Advertisement
ಅಂಚೆ ಕಚೇರಿಯ 3 ವರ್ಷ ಅವಧಿ ಠೇವಣಿ ಮೇಲಿನ ಬಡ್ಡಿದರವನ್ನು ಶೇ.7 ರಿಂದ ಶೇ.7.1ಕ್ಕೆ ಏರಿಕೆ ಮಾಡಿದೆ. ಜತೆಗೆ ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿ ಮೇಲಿನ ಬಡ್ಡಿದರವನ್ನು ಶೇ.8ರಿಂದ ಶೇ.8.2ಕ್ಕೆ ಹೆಚ್ಚಳಗೊಳಿಸಿದೆ. ಉಳಿದಂತೆ ಎಲ್ಲ ಉಳಿತಾಯ ಯೋಜನೆಗಳ (ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್, ಕಿಸಾನ್ ವಿಕಾಸ್ ಪತ್ನ, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸೇರಿದಂತೆ) ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಕುರಿತಂತೆ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದ್ದು, 2022-23ರ ಜನವರಿ 1 ರಿಂದ ಮಾರ್ಚ್ 31ರ ವರೆಗಿನ ತ್ತೈಮಾಸಿಕದ ಅವಧಿಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಿಸಲಾಗಿದೆ. ಈ ಹಿಂದೆ ಅಂಚೆ ಕಚೇರಿ ಉಳಿತಾಯ ಯೋಜನೆಯಲ್ಲಿ 2 ಮತ್ತು 3 ವರ್ಷದ ಠೇವಣಿಗಳಿಗೆ ಏಕರೂಪದ ಬಡ್ಡಿದರ ಇತ್ತು. ಇದೀಗ ಮೂರು ವರ್ಷದ ಠೇವಣಿಗೆ ಬಡ್ಡಿದರ ಹೆಚ್ಚಿಸಲಾಗಿದೆ ಜತೆಗೆ ಸುಕನ್ಯಾ ಸಮೃದ್ಧಿ ಯೋಜನೆ 20 ಬೇಸಿಸ್ ಪಾಯಿಂಟ್‌ನಲ್ಲಿ ಬಡ್ಡಿದರ ಹೆಚ್ಚಿಸಿದ್ದೇವೆ ಎಂದಿದೆ.
ಶೇ.8 ಅಕ್ಟೋಬರ್ ಡಿಸೆಂಬರ್
ಶೇ.8.2 ಜನವರಿ ಮಾರ್ಚ್ ಅಂಚೆ ಕಚೇರಿ 3 ವರ್ಷ ಠೇವಣಿ ತ್ತೈಮಾಸಿಕ ಬಡ್ಡಿದರ
ಶೇ.7 ಅಕ್ಟೋಬರ್‌ಡಿಸೆಂಬರ್
ಶೇ.7.1 ಜನವರಿ ಮಾರ್ಚ್