Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಯಲು ಸೀಮೆ ಪ್ರದೇಶವಾಗಿರುವುದರಿಂದ ಯಾವುದೇ ನದಿ ಮೂಲಗಳಿಲ್ಲದೆ ಮಳೆ ಆಶ್ರೀತವಾಗಿಯೇ ರೈತರು ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಬೆಳೆಯುತ್ತಿದ್ದಾರೆ. ಈ ಬಾರಿ ಮಳೆ ಕೊರತೆಯಿಂದ ರಾಗಿ ಇಳುವರಿ ಕುಸಿತವಾಗಿದ್ದು, ರೈತರು ಕೈ ಸುಟ್ಟಿಕೊಳ್ಳುವಂತಾಗಿದೆ.
Related Articles
Advertisement
ರಾಗಿ ಬೆಳೆ ಹಾನಿ: ಜಿಲ್ಲೆಯ ನಾಲ್ಕು ತಾಲೂಕಿನಲ್ಲೂ ವ್ಯಾಪಕವಾಗಿ ರಾಗಿ ಬೆಳೆಯುತ್ತಾರೆ. ಪ್ರತಿ ವರ್ಷ ಸುಮಾರು 60,000 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯುತ್ತಾರೆ. ಈ ಬಾರಿ ಮಳೆ ಇಲ್ಲದೆ ಬರ ವ್ಯಾಪಕವಾಗಿರುವುದರಿಂದ ಸುಮಾರು 40 ಸಾವಿರಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆ ಹಾನಿಯಾಗಿದೆ. ಸರ್ಕಾರ ಕೂಡ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿ ಪ್ರಾರಂಭಿಸಿತು. ಕಳೆದ ಬಾರಿಗಿಂತ ಈ ಬಾರಿ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿತ್ತು. ಈ ಬಾರಿ ನಿರೀಕ್ಷೆಗೆ ಹೋಲಿಸಿದರೆ, ನೋಂದಣಿಯೂ ಕೂಡ ಇಳಿಕೆಯಾಗಿದೆ. ಬೆಂ.ಗ್ರಾ ಜಿಲ್ಲೆಯಲ್ಲಿ ಈ ಬಾರಿ 4 ಲಕ್ಷ ಕ್ವಿಂಟಲ್ ರಾಗಿ ಖರೀದಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಈ ಬಾರಿ ಕೇವಲ 3,20,000 ಕ್ವಿಂಟಲ್ ರಾಗಿ ಖರೀದಿಗೆ ಜಿಲ್ಲೆಯ 16 ಸಾವಿರ ರೈತರು ನೋಂದಣಿ ಮಾಡಿದ್ದಾರೆ. ರಾಗಿ ಖರೀದಿ ಕೂಡ ತಡವಾಗುತ್ತಿದೆ.
ಬೆಂ.ಗ್ರಾ ಜಿಲ್ಲೆಯಲ್ಲಿ ಈ ಬಾರಿ 4 ಲಕ್ಷ ಕ್ವಿಂಟಲ್ ರಾಗಿಗೆ ನೋಂದಣಿಯ ನಿರೀಕ್ಷೆ ಇತ್ತು. 3,20,000 ಕ್ವಿಂಟಲ್ ರಾಗಿಗೆ ಮಾತ್ರ ನೋಂದಣಿಯಾಗಿದೆ. ಈ ಪ್ರಮಾಣ ಖರೀದಿಗೆ ಬೆಳೆ ಎಷ್ಟಾಗಲಿದೆ ಎಂಬುದನ್ನು ನಿರೀಕ್ಷೆಯಲ್ಲಿದ್ದೇವೆ. ಮಳೆ ಇಲ್ಲದಿರುವುದರಿಂದ ರಾಗಿ ಇಳುವರಿ ಕಡಿಮೆಯಾಗಿದೆ. ಮುಂದಿನ ವಾರದಲ್ಲಿ ಖರೀದಿ ಪ್ರಾರಂಭಿ ಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.-ಪ್ರವೀಣ್, ಉಪ ನಿರ್ದೇಶಕ, ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ, ಬೆಂ.ಗ್ರಾ ಜಿಲ್ಲೆ