Advertisement

ಶಂಕರಪುರ ಮಲ್ಲಿಗೆ ದರದಲ್ಲಿ ಏರಿಕೆ; ಅಟ್ಟೆಗೆ 1,250 ರೂ.

10:30 AM Sep 13, 2019 | Sriram |

ಶಿರ್ವ: ಮಳೆಗಾಲದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಮಲ್ಲಿಗೆ ದರದಲ್ಲಿ ಭಾರೀ ಏರಿಕೆ ಕಂಡಿದ್ದು ಕಳೆದೆರಡು ದಿನಗಳಿಂದ ಅಟ್ಟೆಗೆ ಕಟ್ಟೆಯಲ್ಲಿ ಗರಿಷ್ಠ ದರ 1,250ರೂ.ಗೆ ತಲುಪಿದೆ. ಸೆ.8-9ರಂದು 950-850 ರೂ. ಇದ್ದ ಮಲ್ಲಿಗೆ ದರ ಸೆ.10-11ರಂದು 1,250 ರೂ. ತಲುಪಿದೆ.

Advertisement

ಮಳೆ ಬಿಸಿಲಿನ ನಡುವೆ ಈ ಬಾರಿಯ ಮಳೆಗಾಲದಲ್ಲಿ ಶಂಕರಪುರ ಮಲ್ಲಿಗೆ ದರದಲ್ಲಿ ಹೆಚ್ಚಿನ ಏರುಪೇರು ಕಾಣದೆ ಸ್ಥಿರತೆ ಕಾಯ್ದುಕೊಂಡಿತ್ತು. ಸಾಧಾರಣ ಬೇಡಿಕೆಯಿಂದಾಗಿ ಜೂ.18 ರಂದು ಮಾತ್ರ ಕನಿಷ್ಠ ದರ 90 ರೂ.ಗೆ ತಲುಪಿತ್ತು.

ಮಲ್ಲಿಗೆಯೊಂದಿಗೆ ಜಾಜಿಗೆ ಪ್ರತ್ಯೇಕ ದರ ನಿಗದಿಯಾಗುತ್ತಿದ್ದು ಜಾಜಿಯ ಅಧಿಕ ಇಳುವರಿಯಿಂದಾಗಿ ಕಟ್ಟೆಗೆ ಬರುವ ಹೂವಿನ ಪ್ರಮಾಣ ಹೆಚ್ಚಾಗಿ ಮಂಗಳವಾರ 220 ರೂ. ಇದ್ದ ಜಾಜಿ ದರ ಬುಧವಾರ ಇಳಿಕೆ ಕಂಡು 150 ರೂ. ತಲುಪಿದೆ.

ಶುಭ ಸಮಾರಂಭಗಳು ಪ್ರಾರಂಭಗೊಂಡಿದ್ದು ಇಳುವರಿ ಕಡಿಮೆಯಾಗಿ ಮಲ್ಲಿಗೆಗೆ ಬೇಡಿಕೆ ಕುದುರಲು ಕಾರಣವಾಗಿದೆ. ದರ ಏರುಗತಿಯಿಂದಾಗಿ ಮಲ್ಲಿಗೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಮಳೆಗೆ ಹಾಳಾಗುವ ಮೊಗ್ಗು
ನಿರಂತರ ಮಳೆ ಸುರಿದರೆ ಹೂವಿನ ಮೊಗ್ಗು ಹಾಳಾಗಿ ಇಳುವರಿ ಕಡಿಮೆಯಾಗುತ್ತದೆ. ಈ ಬಾರಿಯ ಮಳೆಗಾಲದ ಪ್ರಾರಂಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಳೆ ಕಡಿಮೆಯಾಗಿ ಹೆಚ್ಚಿನ ರೋಗಬಾಧೆ ಕಂಡು ಬರಲಿಲ್ಲ. ಗಿಡಗಳು ಹಾಳಾಗದೆ ಇಳುವರಿಯೂ ಉತ್ತಮವಾಗಿದ್ದು ಬೆಳೆಗಾರರಿಗೆ ಆಶಾದಾಯಕವಾಗಿತ್ತು. ಆದರೆ ಕಳೆದೊಂದು ತಿಂಗಳಿನಿಂದ ವಿಪರೀತ ಮಳೆಬಂದು ಗಿಡಗಳ ಮೊಗ್ಗು ಹಾಳಾಗಿ ಇಳುವರಿ ಕಡಿಮೆಯಾಗಿ ಕಟ್ಟೆಗೆ ಬರುವ ಹೂವಿನ ಪ್ರಮಾಣ ಕಡಿಮೆಯಾಗಿದ್ದು ದರದಲ್ಲಿ ಏರಿಕೆ ಕಂಡಿದೆ.

Advertisement

ಬೆಳೆ ಕಡಿಮೆ, ಬೇಡಿಕೆ ಹೆಚ್ಚು
ಕಳೆದೊಂದು ತಿಂಗಳಿನಿಂದ ವಿಪರೀತ ಮಳೆಬಂದು ಗಿಡಗಳು ಹಾಳಾಗಿಮಲ್ಲಿಗೆ ಬೆಳೆ ಕಡಿಮೆಯಾಗಿದೆ. ಶುಭ ಸಮಾರಂಭಗಳಿದ್ದು ಮಲ್ಲಿಗೆಗೆ ಬೇಡಿಕೆ ಕುದುರಿದ್ದು ಹೂವಿನ ಅಭಾವವಿರುವುದರಿಂದ ಅಟ್ಟೆಗೆ ಗರಿಷ್ಠ 1,250 ರೂ.ತಲುಪಿದೆ.
-ವಿಲಿಯಂ ಮಚಾದೋ, ಮಲ್ಲಿಗೆ ವ್ಯಾಪಾರಿ, ಶಿರ್ವ

ತುಸು ಆಶಾದಾಯಕ
ಹವಾಮಾನ ಪೂರಕವಾಗಿಲ್ಲದ ಕಾರಣ ಗಿಡಗಳು ಹಾಳಾಗಿ ಮಲ್ಲಿಗೆ ಇಳುವರಿ ಕಡಿಮೆಯಾಗಿದೆ. ಬೇಡಿಕೆಗನುಗುಣವಾಗಿ ದರದಲ್ಲಿ ಏರಿಕೆ ಕಂಡಿದ್ದು ಮಲ್ಲಿಗೆ ಬೆಳೆಗಾರರಿಗೆ ಆಶಾದಾಯಕವಾಗಿದೆ.
-ವೈಲೆಟ್‌ ಕ್ಯಾಸ್ತಲಿನೊ, ಮಲ್ಲಿಗೆ ಬೆಳೆಗಾರರು

Advertisement

Udayavani is now on Telegram. Click here to join our channel and stay updated with the latest news.

Next