Advertisement
ತಾಲೂಕಿನ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದನೇ ತರಗತಿಗೆ ದಾಖಲಾತಿ ಕಡಿಮೆಯಾದರೂ ಸರಕಾರಿ ಶಾಲೆಗಳಲ್ಲಿ ಮಾತ್ರ ದಾಖಲಾತಿ ಏರಿಕೆಯಾಗಿದೆ. ಕಳೆದ ವರ್ಷ ತಾಲೂಕಿನ 180 ಸರಕಾರಿ ಶಾಲೆಗಳಿಗೆ 1,883 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಬಾರಿ 1,903 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ತಾಲೂಕಿನ ಒಟ್ಟು 180 ಸರಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಕಳೆದ ಬಾರಿ ಚೆರು, ಕಲ್ಯಾರಬೈಲು, ಶಿರಾಡಿ, ಮಚ್ಚಿಮಲೆ ಹೀಗೆ 4 ಶಾಲೆಗಳಲ್ಲಿ ಒಂದನೇ ತರಗತಿಗೆ ಯಾವುದೇ ವಿದ್ಯಾರ್ಥಿಗಳು ದಾಖಲಾಗಿರಲಿಲ್ಲ. ಆದರೆ ಈ ಬಾರಿ ನನ್ಯ ಶಾಲೆಗೆ ಮಾತ್ರ ಶೂನ್ಯ ದಾಖಲಾತಿಯಾಗಿದೆ. ಕಳೆದ ಬಾರಿ ಹಾರಾಡಿ ಶಾಲೆಗೆ ಅತಿ ಹೆಚ್ಚು 57 ವಿದ್ಯಾರ್ಥಿಗಳು ದಾಖಲಾಗಿದ್ದು, ಒಟ್ಟು ಹಿರೇಬಂಡಾಡಿ,
Related Articles
Advertisement
ವಯಸ್ಸಿನ ಮಿತಿ ಕಾರಣ?2017-18ನೇ ಸಾಲಿನಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳು ದಾಖಲಾಗಬೇಕಾದರೆ ವಿದ್ಯಾರ್ಥಿಗಳ ವಯಸ್ಸು 5 ವರ್ಷ 6 ತಿಂಗಳಾಗಿರಬೇಕು ಎಂದು ಸರಕಾರ ಆದೇಶಿಸಿದ್ದು, ಅದು ಸರಕಾರಿ ಶಾಲೆಗಳಿಗೆ ಹೊಡೆತ ನೀಡಿತ್ತು. ಆ ರೀತಿ ಬಾಕಿ ಉಳಿದ ವಿದ್ಯಾರ್ಥಿಗಳು ಕಳೆದ ವರ್ಷ ಹಾಗೂ ಈ ವರ್ಷ ವಯಸ್ಸಿನ ಮಿತಿ ದಾಟಿ ನಿಯಮದ ಪ್ರಕಾರ ಸರಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ. ಆಂಗ್ಲ ಶಿಕ್ಷಣದಿಂದ ಏರಿಕೆಸರಕಾರವು ಈ ಬಾರಿ ಆಯ್ದ ಸರಕಾರಿ ಶಾಲೆಗಳ ಒಂದನೇ ತರಗತಿಯಲ್ಲಿ ಆಂಗ್ಲ ಶಿಕ್ಷಣ ಆರಂಭಿಸಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಜತೆಗೆ ಕಳೆದೆರಡು ವರ್ಷಗಳಲ್ಲಿ ಒಂದನೇ ತರಗತಿಗೆ ವಯಸ್ಸಿನ ಮಿತಿಯ ಕಾರಣದಿಂದಲೂ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. –
ವಿಷ್ಣುಪ್ರಸಾದ್ ಸಿ. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
ಸರಕಾರಿ ಶಾಲೆ:
1ನೇ ತರಗತಿ
2018-19ರ ದಾಖಲಾತಿ-1,883 2019-20ರ ದಾಖಲಾತಿ-1,903 ಈ ಬಾರಿಯ ಹೆಚ್ಚುವರಿ ದಾಖಲಾತಿ-20
2018-19ರಲ್ಲಿ ತಾಲೂಕಿನ ದಾಖಲಾತಿ
ಒಟ್ಟು ಶಾಲೆಗಳು-314 1-10ನೇ ತರಗತಿಯ ವಿದ್ಯಾರ್ಥಿಗಳು-45,588 1ನೇ ತರಗತಿ ದಾಖಲಾತಿ-4,837
2019-20ರಲ್ಲಿ ತಾಲೂಕಿನ ದಾಖಲಾತಿ
ಕಿರಣ್ ಸರಪಾಡಿ
ಒಟ್ಟು ಶಾಲೆಗಳು-315 1-10ನೇ ತರಗತಿಯ ವಿದ್ಯಾರ್ಥಿಗಳು-47,072 1ನೇ ತರಗತಿ ದಾಖಲಾತಿ-4,507