Advertisement

ವಾಹನ ಮಾರಾಟದಲ್ಲಿ ಏರಿಕೆ; ಚಿಪ್‌ ಕೊರತೆ ನೀಗಿದ ಹಿನ್ನೆಲೆ ಚೇತರಿಸಿಕೊಂಡ ಸಂಸ್ಥೆಗಳು

12:10 PM Sep 03, 2022 | Team Udayavani |

ನವದೆಹಲಿ: ಕೊರೊನಾ ಸಮಸ್ಯೆ, ಸೆಮಿಕಂಡಕ್ಟರ್‌ ಚಿಪ್‌ ಕೊರತೆಯಿಂದಾಗಿ ಹೊಡೆತ ಕಂಡಿದ್ದ ಮೋಟಾರು ವಾಹನ ಸಂಸ್ಥೆಗಳು ಇದೀಗ ಮತ್ತೆ ಚಿಗುರಿವೆ. ಆಗಸ್ಟ್‌ನಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಮಾರಾಟ ಅತ್ಯಧಿಕವಾಗಿತ್ತು ಎಂದು ಸಂಸ್ಥೆಗಳು ತಿಳಿಸಿವೆ.

Advertisement

ಮಾರುತಿ ಸುಜುಕಿ ಸಂಸ್ಥೆಯು ಆಗಸ್ಟ್‌ನಲ್ಲಿ 22,162 ಎಸ್‌-ಪ್ರಸೊÕà, ಆಲ್ಟೋ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಅದು 20,461 ಆಗಿತ್ತು. ಹಾಗೆಯೇ ಒಂದೇ ತಿಂಗಳಲ್ಲಿ 71,557 ಬಲೆನೊ, ಸೆಲೆರಿಯೋ, ಡಿಜೈರ್‌, ಇಗ್ನಿಸ್‌, ಸ್ವಿಫ್ಟ್, ಟೂರ್‌ ಎಸ್‌ ಮತ್ತು ವ್ಯಾಗನಾರ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ.57 ಹೆಚ್ಚಿದೆ. ಅದೇ ರೀತಿ ಎಸ್‌ಯುವಿ ಮಾರಾಟದಲ್ಲೂ ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ದ್ವಿಚಕ್ರ ವಾಹನ ಮಾರಾಟಗಾರರಾಗಿರುವ ಬಜಾಜ್‌ನಲ್ಲಿ ಕಳೆದ ವರ್ಷದ ಆಗಸ್ಟ್‌ಗಿಂತ ಈ ವರ್ಷದ ಆಗಸ್ಟ್‌ನಲ್ಲಿ ಶೇ.49 ಹೆಚ್ಚು ಮಾರಾಟವಾಗಿದ್ದರೆ, ಟಿವಿಎಸ್‌ ಸಂಸ್ಥೆಯಲ್ಲಿ ಶೇ.33 ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next