Advertisement

ಯುವ ಜನರಲ್ಲಿ ಆತ್ಮಾಭಿಮಾನ ಹೆಚ್ಚಬೇಕು: ಶ್ರೀನಿವಾಸ್‌ ಪೂಜಾರಿ

10:00 PM Dec 29, 2020 | Team Udayavani |

ಸಸಿಹಿತ್ಲು: ಯುವ ಜನರಲ್ಲಿ ಆತ್ಮಾಭಿಮಾನ ಹೆಚ್ಚಿಸಿಕೊಳ್ಳಲು ಸಮಾಜದ ಸೇವಾ ಸಂಸ್ಥೆಗಳಲ್ಲಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತೊಡಗಿಕೊಂಡಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಶ್ರೀನಿವಾಸ್‌ ಯಾನೆ ಅಪ್ಪು ಪೂಜಾರಿ ಹೇಳಿದರು.

Advertisement

ಸಸಿಹಿತ್ಲುವಿನಲ್ಲಿ ನಡೆದ ಜಿಲ್ಲಾ ಯುವಜನೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಶೆಟ್ಟಿಗಾರ್‌ ಅಧ್ಯಕ್ಷತೆ ವಹಿಸಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ದ.ಕ.ಜಿ.ಪಂ., ಜಿಲ್ಲಾ, ತಾಲೂಕು ಯುವಜನ ಒಕ್ಕೂಟ, ಸಸಿಹಿತ್ಲು ಯುವಕ ಮತ್ತು ಯುವತಿ ಮಂಡಲ, ಹಳೆ ವಿದ್ಯಾರ್ಥಿ ಸಂಘ, ನವೋದಯ ಮಹಿಳಾ ಮಂಡಳಿಯ ಸಂಯೋಜನೆಯಲ್ಲಿ ಕಾರ್ಯಕ್ರಮ ಜರಗಿತು.

ಕ್ರೀಡಾ ಇಲಾಖೆಯ ಮಂಜು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಗಿರೀಶ್‌ ಶೆಟ್ಟಿ, ಡಾ| ನಂದಿನಿ, ಶಾಲಾ ಮುಖ್ಯ ಶಿಕ್ಷಕಿ ಕ್ಲೊಟಿಲ್ಡಾ ಲೋಬೋ, ಜೈ ಕೃಷ್ಣ ಕೋಟ್ಯಾನ್‌ ಹಳೆಯಂಗಡಿ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ನಾಗೇಶ್‌ ಡಿ. ಬಂಗೇರ, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್‌ ಕರ್ಕೇರ, ಯುವತಿ ಮಂಡಲದ ಅಧ್ಯಕ್ಷೆ ರೋಹಿಣಿ ವಿನೋದ್‌ ಶ್ರೀಯಾನ್‌, ನವೋದಯ ಮಹಿಳಾ ಮಂಡಲದ ಅಧ್ಯಕ್ಷೆ ಮಾಲತಿ ಡಿ. ಕೋಟ್ಯಾನ್‌ ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಅ ಧಿಕಾರಿ ವಿನೋದ್‌ಕುಮಾರ್‌ ಸಸಿಹಿತ್ಲು ಬಹುಮಾನಿತರ ಪಟ್ಟಿ ಪ್ರಕಟಿಸಿದರು. ಅನಿಲ್‌ ಕಾಂಚನ್‌ ಸ್ವಾಗತಿಸಿದರು. ಅಮಿತಾ ಯೋಗೀಶ್‌ ವಂದಿಸಿದರು. ದಿಲೀಪ್‌ ಕರ್ಕೇರ, ನರೇಶ್‌ ಅವರು ನಿರೂಪಿಸಿದರು.

Advertisement

ಫಲಿತಾಂಶ
ಜನಪದ ನೃತ್ಯ: ಸ್ಪರ್ಶ ಕಲಾ ತಂಡ ಸುರತ್ಕಲ್‌ (ಪ್ರ.), ಸಸಿಹಿತ್ಲು ಯುವಕ ಮಂಡಲ (ದ್ವಿ.), ಶ್ರೀ ವಿದ್ಯಾವಿನಾಯಕ ಯುವಕ, ಯುವತಿ ಮಂಡಲ (ತೃ.). ಜನಪದ ಹಾಡು: ಸಸಿಹಿತ್ಲು ಯುವಕ ಮಂಡಲ (ಪ್ರ.), ಸ್ಪರ್ಶ ಕಲಾ ತಂಡ ಸುರತ್ಕಲ್‌ (ದ್ವಿ.), ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು (ತೃ.).

ಏಕಾಂಕ ನಾಟಕ: ಸ್ಪರ್ಶ ಕಲಾ ತಂಡ ಸುರತ್ಕಲ್‌ (ಪ್ರ.), ಯಶಸ್ವಿ ಯುವಕ ಮಂಡಲ ಮಂಗಳೂರು, ಶಾಸ್ತ್ರೀಯ ಸಂಗೀತ: ಪಲ್ಲವಿ ಸುರತ್ಕಲ್‌ (ಪ್ರ.), ಗೌರೀಶ್‌ ಭಟ್‌ (ದ್ವಿ.), ಕೆ.ಎಮ್‌. ಗುರುಕಿರಣ್‌ ಕೆರೆಮನೆ (ತೃ.), ಹಾರ್ಮೋನಿಯಂ (ಲಘು) ಕಾರ್ತಿಕ್‌ ಸುವರ್ಣ, ಶ್ರೀ ರಾಮ ಭಜನಾ ಮಂದಿರ ಲಚ್ಚಿಲ್‌ (ಪ್ರ.), ರಾಜೇಶ್‌ ಸಾಲ್ಯಾನ್‌, ತಣ್ಣೀರುಬಾವಿ ಯುವಕ ಮಂಡಲ (ದ್ವಿ.), ನಿಮಿತ್‌ ಸ್ಪರ್ಶ ಕಲಾತಂಡ ಸುರತ್ಕಲ್‌ (ತೃ.),

ಗಿಟಾರ್‌ ವಾದನ: ಅಕ್ಷಯ್‌ (ಪ್ರ.), ರಾಹುಲ್‌ (ದ್ವಿ.), ಶಾಸ್ತ್ರೀಯ ನೃತ್ಯ ಶ್ರೇಯಾ ಜಿ. (ಪ್ರ.), ಸ್ವಾತಿ ಎನ್‌.ವಿ. ಪುತ್ತೂರು (ದ್ವಿ.), ಜಾನ್ವಿ

ಸುರತ್ಕಲ್‌ (ತೃ.), ಅಶು ಭಾಷಣ: ತೇಜಸ್ವಿನಿ (ಪ್ರ.), ಗಣರಾಜ್‌ (ದ್ವಿ.), ಅನನ್ಯಾ ಜೆ. ಉಳ್ಳಾಲ (ತೃ.), ಶಾಸ್ತ್ರೀಯ ಸಂಗೀತ: ಹಾರ್ದಿಕ್‌ ಜೆ. ಪೂಜಾರಿ (ಪ್ರ.), ದಿಲೀಪ್‌ ಕರ್ಕೆರ ಸಸಿಹಿತ್ಲು (ದ್ವಿ.), ಅನುಷ್‌ (ತೃ.), ಸಿತಾರ್‌ ವಾದನ: ಸುಮುಖ್‌ (ಪ್ರ.), ಕೊಳಲು ವಾದನ: ಬಿ. ಎಸ್‌. ಕಿಶನ್‌ (ಪ್ರ.), ಕೆ.ಎಸ್‌. ಗುರುಕಿರಣ್‌ (ದ್ವಿ.), ವಿಖ್ಯಾತ್‌ (ತೃ.), ಮೃದಂಗ: ಬಿ.ಎಸ್‌. ಕಿಶನ್‌ (ಪ್ರ.).

Advertisement

Udayavani is now on Telegram. Click here to join our channel and stay updated with the latest news.

Next