ಬೀಜಿಂಗ್: ಸತತ 3ನೇ ದಿನವೂ ಚೀನದಲ್ಲಿ ದಾಖಲೆಯ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಶನಿವಾರ 35 ಸಾವಿರ ಮಂದಿಗೆ ಸೋಂಕು ತಗುಲಿದೆ.
Advertisement
ಇನ್ನು ದೊಡ್ಡಮಟ್ಟದಲ್ಲಿ ಲಾಕ್‌ಡೌನ್‌ನಂಥ ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿರುವ ಸರ್ಕಾರದ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದೆ.
ಹಲವೆಡೆ ಪ್ರತಿಭಟನೆಗಳು ನಡೆದಿದ್ದು, ಚೀನದಲ್ಲಿ ಅಪರೂಪವೆಂಬಂತೆ ಜನರು ಮತ್ತು ಪೊಲೀಸರ ನಡುವೆ ಘರ್ಷಣೆಯೂ ಏರ್ಪಟ್ಟಿದೆ.
ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಸಕ್ತ ತಿಂಗಳು ಚೀನದಲ್ಲಿ 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.