Advertisement

ಮೀಸಲಾತಿ ಹೆಚ್ಚಳ: ಶಾಸಕ ಮುನವಳ್ಳಿ ನೇತೃತ್ವದಲ್ಲಿ ಸಂಭ್ರಮಾಚರಣೆ

09:57 PM Oct 08, 2022 | Team Udayavani |

ಗಂಗಾವತಿ :ಎಸ್ಸಿ ಎಸ್ಟಿ ವರ್ಗಗಳಿಗೆ ಮೀಸಲಾತಿಯನ್ನು ಹೆಚ್ಚು ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಶಾಸಕ ಮುನವಳ್ಳಿ ಮಾತನಾಡಿ ಹಲವು ದಶಕಗಳ ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಬೇಡಿಕೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಪ್ರಾಮಾಣಿಕವಾಗಿ ಮಾಡಿದೆ ಇದರಿಂದ ಎಸಿ ಶೇ. 17 ರಷ್ಟು ಎಸ್ ಟಿ ಶೇ. 7 ರಷ್ಟು ಮೀಸಲಾತಿ ಹೆಚ್ಚು ಪಡೆಯಲಿದ್ದು ಇದರಿಂದ ಎಸ್ಸಿ ಎಸ್ಟಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ.ಶೈಕ್ಷಣಿಕ ಮತ್ತು ಉದ್ಯೋಗದ ದೃಷ್ಟಿಯಿಂದ ಈ ಮೀಸಲಾತಿ ಹೆಚ್ಚಳ ಅತ್ಯಂತ ಸ್ವಾಗತವಾಗಿದೆ ಇದರಿಂದ ಎಸ್ಸಿ ಎಸ್ಟಿ ಸಮುದಾಯಗಳ ಯುವಕರು ಹೆಚ್ಚಿನ ಮಟ್ಟದಲ್ಲಿ ಶೈಕ್ಷಣಿಕ ಮತ್ತು ಉದ್ಯೋಗ ಪಡೆಯಲಿದ್ದಾರೆ ಜತೆಗೆ ಸರಕಾರದ ಸೌಲಭ್ಯಗಳನ್ನು ಈ ಜನಾಂಗಕ್ಕೆ ಮೀಸಲಾತಿ ಅನ್ವಯ ಕಲ್ಪಿಸುವುದರಿಂದ ಆರ್ಥಿಕವಾಗಿ ಈ ಸಮುದಾಯಗಳು ಪ್ರಬಲವಾಗಿವೆ .ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ವಪಕ್ಷಗಳ ಸಭೆ ಕರೆದು ಇದರಲ್ಲಿ ತೀರ್ಮಾನ ಕೈಗೊಳ್ಳುವ ಮೂಲಕ ರಾಜ್ಯ ಸರ್ಕಾರ ಪಕ್ಷಾತೀತ ಮತ್ತು ಜಾತ್ಯತೀತವಾಗಿ ವರ್ತನೆ ಮಾಡಿದೆ ಬಿಜೆಪಿ ಬದ್ಧತೆ ಇದಾಗಿದ್ದು ಮುಂಬರುವ ದಿನಗಳಲ್ಲಿ ಬಿಜೆಪಿಗೆ ಇನ್ನಷ್ಟು ಶಕ್ತಿ ಲಭಿಸಲಿದೆ.ಹಲವು ದಶಕಗಳ ಕಾಲ ರಾಜ್ಯಭಾರ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚುವರಿ ಮಾಡುವ ಕುರಿತು ಭರವಸೆ ನೀಡುತ್ತಾ ಹೋಗಿದ್ದವು ವಿನಃ ಕಾರ್ಯರೂಪಕ್ಕೆ ತರಲಿಲ್ಲ ಬಿಜೆಪಿ ಈ ಕಾರ್ಯ ಮಾಡಿದ್ದು ಸರ್ವ ಕ್ಷೇತ್ರಗಳ ಸ್ವಾಗತ ಲಭ್ಯವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜೋಗದ ಹನುಮಂತಪ್ಪ ನಾಯಕ ದಲಿತ ಮುಖಂಡ ಮರಿಯಪ್ಪ ಕುಂಟೋಜಿ , ರಮೇಶ್ ನಾಯಕ ,ತಿಪ್ಪೇರುದ್ರಸ್ವಾಮಿ, ಸಿಂಗನಾಳ ವಿರೂಪಾಕ್ಷಪ್ಪ ,ಎಚ್ ಗಿರೇಗೌಡ ,ಲಕ್ಷ್ಮಣ ನಾಯಕ ರಾಂಪುರ್ ,ಕಾಶೀನಾಥ್ ಚನ್ನಪ್ಪ ಮಳಗಿ ,ಕೆ ವೆಂಕಟೇಶ್ ಜಂತಗಲ್ ,ಆದೋನಿ ಸುಕುಮಾರ್ ,ಯಮನೂರ ಚೌಡ್ಕಿ ಬಸೆಟ್ಟಿ ನಾಯಕ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next