Advertisement
ಮಾಧ್ಯಮ ಬಳಕೆಯಲ್ಲಿ ಹೆಚ್ಚಳ ಭಾರತದ ಕುಟುಂಬಗಳಲ್ಲಿ ಟಿವಿ, ಇಂಟರ್‌ನೆಟ್, ರೇಡಿಯೋ ಸೇರಿದಂತೆ ಇತರ ಮಾಧ್ಯಮಗಳ ಬಳಕೆಯಲ್ಲಿ ಶೇ.22ರಷ್ಟು ಏರಿಕೆ ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ. ಟಿವಿ, ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ಗಳು ಹಾಗೂ ಒಟಿಟಿಯಲ್ಲಿ ವಿವಿಧ ಬಗೆಯ ವಿಷಯಗಳನ್ನು ನೋಡಲು ಜನರು ಆಸಕ್ತಿ ತೋರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಡಿಜಿಟಲ್ ಮಾಧ್ಯಮದ ಭರಾಟೆಯ ನಡುವೆಯೂ ಶೇ.40ರಷ್ಟು ಬಳಕೆ ದಾರರು ಸಾಂಪ್ರದಾಯಿಕ ಮಾಧ್ಯಮ ಹಾಗೂ ಕೇಬಲ್ ಚಂದಾದಾರಿಕೆಯನ್ನೇ ಆಯ್ಕೆ ಮಾಡಿದ್ದಾರೆ. ಶೇ.25ರಷ್ಟು ಮಂದಿ ಸಾಂಪ್ರದಾಯಿಕ ಮಾಧ್ಯಮದಿಂದ, ಡಿಜಿಟಲ್ ಮಾಧ್ಯಮದ ಕಡೆಗೆ ಒಲವನ್ನು ತೋರಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಶೇ. 19ರಷ್ಟು ಮಂದಿ ಟಿವಿಯಲ್ಲಿ ಧಾರಾವಾಹಿಗಳನ್ನು ನೋಡಲು ಇಚ್ಛಿಸು ತ್ತಾರೆ. ಇದರಲ್ಲಿ ವಯಸ್ಸುವಾರು ವೀಕ್ಷಣೆ ಯನ್ನು ಗಮನಿಸಿದರೆ ಶೇ.10 ರಷ್ಟು 16-60 ವರ್ಷದವರು ಹಾಗೂ ಶೇ. 21 ರಷ್ಟು 60ಕ್ಕಿಂತ ಅಧಿಕ ವರ್ಷದವರು ಧಾರಾವಾಹಿ ಗಳನ್ನು ವೀಕ್ಷಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಜತೆಗೆ ಶೇ.20 ಮಂದಿ ಟಿವಿಯಲ್ಲಿ ಹಾಗೂ ಇತರ ಶೇ. 20 ಮಂದಿ ಒಟಿಟಿಯಲ್ಲಿ ಸಿನೆಮಾವನ್ನು ನೋಡಲು ಇಷ್ಟಪಡುತ್ತಾರೆ. ಅದರಲ್ಲೂ ಶೇ. 21ರಷ್ಟು 18-25 ವರ್ಷದವರು, ಶೇ. 20ರಷ್ಟು 26-50 ವರ್ಷದವರು ಹಾಗೂ ಶೇ.19ರಷ್ಟು 51-60 ವರ್ಷ ದವರು ಟಿವಿಯಲ್ಲೇ ಸಿನೆಮಾ ನೋಡಲು ಬಯಸುತ್ತಾರೆ.
Related Articles
ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟಿವಿಯಲ್ಲಿ ಎರಡರಲ್ಲೂ ಸಮಾನ ಆಸಕ್ತಿಯಿಂದ ಕ್ರಿಕೆಟ್ ಹಾಗೂ ಇತರ ಕ್ರೀಡೆಯನ್ನು ವೀಕ್ಷಿಸಿರುವುದು ಸಮೀಕ್ಷೆಯ ವೇಳೆ ತಿಳಿದು ಬಂದಿದೆ. ಶೇ.22ರಷ್ಟು ಮಂದಿ ಎರಡೂ ಮಾಧ್ಯಮದಲ್ಲಿ ಕ್ರೀಡಾ ಪಂದ್ಯಗಳನ್ನು ವೀಕ್ಷಿಸಿದ್ದಾರೆ.
Advertisement
ಶೇ.31 ಮಂದಿ 2023ರ ವಿಶ್ವಕಪ್ ಅನ್ನು ಉತ್ಸಾಹದಿಂದ ಟಿವಿಯಲ್ಲಿ ವೀಕ್ಷಿಸಿದ್ದಾರೆ. ಜತೆಗೆ ಶೇ.22 ಮಂದಿ ಮೊಬೈಲ್ ಮೂಲಕ ಪಂದ್ಯಗಳನ್ನು ವೀಕ್ಷಿಸಿದ್ದಾರೆ.
ಸಿಎಸ್‌ಐ ಐದು ಉಪ ಸೂಚ್ಯಂಕಗಳನ್ನು ಹೊಂದಿದ್ದು, ಅವುಗಳ ಆಧಾರದ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ. ಮನೆ ನಿರ್ವಹಣೆ ವೆಚ್ಚ
ಆವಶ್ಯಕ ಮತ್ತು ಆವಶ್ಯಕೇತರ ಉತ್ಪನ್ನ ಗಳ ಖರೀದಿಗಾಗಿ ಮಾಡಿದ ಖರ್ಚು
ಆರೋಗ್ಯ ರಕ್ಷಣೆಗಾಗಿನ ವೆಚ್ಚ
ಮಾಧ್ಯಮ ಬಳಕೆಯ ಅಭ್ಯಾಸಗಳು
ಪ್ರವಾಸ, ಮನೋರಂಜನೆಗಾಗಿ ಮಾಡಿದ ವೆಚ್ಚ ಸಮೀಕ್ಷೆಯ ಇತರ ಪ್ರಮುಖ ಅಂಶಗಳು
ಕುಟುಂಬಗಳ ಒಟ್ಟಾರೆ ಮನೆ ಖರ್ಚಿನಲ್ಲಿ ಶೇ. 58 ಏರಿಕೆಯಾಗಿದೆ.
ಕುಟುಂಬಗಳು ಆವಶ್ಯಕ ವಸ್ತುಗಳ ಮೇಲೆ ವ್ಯಯಿಸುವ ಖರ್ಚಿನಲ್ಲಿ ಶೇ. 48 ಏರಿಕೆ.
ಎಸಿ, ಕಾರು, ಫ್ರಿಡ್ಜ್ನಂತಹ ಅಗತ್ಯೇತರ ವಸ್ತುಗಳ ಖರೀದಿಗಾಗಿ ಮಾಡಿದ ವೆಚ್ಚದಲ್ಲಿ ಶೇ. 13 ಏರಿಕೆ ಕಂಡಿದೆ.
ಆರೋಗ್ಯ ಸಂಬಂಧಿ ವಸ್ತುಗಳ ಖರೀದಿಗಾಗಿ ಕುಟುಂಬಗಳು ಹೆಚ್ಚಿನ ಮೊತ್ತವನ್ನು ವ್ಯಯಿಸಿದ್ದು, ಶೇ. 40ರಷ್ಟು ಹೆಚ್ಚಳವಾಗಿದೆ. ವಿಧಾತ್ರಿ ಭಟ್, ಉಪ್ಪುಂದ