Advertisement
ಬೆಂಗಳೂರಿನ ಹೊರವಲಯದ ಕೋರಮಂಗಲ, ಹೆಬ್ಬಾಳ, ಮೈಸೂರು ರಸ್ತೆ ಸೇರಿ ಹಲವೆಡೆ ಬಾಲಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕೆಲ ಮಕ್ಕಳು ಮೆಜೆಸ್ಟಿಕ್, ಬ್ರಿಗೇಡ್ ರಸ್ತೆ ಸೇರಿದಂತೆ ವಾಣಿಜ್ಯ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ ಎಂದು ಬೆಂಗಳೂರು ಚೈಲ್ಡ್ ಲೈನ್ ವರದಿಯಲ್ಲಿ ತಿಳಿಸಿದೆ. ಬೆಂಗಳೂರು ಚೈಲ್ಡ್ ಲೈನ್, ಮಕ್ಕಳ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕ ಇಲಾಖೆಗೆ ನೀಡಿರುವ ವರದಿ ಪ್ರಕಾರ 2015-16ರಲ್ಲಿ 566, 2016-17ರಲ್ಲಿ 465, 2017-18ರಲ್ಲಿ 481, 2018-19ರಲ್ಲಿ 495 ಹಾಗೂ 2019ರ ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ 226 ಬಾಲ ಕಾರ್ಮಿಕರನ್ನು ಗುರುತಿಸಿದೆ. ಇದರಲ್ಲಿ 37ಕ್ಕೂ ಅಧಿಕ ಮಕ್ಕಳು ಜೀತ ಪದ್ಧತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿಸಿದೆ.
Related Articles
Advertisement
ಕಲಬುರಗಿ ರೈಲು ನಿಲ್ದಾಣದಲ್ಲಿ ಮಕ್ಕಳ ರಕ್ಷಣೆ: ಕಲಬುರಗಿಯ ರೈಲ್ವೆ ಚೈಲ್ಡ್ ಲೈನ್ ವಿಭಾಗ 2018ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 1058, 2019ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 339 ಮಕ್ಕಳನ್ನು ಗುರುತಿಸಿದ್ದು, ಈ ಮಕ್ಕಳಲ್ಲಿ ಕೆಲವರನ್ನು ತಮ್ಮ ಊರಿಗೆ ಕಳುಹಿಸಿದೆ. ಅನಾಥ ಮಕ್ಕಳು ಮತ್ತು ಪೋಷಕರೊಡನೆ ಹೋಗದ ಮಕ್ಕಳನ್ನು ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಇರಿಸಿ ಶಿಕ್ಷಣ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವಾಡಿ ಜಂಕ್ಷನ್‌ನಲ್ಲಿ ಶೀಘ್ರ ರೈಲ್ವೆ ಚೈಲ್ಡ್ ಲೈನ್: ಮಕ್ಕಳ ಹಕ್ಕು ರಕ್ಷಣೆಗಾಗಿ ದೇಶಾದ್ಯಂತ 100 ಜಂಕ್ಷನ್‌ಗಳಲ್ಲಿ ಪ್ರತ್ಯೇಕ ರೈಲ್ವೆ ಚೈಲ್ಡ್ ಲೈನ್ ವಿಭಾಗ ತೆರೆಯಲಾಗಿದ್ದು, ಕರ್ನಾಟಕದಲ್ಲಿ ಈಗಾಗಲೇ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ, ಹುಬ್ಬಳ್ಳಿ ಜಂಕ್ಷನ್, ಕಲಬುರಗಿ, ಬೀದರ್ ಜಂಕ್ಷನ್‌ನಲ್ಲಿ ರೈಲ್ವೆ ಚೈಲ್ಡ್ ಲೈನ್ ವಿಭಾಗ ತೆರೆಯಲಾಗಿದೆ. ವಾಡಿಯಲ್ಲಿಯೂ ರೈಲ್ವೆ ಚೈಲ್ಡ್ ಲೈನ್ ವಿಭಾಗ ತೆರೆಯಲು ರೈಲ್ವೆ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಆರಂಭವಾಗಲಿದೆ. ಈ ವಿಭಾಗದಲ್ಲಿ 24 ಗಂಟೆ 12 ಮಂದಿ ಕೆಲಸ ನಿರ್ವಹಿಸಲಿದ್ದಾರೆ.
ರೈಲ್ವೆ ಚೈಲ್ಡ್‌ಲೈನ್ ಗುರುತಿಸಿದ ಮಕ್ಕಳ ಸಂಖ್ಯೆವರ್ಷ ಯಶವಂತಪುರ ರೈಲು ನಿಲ್ದಾಣ ಮೆಜೆಸ್ಟಿಕ್
2016-17 463 2232
2017-18 393 2227
2018-19 392 1529
2019(ಮೇ.1-ಅ.31) 158 645 ನಗರದಲ್ಲಿ ಬಾಲಕಾರ್ಮಿಕ, ಭಿಕ್ಷಾಟನೆ ಮಾಡುವ ಮಕ್ಕಳ ಸಂಖ್ಯೆ
ವರ್ಷ ಬಾಲಕಾರ್ಮಿಕರು ಭಿಕ್ಷಾಟನೆ
2017-18 481 690
2018-19 495 697
2019 (ಏ.1-ಸೆ30) 226 248 ಶಾಲೆಯಿಂದ ಹೊರಗುಳಿದ, ಭಿಕ್ಷಾಟನೆ ಮಾಡುವ ಮತ್ತು ಬಾಲಕಾರ್ಮಿಕರನ್ನು ಗುರುತಿಸಿ ಹತ್ತಿರದ ಶಾಲೆಗೆ ಸೇರಿಸಲಾಗುತ್ತಿದೆ. ಪ್ರಸಕ್ತ ವರ್ಷ 13 ಸಾವಿರ ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಪ್ರತಿ ತಾಲೂಕಿನಲ್ಲಿಯೂ ಟೆಂಟ್ ಶಾಲೆ, ಮನೆಗೆ ಹೋಗಿ ಪಾಠ ಮಾಡುವ ಕೆಲಸ ಮಾಡಲಾಗುತ್ತಿದೆ.
-ಬಿ.ಉಮಾಶಂಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಕ್ಕಳ ಕೌನ್ಸೆಲಿಂಗ್, ವೈದ್ಯಕೀಯ ತಪಾಸಣೆ ನಡೆಸಿ, ಸಾಮಾಜಿಕ ತನಿಖಾ ವರದಿಯನ್ನು ಸಮಿತಿಯು ಮಕ್ಕಳ ಕಲ್ಯಾಣ ಇಲಾಖೆಗೆ ನೀಡುತ್ತದೆ. ಬಾಲ ನ್ಯಾಯ ಕಾಯ್ದೆ ಪ್ರಕಾರ ಮಕ್ಕಳನ್ನು 4 ತಿಂಗಳಲ್ಲಿ ಅವರ ಮೂಲ ಸ್ಥಳಕ್ಕೆ ಕರೆದೊಯ್ದು ಕುಟುಂಬಕ್ಕೆ ಒಪ್ಪಿಸಬೇಕು. ಆದರೆ, ಪೊಲೀಸ್ ಸಿಬ್ಬಂದಿ ಕೊರತೆಯಿಂದ ಈ ಕೆಲಸ ವಿಳಂಬವಾಗುತ್ತಿದೆ. ಈ ಕಾರ್ಯಕ್ಕೆ ಪ್ರತ್ಯೇಕ ಸಿಬ್ಬಂದಿ ನೀಡಲು ಇಲಾಖೆಗೆ ಪತ್ರ ಬರೆಯಲಾಗಿದೆ.
-ಅಂಜಲಿ ರಾಮಣ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ * ಮಂಜುನಾಥ ಗಂಗಾವತಿ