Advertisement
ಕೇರಳದಲ್ಲಿ ಕೋವಿಡ್ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಶನಿವಾರ ವಿಕಾಸಸೌಧದಲ್ಲಿ ಆರೋಗ್ಯಾಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ಕೋವಿಡ್ ಸೇರಿ ಯಾವುದೇ ವೈರಾಣು ಜ್ವರದ ಲಕ್ಷಣಗಳಿದ್ದರೂ ತಪಾಸಣೆಗೆ ಒಳಪಡಿಸುವಂತೆ ಸೂಚಿ ಸಿದ್ದು, ಹೆಚ್ಚುವರಿ ಆರ್‌ಟಿಪಿಸಿಆರ್ ಕಿಟ್‌ಗಳ ಖರೀದಿಗೂ ಆದೇಶಿಸಲಾಗಿದೆ ಎಂದರು.
Related Articles
ಸರಕಾರಿ ಆಸ್ಪತ್ರೆಗಳಿಗೆ ಮುಂದಿನ 3 ತಿಂಗಳಿಗೆ ಬೇಕಾಗುವಷ್ಟು ಆರ್‌ಟಿಪಿಸಿಆರ್ ಕಿಟ್, ಆರ್‌ಎಟಿ ಕಿಟ್, ವಿಟಿಎಂಗಳನ್ನು ಸರ ಬರಾಜು ಮಾಡುವಂತೆ ರಾಜ್ಯ ವೈದ್ಯಕೀಯ ಸರಬರಾಜುಗಳ ನಿಗಮ (ಕೆಎಸ್‌ಎಂಎಸ್‌ಸಿಎಲ್)ಗೆ ಆದೇಶ ಮಾಡಲಾಗಿದ್ದು, ಆಕ್ಸಿಜನ್, ಐಸಿಯು ಹಾಸಿಗೆ, ಔಷಧಿ, ಮಾಸ್ಕ್ ಇತ್ಯಾದಿ ಇಲ್ಲ ಎನ್ನಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.
Advertisement
ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಪ್ರಸ್ತುತ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ. ಈ ಹಿಂದೆ ಇದಕ್ಕೆಂದೇ ಬೆಂಗಳೂರು ವೈದ್ಯಕೀಯ ಕಾಲೇಜಿನ ಎಚ್‌ಒಡಿ ಡಾ| ರವಿ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ರಚಿಸಿದ್ದು, ಡಿ.19ರ ಮಂಗಳವಾರದಂದು ಸಮಿತಿ ಸಭೆ ನಡೆಸಿ ಮುಂದಿನ ನಿರ್ಣಯಗಳನ್ನು ಕೈಗೊಳ್ಳುವುದಾಗಿ ಸಚಿವರು ಹೇಳಿದರು. ಕೇರಳದಿಂದ ಬರುವ ಎಲ್ಲರನ್ನೂ, ವಿಮಾನ ನಿಲ್ದಾಣ, ರೈಲು ನಿಲ್ದಾಣದಿಂದ ಬರುವ ಎಲ್ಲರನ್ನೂ ಪರೀಕ್ಷೆ ಮಾಡಲು ಹಾಗೂ ಈಗಲೇ ಗಡಿ ಮುಚ್ಚಲು ನಿರ್ಧರಿಸಿಲ್ಲ. ಆತಂಕಪಡಬೇಡಿ. ಎಚ್ಚರಿಕೆಯಿಂದ ಇರೋಣ. ಹಿಂದೆ ಅನುಭವ ಆಗಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
-ದಿನೇಶ್ ಗುಂಡೂರಾವ್, ಸಚಿವ ಭ್ರೂಣ ಹತ್ಯೆ ತಡೆಗೆ 1 ವಾರದಲ್ಲಿ ಟಾಸ್ಕ್ಫೋರ್ಸ್ ರಚನೆ
ಬೆಂಗಳೂರು: ಭ್ರೂಣಹತ್ಯೆ ಪ್ರಕರಣಗಳ ನಿಗ್ರಹ ಹಾಗೂ ನಿರ್ವಹಣೆಗಾಗಿ ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ (ಟಾಸ್ಕ್ ಫೋರ್ಸ್) ರಚಿಸಲು ನಿರ್ಧರಿಸಿದ್ದು, ಕಾನೂನಿನಲ್ಲೂ ಅಗತ್ಯ ಬದಲಾವಣೆ ತರುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಶನಿವಾರ ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಭ್ರೂಣಹತ್ಯೆ ಪ್ರಕರಣಗಳನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 1 ಲಕ್ಷ ರೂ. ಬಹುಮಾನ
ಭ್ರೂಣಹತ್ಯೆ ಪ್ರಕರಣ ಸಂಬಂಧ ಸಾರ್ವಜನಿಕರು ನೀಡುವ ಮಾಹಿತಿಯೂ ಸಹಿತ ಎಲ್ಲದರ ಕಡೆಗೂ ಕಾರ್ಯಪಡೆ ನಿಗಾ ವಹಿಸಬೇಕು. ಭ್ರೂಣಹತ್ಯೆ ಕುರಿತ ನಿರ್ದಿಷ್ಟ ಮತ್ತು ಸ್ಪಷ್ಟ ಮಾಹಿತಿ ನೀಡುವ ಸಾರ್ವಜನಿಕರಿಗೆ ಪ್ರಸ್ತುತ 50 ಸಾವಿರ ರೂ. ಬಹುಮಾನ ನೀಡುತ್ತಿದ್ದು, ಇದನ್ನು 1 ಲಕ್ಷ ರೂ.ಗೆ ಏರಿಕೆ ಮಾಡುವ ಚಿಂತನೆಯೂ ಇದೆ. ಮುಂದಿನ ವಾರದಲ್ಲಿ ಈ ಕುರಿತ ಆದೇಶ ಹೊರಬೀಳಲಿದೆ ಎಂದರು. ವೈದ್ಯರಿಗೆ ಜಾಮೀನು
ಬೈಯಪ್ಪನಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ವೈದ್ಯರಿಗೆ ಜಾಮೀನು ಸಿಕ್ಕಿದೆ. ಅಷ್ಟೇ ಅಲ್ಲದೆ, ಇಲಾಖೆಯ ಕ್ರಮಕ್ಕೂ ಈ ವೈದ್ಯರು ತಡೆಯಾಜ್ಞೆ ತಂದಿದ್ದಾರೆ ಎಂದರು.