Advertisement
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ (ಪೋಕ್ಸೋ) ತನಿಖೆ ನಡೆಸುವ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ 2 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದ್ದು, ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ.
Related Articles
Advertisement
18 ವರ್ಷದೊಳಗಿನ ಯಾವುದೇ ಮಕ್ಕಳ ಮೇಲೆ ದೌರ್ಜನ್ಯ ಎಸಗಿದರೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗುತ್ತದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಗಳಲ್ಲಿ ದಾಖಲಾದ ಪೋಕ್ಸೋ ಪ್ರಕರಣಗಳಲ್ಲಿ 38 ಮಂದಿ ಬಾಲಕಿಯರು ದೌರ್ಜನ್ಯಕ್ಕೊಳಗಾದವರು. ಇಬ್ಬರು ಬಾಲಕರು ಇದ್ದಾರೆ. ಇದರಲ್ಲಿ ಸಂತ್ರಸ್ತ ಮಕ್ಕಳೆಲ್ಲರೂ ದ.ಕ ಜಿಲ್ಲೆಯವರೇ ಎಂಬುದು ಕೂಡ ಗಮನಾರ್ಹ.
ಜಾಗೃತಿಯೂ ಹೆಚ್ಚಳ:
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಇಂತಹ ಕೃತ್ಯಗಳು ಹೆಚ್ಚುತ್ತಿರುವ ಸಾಧ್ಯತೆ ಇದೆ. ಆದರೆ ಜನರಲ್ಲಿ ಇಂತಹ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿರುವುದರಿಂದ ದೂರು ದಾಖಲಾಗುತ್ತಿದೆ. ಅಪರಾಧಿಗಳಿಗೆ ಶಿಕ್ಷೆ ಯಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಬಾಲಪರಾಧಿಗಳು ಕೂಡ ಇದ್ದಾರೆ. ಅಂತೆಯೇ ಕಾಯಿದೆಯ ದುರು ಪಯೋಗ ವಾಗದಂತೆ ನೋಡಿಕೊಳ್ಳುವುದು ಕೂಡ ಅಗತ್ಯವಾಗಿರುತ್ತದೆ ಎನ್ನುತ್ತಾರೆ ಪೊಕೊÕà ಪ್ರಕರಣ ಗಳನ್ನು ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು.
ಹೆತ್ತವರೇ ಎಚ್ಚರ :
ಅನೇಕ ಸಂದರ್ಭಗಳಲ್ಲಿ ಬಾಲಕರು, ಬಾಲಕಿಯರು ಏನೂ ಅರಿಯದೆ ಲೈಂಗಿಕ ದೌರ್ಜನ್ಯಕ್ಕೆ ಒಳಪಡುತ್ತಾರೆ. ಇನ್ನು ಕೆಲವೊಮ್ಮೆ ಕುತೂಹಲ, ಸ್ವಯಂ ಆಸಕ್ತಿಯಿಂದ ಇಂತಹ ಕೃತ್ಯದಲ್ಲಿ ತೊಡಗಿ ಆರೋಪಿಗಳಿಗೆ ಸಹಕರಿಸುವ ಅಪಾ ಯಗಳೂ ಇರುತ್ತವೆ. ಹಾಗಾಗಿ ಹೆತ್ತವರು ಮಕ್ಕಳ ಪ್ರತಿಯೊಂದು ನಡವಳಿಕೆ, ಚಟುವಟಿಕೆ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುವುದು ಅಗತ್ಯ ಎನ್ನುತ್ತಾರೆ ಮಾನಸಿಕ ಆರೋಗ್ಯ ತಜ್ಞರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ಲಾಕ್‌ಡೌನ್ ಕೂಡ ಒಂದು ಕಾರಣವಾಗಿರುವ ಸಾಧ್ಯತೆ ಇದೆ. ಸಂಬಂಧಿಕರಿಂದಲೇ ದೌರ್ಜನ್ಯ ನಡೆದಿರುವ ಪ್ರಕರಣಗಳೂ ಇವೆ. ಲಾಕ್‌ಡೌನ್ ಸಂದರ್ಭ ಮನೆಯಲ್ಲೇ ಇದ್ದು ಮಾನಸಿಕವಾಗಿ ದುರ್ಬಲರಾಗಿ, ಅತಿಯಾದ ಮದ್ಯಸೇವನೆ ಮಾಡಿದ ಸಂಬಂಧಿಕರು, ತೀರಾ ಪರಿಚಿತರೇ ಇಂಥ ಕೃತ್ಯ ನಡೆಸಿರುವುದು ವರದಿಯಾಗಿದೆ. ಜತೆಗೆ ಮಕ್ಕಳು ಮೊಬೈಲ್‌ನಲ್ಲಿ ಅಂತರ್ಜಾಲ ಮೂಲಕ ಅಶ್ಲೀಲ ಚಿತ್ರ, ದೃಶ್ಯಗಳನ್ನು ವೀಕ್ಷಿಸಿ ಕುತೂಹಲ ಉಂಟಾಗಿ ಅದು ಅವರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವವರೆಗೂ ಕೊಂಡೊಯ್ದಿರುವ ಸಾಧ್ಯತೆಗಳೂ ಇವೆ. ಹಾಗಾಗಿ ಮಕ್ಕಳು ಶೈಕ್ಷಣಿಕ ಅಥವಾ ಇನ್ನಿತರ ಉದ್ದೇಶಕ್ಕೆ ಆನ್‌ಲೈನ್ ಬಳಕೆ ಮಾಡುವಾಗ ಅದರ ಮೇಲೆ ಹೆತ್ತವರು ನಿಗಾ, ನಿಯಂತ್ರಣ ಹೊಂದಿರುವುದು ಅಗತ್ಯ. –ಡಾ| ರಮಿಳಾ ಶೇಖರ್,
ಮಾನಸಿಕ ಆರೋಗ್ಯತಜ್ಞೆ
ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಅವರ ಇಡೀ ಬದುಕು ಕತ್ತಲಾಗುವ ಅಪಾಯ ವಿರುತ್ತದೆ. ಅದು ದೇಶದ ಮಾನವ ಸಂಪನ್ಮೂಲದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಸರಕಾರವು ವಿಶ್ವದಲ್ಲೇ ಕಠಿನವೆನಿಸಿದ ಪೋಕ್ಸೋ ಕಾಯಿದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯಡಿ ಅಪರಾಧಿಗಳಿಗೆ ಗರಿಷ್ಠ ಜೀವಾವಧಿ ಕಠಿನ ಕಾರಾ ಗೃಹ, ಮರಣದಂಡನೆ ಶಿಕ್ಷೆ ವಿಧಿಸಲು ಕೂಡ ಅವಕಾಶವಿದೆ. -ವಿಜಯ ವಾಸು ಪೂಜಾರಿ, ನ್ಯಾಯವಾದಿ
-ಸಂತೋಷ್ ಬೊಳ್ಳೆಟ್ಟು