Advertisement

Elephants: ತಮಿಳುನಾಡಿನಲ್ಲಿ ಆನೆಗಳ ಸಂಖ್ಯೆ ಹೆಚ್ಚಳ

09:27 PM Aug 09, 2023 | Team Udayavani |

ನವದೆಹಲಿ: ಮೇ ತಿಂಗಳಲ್ಲಿ ಮೂರು ದಿನ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಆನೆಗಣತಿ ನಡೆದಿತ್ತು. ಮಹತ್ವದ ವಿಚಾರವೆಂದರೆ ತಮಿಳುನಾಡಿನಲ್ಲಿ ಆನೆಗಳ ಪ್ರಮಾಣ ಹೆಚ್ಚಾಗಿದೆ. 2017ರಲ್ಲಿ ಆ ರಾಜ್ಯದಲ್ಲಿ ಆನೆಗಳ ಸಂಖ್ಯೆ 2761ರಷ್ಟಿದ್ದಿದ್ದು, ಪ್ರಸ್ತುತ 2,961ಕ್ಕೇರಿದೆ.

Advertisement

ಅಂದರೆ 200 ಹೆಚ್ಚುವರಿ ಆನೆಗಳು ಕಾಣಿಸಿಕೊಂಡಿವೆ. ಇದು ಜೈವಿಕ ಸಮತೋಲನದ ದೃಷ್ಟಿಯಲ್ಲಿ ಮಹತ್ವದ ಸಂಗತಿಯಾಗಿದೆ. ತಮಿಳುನಾಡಿನ 25 ಅರಣ್ಯ ವಲಯದಲ್ಲಿ ಆನೆಗಣತಿ ನಡೆದಿತ್ತು. ಡೆಹ್ರಾಡೂನ್‌ ಮೂಲದ ಅರಣ್ಯ ಸಂಶೋಧನಾ ಸಂಸ್ಥೆ, ಬೆಂಗಳೂರಿನ ಐಐಎಸ್ಸಿಗಳ ನೆರವಿನಿಂದ ಅರಣ್ಯ ಇಲಾಖೆ ಗಣತಿ ನಡೆಸಿದೆ. ಇಲ್ಲಿ ಹಲವಾರು ಮಹತ್ವದ ಸಂಗತಿಗಳು ಗೊತ್ತಾಗಿವೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿಕೆ ನೀಡಿ, ತಮಿಳುನಾಡಿನ ಪೂರ್ವ ಘಟ್ಟಗಳಲ್ಲಿ 1,105, ಪಶ್ಚಿಮ ಘಟ್ಟಗಳಲ್ಲಿ 1,855 ಆನೆಗಳಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next