Advertisement

ಆಡು ಸಾಕಾಣಿಕೆಯಿಂದ ಆದಾಯ ಹೆಚ್ಚಳ

06:00 PM Feb 13, 2022 | Team Udayavani |

ಬೀದರ: ರೈತರ ಆದಾಯ ಹೆಚ್ಚಿಸಬಲ್ಲ ಆಡು ಸಾಕಾಣಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ “ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ’ ಕುರಿತು ತರಬೇತಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Advertisement

ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಕೆವಿಕೆ ಮುಖ್ಯಸ್ಥ ಡಾ| ಸುನೀಲಕುಮಾರ ಎನ್‌. ಎಂ., ಶಿಬಿರಾರ್ಥಿಗಳು ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ ಕೃಷಿಯ ಉಪ ಕಸುಬುವಾಗಿ ಮತ್ತು ಕೃಷಿ ಭೂ ರಹಿತ ರೈತರು ಮುಖ್ಯ ಕಸುಬಾಗಿ ಅಳವಡಿಸಿಕೊಂಡರೆ ಖಂಡಿತ ಹೆಚ್ಚಿನ ಆದಾಯ ಪಡೆಯಬಹುದು ಎಂದು ಕರೆ ನೀಡಿದರು.

ಶಿಬಿರಾರ್ಥಿಗಳಾದ ನಾರಾಯಣಪುರ ಗ್ರಾಮದ ನವನಾಥ ಮಾತನಾಡಿ, ತರಬೇತಿಯಲ್ಲಿ ನೂತನ ತಂತ್ರಜ್ಞಾನಗಳನ್ನು ತಿಳಿದಿಕೊಂಡಿದ್ದೇವೆ ಎಂದರು.

ಗಾದಗಿ ಗ್ರಾಮದ ಜುಬೇರ್‌ ಅಹಮದ್‌ ಮಾತನಾಡಿ, ತರಬೇತಿ ನಂತರ ನಾನು ಹೊಸ ಆಡು ಸಾಕಾಣಿಕೆ ಘಟಕ ಸ್ಥಾಪಿಸಲು ಪ್ರಾರಂಭಿಸಿದ್ದು, ಈ ತರಬೇತಿಯು ಸಹಾಯಕವಾಗಿದೆ ಎಂದು ಹೇಳಿದರು.

ರಾಜಗೊಂಡ ಗ್ರಾಮದ ರತನ್‌ ಮಹರಾಜ ಅವರು ತರಬೇತಿಯಲ್ಲಿ ಆಡುಗಳ ರೋಗಗಳ ನಿರ್ವಹಣೆಯಲ್ಲಿ ನೂತನ ತಾಂತ್ರಿಕತೆಗಳನ್ನು ಅತ್ಯಂತ ಸಹಕಾರಿಯಾಗಿವೆ ಎಂದರು.

Advertisement

ಮೂರು ದಿನಗಳ ತಾಂತ್ರಿಕ ತರಬೇತಿಯಲ್ಲಿ ಪಶು ವಿಜ್ಞಾನಿಗಳಾದ ಡಾ| ದೀಪಕ ಬಿರಾದರ ಮತ್ತು ಡಾ| ಅಕ್ಷಯಕುಮಾರ ಅವರು ಆಡುಗಳಲ್ಲಿ ಬರುವ ರೋಗಗಳು, ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ ಮತ್ತು ಅವುಗಳ ನಿರ್ವಹಣೆ ಹಾಗೂ ಆಡುಗಳಿಗೆ ಬೇಕಾಗುವ ಪೌಷ್ಟಿಕ ಆಹಾರ, ಡಾ| ಧನರಾಜ ಗಿರಿಮಲ್ಲ ಅವರು ಆಡುಗಳ ವಿವಿಧ ತಳಿಗಳು ಮತ್ತು ಗುಣಧರ್ಮಗಳ ಕುರಿತು ತಿಳಿಸಿದರು.

ಕಲ್ಲೂರ ಗ್ರಾಮದ ಭೀಮರಾವ್‌ ಪಾಟೀಲ ಅವರ ಕ್ಷೇತ್ರದಲ್ಲಿ ಅಳವಡಿಸಕೊಂಡ ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ ಘಟಕಕ್ಕೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿದ್ದು, ಆಡುಗಳ ವಿವಿಧ ತಳಿಗಳ, ಮೇವಿನ ಘಟಕ, ವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕೊಟ್ಟಿಗೆ ಮತ್ತು ಆಧುನಿಕ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next