Advertisement

ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ

06:15 AM Jun 17, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಸ್ವಲ್ಪ ತಗ್ಗಿದೆ. ಆದರೆ, ಶನಿವಾರವೂ ಕೆಲವೆಡೆ ಸಾಧಾರಣ ಮಳೆಯಾಗಿದ್ದು, ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

Advertisement

ಈ ಮಧ್ಯೆ, ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಮೂಲ್ಕಿ, ಕೋಟ ಮತ್ತು
ಭಾಗಮಂಡಲದಲ್ಲಿ ರಾಜ್ಯದಲ್ಲಿಯೇ ಅಧಿಕ, 5 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.

ರಾಜಧಾನಿ ಬೆಂಗಳೂರಿನ ಹಲವೆಡೆ ಸಂಜೆ ವೇಳೆ ಮಳೆಯಾಯಿತು. ಇದರಿಂದಾಗಿ ವಾಹನ ಸವಾರರು
ಪರದಾಡುವಂತಾಯಿತು. ಈ ಮಧ್ಯೆ, ಕೊಡಗಿನಲ್ಲಿ ಸುರಿದ ಮಳೆಯಿಂದಾಗಿ ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚಿದೆ. ಹುಣಸೂರು ತಾಲೂಕಿನ ಹನಗೋಡು, ಕಟ್ಟೆಮಳಲವಾಡಿ ಹಾಗೂ ಶಿರಿಯೂರು ಅಣೆಕಟ್ಟೆಯ ಮೇಲೆ ನೀರು ಭೋರ್ಗರೆದು ಹರಿಯುತ್ತಿದೆ. ನಗರದ ಮಧ್ಯಭಾಗದ ನದಿಯಲ್ಲಿ ಬೆಳೆದಿದ್ದ ಅಂತರಗಂಗೆ ಕೊಚ್ಚಿ ಹೋಗುತ್ತಿದೆ.

ಮಂಗಳೂರಿನ ಬೋಳಾರದಲ್ಲಿ ಶನಿವಾರ ಮಧ್ಯಾಹ್ನ ಹಳೆಯ ಮನೆಯೊಂದರ ಛಾವಣಿ ಕುಸಿದು ಬಿದ್ದಿದ್ದು,ತಾಯಿ ಮತ್ತು ಮಗು ಅಪಾಯದಿಂದ ಪಾರಾಗಿದ್ದಾರೆ.

ಇದೇ ವೇಳೆ, ಮಾಗಡಿ, ಧರ್ಮಸ್ಥಳ, ಸುಳ್ಯ, ಅಂಕೋಲಾ, ವಿರಾಜಪೇಟೆ, ಆಗುಂಬೆ, ಗೋಕರ್ಣ, ಕ್ಯಾಸಲ್‌ರಾಕ್‌, ಹುನಗುಂದ, ಇಳಕಲ್‌, ಸೇಡಂ ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ. 

Advertisement

ಈ ಮಧ್ಯೆ, ರಾಜ್ಯದ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವೆಡೆ ಇನ್ನೆರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

ಜಲಾಶಯ ನೀರಿನಮಟ್ಟ
ಇಂದಿನ ಮಟ್ಟ ಗರಿಷ್ಠ ಮಟ್ಟ

ಲಿಂಗನಮಕ್ಕಿ 1764.50 ಅಡಿ 1819 ಅಡಿ
ಕೆಆರ್‌ಎಸ್‌ 99.60 ಅಡಿ 124.80 ಅಡಿ
ಆಲಮಟ್ಟಿ 508.17ಮೀ 519.600 ಮೀ.
ತುಂಗಭದ್ರಾ 1597.19 ಅಡಿ 1633 ಅಡಿ

Advertisement

Udayavani is now on Telegram. Click here to join our channel and stay updated with the latest news.

Next