Advertisement

ಸಾಲ ನೀಡುವ ಪ್ರಮಾಣ ಹೆಚ್ಚಿಸಿ: ಬ್ಯಾಂಕ್‌ಗಳಿಗೆ ಜಿ.ಪಂ. ಸಿಇಒ ಸೂಚನೆ

01:40 AM Jun 29, 2022 | Team Udayavani |

ಉಡುಪಿ: ಕೇಂದ್ರ, ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಬ್ಯಾಂಕ್‌ಗಳ ಪಾತ್ರ ಬಹುಮುಖ್ಯ. ಈ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಸಿಇಒ ಪ್ರಸನ್ನ ಎಚ್‌. ನಿರ್ದೇ ಶನ ನೀಡಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಠೇವಣಿ ಸಂಗ್ರಹವಾಗುತ್ತಿದ್ದರೂ ಸಾಲ ನೀಡುವ ಪ್ರಮಾಣ ಕಡಿಮೆಯಿದೆ. ಸಾಲ ಮತ್ತು ಠೇವಣಿ ಅನುಪಾತವನ್ನು ಶೇ. 60ಕ್ಕೆ ಹೆಚ್ಚಿಸಬೇಕು. ಸರಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಬಾರದು. ಅರ್ಜಿಗಳಲ್ಲಿ ದೋಷಗಳಿದ್ದರೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿ ಸಾಲ ಮಂಜೂರು ಮಾಡುವ ಮೂಲಕ ಯೋಜನೆಗಳ ಪ್ರಗತಿ ಸಾಧಿಸಬೇಕು ಎಂದರು.

ಗ್ರಾ.ಪಂ.ನಿಂದ ಟ್ರೇಡ್‌
ಲೈಸನ್ಸ್‌ ಕೇಳಬೇಡಿ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬ್ಯಾಂಕ್‌ ಖಾತೆಗಳನ್ನು ಉದ್ಯಮ್‌ ನೋಂದಣಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. ನೋಂದಾಯಿತ ಕೈಗಾರಿಕೆಗಳಿಗೆ ಸಾಲ ನೀಡುವಾಗ ಗ್ರಾ.ಪಂ.ನಿಂದ ಟ್ರೇಡ್‌ ಲೈಸನ್ಸ್‌ನ ಅನುಮತಿ ಪತ್ರಕ್ಕೆ ಸತಾಯಿಸದೆ ಸ್ಥಳೀಯ ಪ್ರಾಧಿಕಾರ ದಿಂದ ಎನ್‌ಒಸಿ ಪಡೆದು ಸಾಲ ವಿತರಿಸಿ ಎಂದರು.

ಸಾಲ ವಿತರಣೆ ಪ್ರಮಾಣ ವೃದ್ಧಿ
ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇ ಜರ್‌ ಲೀನಾ ಪಿಂಟೋ ಮಾತ   ನಾಡಿ, 2021-22ರ ಸಾಲಿನ ಅಂತ್ಯಕ್ಕೆ ಜಿಲ್ಲೆಯಲ್ಲಿ 15,173 ಕೋ. ರೂ. ಸಾಲ ವಿತರಿಸುವ ನಿಗ  ದಿತ ಗುರಿ ಗಿಂತ ಶೇ. 13.81 ಹೆಚ್ಚಿನ ಬೆಳ ವಣಿಗೆ ಸಾಧಿಸಲಾಗಿದೆ ಎಂದರು.

Advertisement

ಆರ್‌ಬಿಐ ಅಧಿಕಾರಿ ತನು ನಂಜಪ್ಪ, ಯೂನಿಯನ್‌ ಬ್ಯಾಂಕ್‌ ಪ್ರಾದೇಶಿಕ ಮ್ಯಾನೇಜರ್‌ ಡಾ| ವಾಸಪ್ಪ ಉಪಸ್ಥಿತರಿದ್ದರು. ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪಿ.ಎಂ. ಪಿಂಜಾರ ಸ್ವಾಗತಿಸಿದರು.

ಜಿಲ್ಲಾಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ!
ಜಿ.ಪಂ.ನ ಹಿರಿಯ ಅಧಿಕಾರಿಯೊಬ್ಬರಿಗೆ ಜಿಲ್ಲಾಧಿಕಾರಿ ಚಿತ್ರ ಇರುವ ವಾಟ್ಸ್‌ಆ್ಯಪ್‌ ನಂಬರ್‌ನಿಂದ ಸಂದೇಶ ಕಳುಹಿಸಿ ತುರ್ತಾಗಿ 10 ಸಾವಿರ ರೂ.ಗಳ ಅಮೆಜಾನ್‌ ವೋಚರ್‌ಗೆ ಬೇಡಿಕೆ ಇಟ್ಟಿದ್ದರು. ಅಧಿಕಾರಿಯು ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ. ಹೀಗೆ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ಆನ್‌ಲೈನ್‌ ವಂಚನೆ ನಡೆಯುತ್ತಿರುವುದರಿಂದ ಬ್ಯಾಂಕ್‌ಗಳು ವಿಶೇಷ ಕ್ರಮ ಹಾಗೂ ಅರಿವು ಮೂಡಿಸುವ ಅಗತ್ಯ ಇದೆ ಎಂದು ಜಿ.ಪಂ. ಸಿಇಒ ಪ್ರಸನ್ನ ಎಚ್‌. ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next