಾವರ್ತಿಸುವ ಮೂಲಕ ಉತ್ಪಾದನಾ ಸಮಯವನ್ನು ತೀವ್ರವಾಗಿ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ.ಮಹಾಲಿಂಗೇಗೌಡ, ವಿಭಾಗದ ಮುಖ್ಯಸ್ಥ ಡಾ.ಎಚ್‌.ಎಂ.ನಂಜುಂಡಸ್ವಾಮಿ, ಡೀನ್‌ ಡಾ.ಬಿ.ಎಸ್‌.ಶಿವಕುಮಾರ್‌, ಮಾರ್ಗ ದರ್ಶಕರಾದ ಎಂ.ಶ್ರೀನಿವಾಸ್‌, ಸಿಇಒ ಡಾ.ಎನ್‌.ಎಲ್‌.ಮುರಳಿಕೃಷ್ಣ, ವೇಣು ಗೋಪಾಲ್‌, ಡಾ.ರಾಘು, ಯತೀಶ, ಅರ್ಚನಾ, ಸುಜನ್‌ಗೌಡ, ಕೆ.ರವಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next