Advertisement

ಜಿಲ್ಲೆಯಲ್ಲಿ ಆನ್‌ಲೈನ್‌ ವಿದ್ಯುತ್‌ ಬಿಲ್‌ ಪಾವತಿ ಹೆಚ್ಚಳ

10:33 PM Jan 19, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಅನಂತರ ಸರದಿ ಸಾಲಿನಲ್ಲಿ ನಿಂತು ವಿದ್ಯುತ್‌ ಬಿಲ್‌ ಪಾವತಿಸುವ ಪದ್ಧತಿಯಿಂದ ದೂರ ಉಳಿದ ಗ್ರಾಹಕರು, ಆನ್‌ಲೈನ್‌ ಮೂಲಕ ಬಿಲ್‌ ಪಾವತಿಗೆ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ.

Advertisement

1.99 ಲಕ್ಷ ಮಂದಿಯಿಂದ ಪಾವತಿ  :

ಜಿಲ್ಲೆಯಲ್ಲಿ 2020ರ ಡಿಸೆಂಬರ್‌ ಅಂತ್ಯದಲ್ಲಿ ಎಟಿಪಿ ಮೂಲಕ 1,42,958, ಆರ್‌ಟಿಜಿಎಸ್‌ 3,225, ಪೇಟಿಎಂ 34,108, ಒನ್‌ ಕರ್ನಾಟಕ (ಕೆ-ಓನ್‌) 595, ಭಾರತ್‌ ಬಿಲ್‌ ಪೇ 6,384, ಗ್ರಾಮೀಣ ಎನ್‌ಎಸಿಎಚ್‌ 12,639 ಸೇರಿದಂತೆ ಒಟ್ಟು 1.99ಲಕ್ಷ ಮಂದಿ ಆನ್‌ಲೈನ್‌ ಮೂಲಕ ಬಿಲ್‌ ಪಾವತಿಸಿದ್ದಾರೆ. ಕಳೆದೆರಡು ವರ್ಷಕ್ಕೆ ಹೋಲಿಕೆ ಮಾಡಿದರೆ ಕೋವಿಡ್ ಅನಂತರ ಆನ್‌ಲೈನ್‌ ಬಿಲ್‌ ಪಾವತಿ ಹೆಚ್ಚಳವಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ವರ್ಷ ಕಡಿಮೆ  :

ಜಿಲ್ಲೆಯಲ್ಲಿ 2018ರಲ್ಲಿ ತಿಂಗಳೊಂದರಲ್ಲಿ ನೆಫ್ಟ್ ಮೂಲಕ 2,027, ಪೇಟಿಎಂ 4,179, ಮೊಬೈಲ್‌ ಆ್ಯಪ್‌ 83, ಎಟಿಪಿ 1,28,425, ಎನ್‌ಎಸಿಎಚ್‌- 2,500, ಕರ್ನಾಟಕ ಓನ್‌- 557 ಸೇರಿದಂತೆ ವಿವಿಧ ಆ್ಯಪ್‌ಗ್ಳ ಮುಖಾಂತರ ಒಟ್ಟು 1.37 ಲಕ್ಷ ಬಿಲ್‌ಗ‌ಳನ್ನು ಆನ್‌ಲೈನ್‌ ಮೂಲಕ ಹಣ ಪಾವತಿಸಿದ್ದಾರೆ. 2019ರ ಡಿಸೆಂಬರ್‌ ಅಂತ್ಯಕ್ಕೆ ಗ್ರಾಹಕರು ನೆಫ್ಟ್ -5076, ಪೇಟಿಎಂ 4,754, ಎಟಿಪಿ 1,60,425 ಹಾಗೂ ವಿವಿಧ ಮೊಬೈಲ್‌ ಆ್ಯಪ್‌ 80, ಎನ್‌ಎಸಿಎಚ್‌ 2,500, ಕೆ-ಓನ್‌ 557 ಬಿಲ್‌ ಸೇರಿದಂತೆ ಒಟ್ಟು 1.60 ಲಕ್ಷ ಬಿಲ್‌ಗ‌ಳು ಆನ್‌ಲೈನ್‌ ಮೂಲಕ ಪಾವತಿಸಿದ್ದರು.

Advertisement

ಪೇಟಿಎಂ ಪಾವತಿ ಹೆಚ್ಚಳ :

ಎನಿ ಟೈಮ್‌ ಪೇಮೆಂಟ್‌ ಯಂತ್ರದ (ಎಪಿಟಿ) ಮೂಲಕ ಉಡುಪಿ, ಮಣಿಪಾಲ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಉಪಕೇಂದ್ರದಲ್ಲಿ ಸುಮಾರು 92,958 ಹಾಗೂ ಕುಂದಾಪುರ, ಕೋಟ, ಬೈಂದೂರು, ಶಂಕರನಾರಾಯಣ, ತಲ್ಲೂರಿನಲ್ಲಿ ಸುಮಾರು 50,000 ಗ್ರಾಹಕರು ವಿದ್ಯುತ್‌ ಬಿಲ್‌ ಪಾವತಿಸುತ್ತಿದ್ದಾರೆ. ಈ ಬಾರಿ ಎಟಿಪಿಗಿಂತ ಪೇ ಎಂಟಿಎಂನಲ್ಲಿ ಬಿಲ್‌ ಪಾವತಿ ಮಾಡುವವರ ಸಂಖ್ಯೆ ಏಕಾಏಕಿಯಾಗಿ 3,000ದಿಂದ 34,000ಕ್ಕೆ ಏರಿಕೆಯಾಗಿದೆ.

55 ಕೋ.ರೂ ವಿದ್ಯುತ್‌ ಬಳಕೆ  :

ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ ಸರಾಸರಿ 55 ಕೋ. ರೂ. ಹಾಗೂ ವಾರ್ಷಿಕ 660 ಕೋ.ರೂ. ಮೊತ್ತದ ವಿದ್ಯುತ್‌ ಬಿಲ್‌ ಪಾವತಿಯಾಗುತ್ತಿದೆ. ಮೆಸ್ಕಾಂ ವಿದ್ಯುತ್‌ ಬಿಲ್‌ ಪಾವತಿಯಲ್ಲಿ ಶೇ. 100 ರಷ್ಟು ಪ್ರಗತಿಯನ್ನು ಸಾಧಿಸಿದೆ.

ವಿದ್ಯುತ್‌ ಬಳಕೆ  :

ಮಣಿಪಾಲದಲ್ಲಿ ಸುಮಾರು 13 ಮಿಲಿಯನ್‌ ಯುನಿಟ್‌, ಉಡುಪಿಯಲ್ಲಿ 13 ಮಿಲಿಯನ್‌ ಯುನಿಟ್‌, ಬ್ರಹ್ಮಾವರದಲ್ಲಿ 5.7 ಮಿಲಿಯನ್‌ ಯುನಿಟ್‌, ಕಾಪುವಿನಲ್ಲಿ 5.4 ಮಿಲಿಯನ್‌ ಯುನಿಟ್‌, ಕೋಟದಲ್ಲಿ 2.9 ಮಿಲಿಯನ್‌ ಯುನಿಟ್‌, ಕುಂದಾಪುರದಲ್ಲಿ 6.3, ಬೈಂದೂರು 2.6 ಮಿಲಿಯನ್‌ ಯುನಿಟ್‌ ಪ್ರತಿ ತಿಂಗಳು ಸುಮಾರು 66 ಮಿಲಿಯನ್‌ ಯುನಿಟ್‌ ವಿದ್ಯುತ್‌ ಬಳಕೆಯಾಗುತ್ತಿದೆ.

ಬಿಲ್‌ ಪಾವತಿಯಲ್ಲಿ ಪ್ರಗತಿ :

ವಿದ್ಯುತ್‌ ಬಿಲ್‌ ಪಾವತಿಯಲ್ಲಿ ಜಿಲ್ಲೆ ಶೇ.100 ರಷ್ಟು ಪ್ರಗತಿ ಸಾಧಿಸಿದೆ. ಕೆಲವೊಂದು ಪ್ರದೇಶದಲ್ಲಿ ಜನರು ಸೋಲಾರ್‌ ಆಳವಡಿಸಿಕೊಳ್ಳುವ ಮೂಲಕ ಸ್ವಾಲಂಬಿಗಳಾಗಿದ್ದಾರೆ. ಕ‌ಳೆದ ವರ್ಷಕ್ಕಿಂತ ಈ ಬಾರಿ ಆನ್‌ಲೈನ್‌ ಮೂಲಕ ವಿದ್ಯುತ್‌ ಬಿಲ್‌ ಪಾವತಿ ಮಾಡುವ ಗ್ರಾಹಕರ ಸಂಖ್ಯೆ ಶೇ.40 ಹೆಚ್ಚಾಗಿದೆ.-ನರಸಿಂಹ ಪಂಡಿತ್‌, ಮೆಸ್ಕಾಂ ಅಧೀಕ್ಷಕ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next